ಅಂಗನವಾಡಿ ಕಾರ್ಯಕರ್ತರಿಗೆ, ಕೆಎಸ್ ಆರ್ ಟಿಸಿ ನೌಕರರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಕೊಡುಗೆ; ಏನಿದು ಗಿಫ್ಟ್ ಇಲ್ಲಿದೆ ನೋಡಿ ಮಾಹಿತಿ.!

0
189

ಬಹುದಿನಗಳ ಬೇಡಿಕೆಯಾದ ಕೆಎಸ್ ಆರ್ ಟಿಸಿ ನೌಕರರ, ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳದ ಬೇಡಿಕೆ ಕುರಿತು ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದ್ದು. ksrtc ನೌಕರರಿಗೆ ಶೇ.6.50 ತುಟ್ಟಿ ಭತ್ಯೆ (ಡಿಎ)ಯನ್ನು ನೀಡಲಾಗುತಿತ್ತು. ಈಗ ಶೇ.11.25ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಜೂನ್ 1 ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆಯನ್ನು ಸರ್ಕಾರ ಹೆಚ್ಚಳ ಮಾಡಿ ಆದೇಶಿಸಿದೆ. ಅದರಂತೆ ಅಂಗನವಾಡಿ ಕಾರ್ಯಕರ್ತೆಯರು, ಮಿನಿ ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರಿಗೆ ಗೌರವ ಧನ ಹೆಚ್ಚಳ ನ. 1 ರಿಂದಲೇ ಜಾರಿಯಾಗಲಿದೆ.

ಹೌದು ರಾಜ್ಯ ಸರ್ಕಾರವು ದೀಪಾವಳಿ ಹಬ್ಬಕ್ಕೆ ಕೆ ಎಸ್ ಆರ್ ಟಿಸಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ನೌಕರರ ಭತ್ಯೆಯಲ್ಲಿ ಹೆಚ್ಚಳ ಮಾಡಿ ಕೆ ಎಸ್​ ಆರ್​​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಆದೇಶ ಹೊರಡಿಸಿದ್ದಾರೆ. ಇಷ್ಟು ದಿನಗಳ ಕಾಲ ಇದ್ದ ಶೇ.6.50 ತುಟ್ಟಿ ಭತ್ಯೆ (ಡಿಎ)ಯನ್ನು ನೀಡಲಾಗುತಿತ್ತು. ಈಗ ಶೇ.11.25ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಜೂನ್ 1 ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆಯನ್ನು ಸರ್ಕಾರ ಹೆಚ್ಚಳ ಮಾಡಿ ಆದೇಶಿಸಿದೆ.

ಅಂಗನವಾಡಿ ಕಾರ್ಯಕರ್ತೆ ಸಿಹಿ ಸುದ್ದಿ;

ಅಂಗನವಾಡಿ ಕಾರ್ಯಕರ್ತೆಯರು, ಮಿನಿ ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರಿಗೆ ಗೌರವ ಧನ ಹೆಚ್ಚಳ ನ. 1 ರಿಂದಲೇ ಜಾರಿಯಾಗಲಿದೆ. ಕಾರ್ಯಕರ್ತೆಯರಿಗೆ ಎರಡು ಸಾವಿರ ರೂ., ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 1250 ರೂ. ಹಾಗೂ ಸಹಾಯಕಿಯರಿಗೆ 1 ಸಾವಿರ ರೂ. ಹೆಚ್ಚಳವಾಗಿದ್ದು ಅ.1 2018 ರಿಂದಲೇ ಪೂರ್ವಾನ್ವಯವಾಗಲಿದೆ. ಎಂದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ,ರಾಜ್ಯದಲ್ಲಿ 62, 580 ಜನ ಅಂಗನವಾಡಿ ಕಾರ್ಯಕರ್ತರು ಸೇರಿ ಒಟ್ಟು 1.28 ಲಕ್ಷ ಕಾರ್ಯಕರ್ತೆಯರಿದ್ದಾರೆ.

2018 ರ ಅಕ್ಟೋಬರ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸಲಾಗಿತ್ತು.ಈ ಪೈಕಿ 40% ರಾಜ್ಯ, 60% ಕೇಂದ್ರ ಗೌರವ ಧನ ನೀಡುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹಿಂದಿನ 1500 ರೂ ಹಾಗೂ 500 ರೂ ಸೇರಿಸಿ 2000 ರೂ. ಗೌರವಧನ ಹೆಚ್ಚಳ‌ ಮಾಡಲಾಗು ವುದು.‌ ಒಟ್ಟು ಈಗ 10,000 ರೂ ನೀಡ ಲಾಗುವುದು. 1/10/2018 ರಿಂದ ಈ ಆದೇಶ ಪೂರ್ವಾನ್ವಯವಾಗು ವಂತೆ ಜಾರಿಗೆ ಬರಲಿದೆ.ಒಂದು ವರ್ಷ ತಡೆ ಹಿಡಿದ ಗೌರವಧನ ಬರಲಿದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರವು 1500 ರೂ. ಹೆಚ್ಚಳ ಮಾಡಿತ್ತು. ರಾಜ್ಯ ಸರ್ಕಾರ 500 ರೂ. ಹೆಚ್ಚಳ ಮಾಡಿತ್ತು. ಹಿಂದೆಯೇ ಘೋಷಣೆ ಮಾಡಿದ್ದರೂ ಇನ್ನೂ ಕೊಟ್ಟಿರಲಿಲ್ಲ. ಇದೀಗ ಆರ್ಥಿಕ ಇಲಾಖೆಯ ಅನುಮತಿಯೂ ದೊರೆತಿದೆ. ಅಂಗನವಾಡಿ ಕಾರ್ಯಕರ್ತೆಯರು ಪ್ರಸ್ತುತ 8 ಸಾವಿರ ಗೌರವ ಧನ ಪಡೆಯುತ್ತಿದ್ದು ಇದೀಗ 10 ಸಾವಿರ ರೂ. ಸಿಗಲಿದೆ. ಅದೇ ರೀತಿ ಮಿನಿ ಅಂಗನವಾಡಿ ಕಾರ್ಯಕರ್ತೆಯರು ಪ್ರಸ್ತು 4750 ರೂ. ಪಡೆಯುತ್ತಿದ್ದು ಇದೀಗ ಆರು ಸಾವಿರ ರೂ. ಸಿಗಲಿದೆ. ಸಹಾಯಕಿಯರು ನಾಲ್ಕು ಸಾವಿರ ಪಡೆಯುತ್ತಿದ್ದು ಐದು ಸಾವಿರ ರೂ. ಸಿಗಲಿದೆ.