ಅಪರೂಪದ ನಕ್ಷತ್ರ ದರ್ಶನಕ್ಕೆ ಮಾಲಿನ್ಯದ ಕಾಟ

0
472

ಒಂದು ಕಾಲದಲ್ಲಿ ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ದಿನ ಕಳೆದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಸ ಸಮಸ್ಯೆ, ಅಪರಾಧ ಇತ್ಯಾದಿಗಳಿಂದ ಅಪಖ್ಯಾತಿಗೆ ಗುರಿಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಇದೀಗ ಮತ್ತೊಂದು ವಿಷಯಕ್ಕೆ ಬೆಂಗಳೂರಿಗರು ಬೇಸರ ಮಾಡಿಕೊಳ್ಳಬೇಕಾಗಿದೆ. ಏ.1ರಿಂದ ಏ.3ರವರೆಗೆ ಭೂಮಿಗೆ ಸಮೀಪವಾಗಿ(21 ದಶಲಕ್ಷ ಕಿಮೀ) ವಿರಳವಾದ ಹಾಗೂ ಹಸಿರು ಬಣ್ಣದ ಧೂಮಕೇತುವೊಂದು ಹಾದುಹೋಗಲಿದೆ. ಆದರೆ, ಮಾಲಿನ್ಯದ ಕಾರಣ ಇದನ್ನು ಬೆಂಗಳೂರಿಗರು ವೀಕ್ಷಿಸಲು ಸಾಧ್ಯವಿಲ್ಲ.

ಕೇವಲ ಬೈನಾಕ್ಯುಲರ್ ಮೂಲಕ ವೀಕ್ಷಿಸುವ ಅವಕಾಶ ಖಗೋಳ ವಿಜ್ಞಾನ ಆಸಕ್ತರಿಗೆ ಲಭಿಸಿದೆ.
ಬೆಂಗಳೂರಿನ ಜವಾಹಾರ್ ಲಾಲ್ ನೆಹರೂ ಖಗೋಲ ವಿಜ್ಞಾನ ಸಂಸ್ಥೆಯ ಜಂಟಿ ನಿರ್ದೇಶಕ ಪ್ರಮೋದ್ ಜಿ. ಗಲಗಲಿ ಪ್ರತಿಕ್ರಿಯಿಸಿದ್ದು, ಉತ್ತರ ಬೆಂಗಳೂರಿನಲ್ಲಿರುವ ನಂದಿ ಬೆಟ್ಟ ಈ ವಿರಳ ಧೂಮಕೇತು ವೀಕ್ಷಣೆಗೆ ಸೂಕ್ತ ಸ್ಥಳವಾಗಿದೆ ಎಂದು ಹೇಳಿದ್ದಾರೆ.

ಆದರೆ, ಸಂಜೆ 6ರಿಂದ ಬೆಳಗ್ಗೆ 6ರವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿಷೇಧವಿರೋ ಕಾರಣ ಈ ಅವಕಾಶವೂ ಕೈತಪ್ಪಿದಂತಾಗಿದೆ.
ನಂದಿ ಬೆಟ್ಟ ಪ್ರವೇಶದ ಸಮಯ ಸಡಿಳಿಕೆ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯವರ ವಿಶೇಷ ಅನುಮತಿ ಬೇಕು ಎಂದು ಪೊಲೀಸರು ಹೇಳಿದ್ದಾರೆ.
ಈ ಆಕಾಶಕಾಯವನ್ನು ವೀಕ್ಷಿಸಲು ಸೂರ್ಯೋದಯಕ್ಕೂ ಮುನ್ನ ಮುಂಜಾನೆ 3 ಗಂಟೆ ಸೂಕ್ತ ಸಮಯ.

ನಿರಾಶೆ ಬೇಕಿಲ್ಲ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಟ್ಟಗಳಿಂದಲೂ ಈ ವಿಶೇಷ ಹಸಿರು ಧೂಮಕೇತುವನ್ನು ವೀಕ್ಷಿಸಬಹುದಾಗಿದೆ. ಅವಳಬೆಟ್ಟ, ಸಿದ್ಧರಬೆಟ್ಟ, ಶಿವಗಂಗೆ ಬೆಟ್ಟಗಳಿಂದಲೂ ಬೈನಾಕ್ಯುಲರ್ ಮೂಲಕ ವೀಕ್ಷಿಸಬಹುದು. ಶುಭ್ರ ಆಕಾಶವಿದ್ದಲ್ಲಿ ಬೈನಾಕ್ಯುಲರ್ ಇಲ್ಲದೇ ನೇರ ಕಣ್ಣುಗಳಿಂದಲೂ ಈ ಆಕಾಶಕಾಯವನ್ನು ನೋಡಬಹುದಾಗಿದೆ.

ಟೆಲಿಸ್ಕೋಪ್‍ನ್ನು ನಾರ್ತ್ ಸ್ಟಾರ್(ಪೋಲಾರ್ ಸ್ಟಾರ್) ಮೇಲ್ಭಾಗಕ್ಕೆ ಗುರಿಯಾಗಿಸಿ, ನೋಡಿದರೆ, ಈ ಹಸಿರು ಧೂಮಕೇತು ಗೋಚರಿಸುತ್ತದೆ.
1858ರ ಮೇ 3ರಂದು ಹೊರೇಸ್ ಪರ್ನೆಳ್ ಟಟ್ಲೆ, ಲುಬೆರೆ ಕ್ರೆಸಕ್ ಮತ್ತು ಮೈಕಲ್ ಗಿಯೋಕೊಬಿನಿ ಅವರು 41ಪಿ/ಟಟ್ಲೆ-ಗಿಯೋಕೊಬಿನಿ-ಕ್ರೆಸಕ್ ಹೆಸರಿನ ಧೂಮಕೇತುವನ್ನು ಅನ್ವೇಷಿಸಿದ್ದರು.