ಯಾವ ನಕ್ಷತ್ರದಂದು ಯಾವ ಕಾರ್ಯ ಮಾಡಿದರೆ ಶ್ರೇಷ್ಠ ಇಲ್ಲಿದೆ ನೋಡಿ..

0
2233

ಯಾವ ನಕ್ಷತ್ರದಂದು ಯಾವ ಕಾರ್ಯ ಮಾಡಿದರೆ ನಿಮಗೆ  ಶ್ರೇಷ್ಠವಾಗುತ್ತದೆ ಅನ್ನೋದು ಇಲ್ಲಿದೆ ನೋಡಿ

ಅಶ್ವಿನಿ :ಗೃಹ ಪ್ರವೇಶ, ಮದುವೆ, ಮುಂಜಿ, ದನಕರು, ವಾಹನ ಆಭರಣ ಕರೀದಿಗಳು.

ಭರಣಿ :ಶಸ್ತ್ರಧಾರಣೆ, ಅಗ್ನಿ ಕಾರ್ಯ, ಯುದ್ದ.

ಕೃತಿಕ : ಸಾಲ ತೀರಿಸುವುದು, ಪಶು ವ್ಯಾಪಾರ, ಗಿಡ ನೆಡುವುದು, ವಾದ್ಯ ಕ್ರಿಯೆಗಳು.

ರೋಹಿಣಿ : ವಿವಾಹ, ಸೀಮಂತ, ದೇವತಾ ಪ್ರತೀಷ್ಠೆ, ಹೊಸವಸ್ತ್ರ ಧರಿಸುವುದು.

Also read: ಯಾವ ಯಾವ ನಕ್ಷತ್ರ ಯಾವ ರಾಶಿಗಳಿಗೆ ಬರುತ್ತದೆ ಎಂಬ ವಿವರ ಇಲ್ಲಿದೆ ನೋಡಿ..

ಮೃಗಶಿರ :ಅನ್ನ ಪ್ರಾಶನ,ಅಕ್ಷರಾಭ್ಯಾಸ ಉಪನಯನ, ಯಾತ್ರೆ ಹೊರಡುವುದು.

ಆರಿದ್ರ :ಗರಡಿ ಸಾಧನ, ಪ್ರಥಮ ಹಾಲು ಕೊಡುವುದು, ಅಗ್ನಿ ಕಾರ್ಯ, ಶಸ್ತ್ರ ಸಂಬಂಧ.

ಪುನರ್ವಸು :ಬಿತ್ತನೆ, ಪ್ರಯಾಣ, ವಿಧ್ಯಾಭ್ಯಾಸ, ನಾಮಕರಣ, ವಾಸ್ತು ಕ್ರಿಯೆ.

ಪುಷ್ಯ :ಸೀಮಂತ, ಅಭ್ಯಂಜನ, ಕಿವಿ ಚುಚ್ಚುವುದು, ಮಂತ್ರೋಪದೇಶ.

ಆಶ್ಲೇಷ :ಬಾವಿ ತೋಡುವುದು, ನಾಗ ಪ್ರತಿಷ್ಠ, ಸುರಂಗ ನಿರ್ಮಾಣ,

ಮಖಾ :ವ್ಯವಸಾಯ, ಗೋಸಂಬಂಧ ಕೆಲಸ, ಸಂಗೀತ, ನಾಟ್ಯ ಪ್ರರಂಭ.

ಪುಬ್ಬ :ಆಭರಣ ಧಾರಣ, ವಾಹನ ಕರೀದಿ.

Also read: ಯಾವ ನಕ್ಷತ್ರ ಕ್ಕೆ ಯಾವ ಅಕ್ಷರದ ಹೆಸರು?? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

ಉತ್ತರ :ಮದುವೆ, ಸೀಮಂತ, ಉಪನಯನ, ವಿದ್ಯಾಭ್ಯಾಸಾರಂಭ.

ಹಸ್ತ :ನಾಮಕರಣ, ಔಷಧಿ ಸೇವನೆ, ಗೃಹಪ್ರವೇಶ, ಅಭಿಷೇಕ.

ಚಿತ್ತ : ವಸ್ತು ಸ್ವೀಕಾರ, ಬಿತ್ತನೆ, ವ್ಯಾಪಾರೋದ್ಯೋಗ, ಪ್ರತೀಷ್ಠೆ.

ಸ್ವಾತಿ : ಅನ್ನದಾನ, ಸಂಗೀತಾಭ್ಯಾಸ, ಶಂಕು ಸ್ಥಾಪನೇ, ಗೃಹಪ್ರವೇಶ.

ವಿಶಾಖ :ಧಾನ್ಯ ಸಂಗ್ರಹ, ಯಂತ್ರ ಮಂತ್ರ ಸಾಧನೆ, ಶಿಲ್ಪಾಕಲೆ ವಿನ್ಯಾಸ.

ಅನುರಾಧ : ವಾಸ್ತು ಕ್ರಿಯೆ, ಪೂಜೆ ಪುನಸ್ಕಾರಗಳು.

ಜೇಷ್ಠ : ಕಿವಿ ಚುಚ್ಚುವುದು, ಉದ್ಯೋಗ ಆರಂಭ, ಜಲಕ್ರಿಯೆ, ನೃತ್ಯ ಆರಂಭ.

ಮೂಲ :ವಾಣಿಜ್ಯ, ವ್ಯವಹಾರ, ಭೂ, ವಾಹನ, ಮನೆ ಕರೀದಿಗಳು

Also read: ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ನಕ್ಷತ್ರ ಮತ್ತು ರಾಶಿಗೆ ಹೊಂದಿಕೊಳ್ಳುವ ಶುಭ ಸಂಖ್ಯೆ ಯಾವುದೆಂದು ತಿಳಿದುಕೊಳ್ಳಿ…!!

ಪೂರ್ವಾಷಾಢ :ವಿಗ್ರಹ ನಿರ್ಮಿಸುವುದು ಬಾವಿ ನಿರ್ಮಾಣ, ವಿದ್ಯಾಭ್ಯಾಸಾರಂಭ.

ಉತ್ತರಾಷಾಢ :ಸೀಮಂತ, ಮದುವೆ, ಗೃಹಪ್ರವೇಶ, ಮಂಗಲ ಕಾರ್ಯಗಳು.

ಶ್ರವಣ :ಶಾಸ್ತ್ರಾಭ್ಯಾಸ, ಆಭರಣ ಖರೀದಿ, ವಸ್ತ್ರಾಲಂಕಾರ ಧಾರಣೆ.

ಧನಿಷ್ಠ : ನಾಮಕರಣ, ಯಾತ್ರಾರಂಭ, ದೇವತಾ ಸ್ಥಾಪನೆ, ಔಷಧಿ ಸೇವನೆ.

ಶತಭಿಷ :ಮನೆಯಲ್ಲಿ ಪೂಜೆ ಪುನಸ್ಕಾರ, ಹೋಮ, ಕಟ್ಟಡ ಪ್ರರಂಭ.

ಪೂರ್ವಭಾದ್ರ :ಮರ ಕಡಿಯುವುದು, ಮನೆ ಕೆಡುವುದು, ಮನೆಯಲ್ಲಿ ಸಣ್ಣಪುಟ್ಟ ರಿಪೇರಿ.

ಉತ್ತರಭಾದ್ರ : ಮದುವೆ, ಗೃಹಪ್ರವೇಶ, ನಾಮಕರಣ, ಸೀಮಂತ ಶುಭ ಕಾರ್ಯಗಳು

ರೇವತಿ : ವಾಹನ, ಆಭರಣ, ಗೃಹ, ಭೂಮಿಗಳ ಕರೀದಿಗಳು.

ಶಾಸ್ತ್ರದ ಪ್ರಕಾರ ಮೇಲೆ ಹೇಳಿರುವ ನಕ್ಷತ್ರದ ದಿನದಂದು ಈ ಕೆಲಸಗಳನ್ನು ಮಾಡಿದರೆ ಒಳ್ಳೆಯದಾಗುತ್ತದೆ.