ಭವಿಷ್ಯ ನುಡಿದ ಡಿ.ಕೆ.ಶಿ; ಎಂಟಿಬಿ ನಾಗರಾಜ್ ಬಿಜೆಪಿಗೆ ಅಸ್ತಿ ಬರೆದುಕೊಟ್ಟರೂ ಸೋಲು ಖಚಿತ, ಮರುಮೈತ್ರಿ ಆದರೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರಾ??

0
173

ಉಪಚುನಾವಣೆಯ ನಂತರ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ ಕುರಿತು ಡಿ.ಕೆ.ಶಿವಕುಮಾರ್ ಸುಳಿವು ನೀಡಿದ್ದು, ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿ ಸೇರಿದ ಕೆಲವರ ಜೀವನ ಕೂಡ ನಾಶವಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಹೊಸಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಅವರು ಎಂ.ಟಿ.ಬಿ ನಾಗರಾಜ್ ಅವರು ಆಸ್ತಿಯನ್ನೆಲ್ಲಾ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಬರೆದುಕೊಟ್ಟರೂ ಸೋಲು ಖಚಿತ, ಎಂಟಿಬಿಯ ರಾಜಕೀಯ ಸಮಾಧಿಗೆ ಕೊನೆ ಹಾರವನ್ನು ಡಿಸೆಂಬರ್ 5 ರಂದು ಮತದಾರರು ಹಾಕಲಿದ್ದಾರೆ ಎಂದು ಡಿಕೆಶಿ ಕಿಡಿಕಾರಿದ್ದಾರೆ.

Also read: ಶ್ರಮಪಟ್ಟು ನನ್ನನು ಜೈಲಿಗೆ ಕಳುಹಿಸಿದವರ ನೆನಪಿಗಾಗಿ ಈ ಗಡ್ಡ ಬಿಟ್ಟೆ; ತಮ್ಮ ಗಡ್ಡದ ಸಿಕ್ರೆಟ್ ಬಿಚ್ಚಿಟ್ಟ ಡಿ.ಕೆ ಶಿವಕುಮಾರ್

ಎಂ.ಟಿ.ಬಿ ಬಿಜೆಪಿಯಲ್ಲಿ ಹರಕೆಯ ಕುರಿ;

ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಅವರಿಗೆ ಕಾಂಗ್ರೆಸ್ ಎಲ್ಲಾ ಸ್ಥಾನಮಾನ ನೀಡಿತ್ತು. ಅಧಿಕಾರ ಅನುಭವಿಸಿದ ನಂತರ ತಾಯಿ ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಗೆ ವಲಸೆ ಹೋಗಿದ್ದಾರೆ. ಅಲ್ಲಿ ಅವರು ಹರಕೆಯ ಕುರಿ ಆಗುವುದು ನಿಶ್ಚಿತ. ಚುನಾವಣೆ ನಂತರ ಅವರ ರಾಜಕೀಯ ಜೀವನ ನಾಶವಾಗುತ್ತದೆ. ಈ ಮೊದಲು ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಟಿಕೆಟ್ ನೀಡಿ ನಾನು, ಎಂ.ಎಸ್.ಕೃಷ್ಣ ಮೊದಲಾದ ನಾಯಕರು ಸೇರಿ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದೆವು. ಪಕ್ಷ ಅವರಿಗೆ ಉತ್ತಮ ರಾಜಕೀಯ ಭವಿಷ್ಯ ನೀಡಿ ಮಂತ್ರಿಯೂ ಮಾಡಲಾಗಿತ್ತು. ಇಂದಿಗ ಅವರು ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದಾರೆ. ಮತದಾರರು ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ನುಡಿದರು.

Also read: ಬಿಜೆಪಿ ಎನೇ ತಂತ್ರ-ಪದ್ಮವ್ಯೂಹ ಮಾಡಿದರೂ ಪಕ್ಷಕ್ಕೆ ಮತ್ತು ಜನರಿಗೆ ಮೋಸ ಮಾಡಿದ ಅನರ್ಹರಿಗೆ ಸೋಲು ಖಚಿತ: ಡಿ.ಕೆ.ಶಿವಕುಮಾರ್!!

ಮೈತ್ರಿ ಸುಳಿವು ನೀಡಿದ ಡಿಕೆಶಿ;

ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗುವುದು ಪಕ್ಕಾ. ಇದನ್ನು ನನ್ನ ಕಣ್ಣುಗಳಲ್ಲಿ ಕಾಣುತ್ತಿದ್ದೇನೆ. ನಾನಲ್ಲ, ಜನರೇ ಬದಲಾವಣೆ ಮಾಡುತ್ತಾರೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್​​ ಅಭಿಪ್ರಾಯಪಟ್ಟಿದ್ದಾರೆ. ಯಶವಂತಪುರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ನಾಗರಾಜ್​ ಪರ ಮತಯಾಚನೆ ಮಾಡುತ್ತಿದ್ದ ವೇಳೆ ಮಾತನಾಡಿದ ಅವರು, ರಾಜ್ಯ ರಾಜಕೀಯ ಬದಲಾಗುತ್ತದೆ. ಮೈತ್ರಿ ಮಾತುಕತೆ ನೋಡೋಣ, ನಡೆಯುತ್ತಿದೆ ಎಂದು ಹೇಳುವ ಮೂಲಕ ಮರು ಮೈತ್ರಿ ಸುಳಿವು ನೀಡಿ ಕಷ್ಟಕಾಲದಲ್ಲಿ ಬಿಜೆಪಿ ಮಿತ್ರರು ನನ್ನ ಮೇಲೆ ಸುಳ್ಳು ಆರೋಪ ಮಾಡಿ ನನ್ನನ್ನು ಜೈಲಿಗೆ ಕಳಿಸಿದರು. ಯಾವುದೇ ಅಕ್ರಮ ಮಾಡದೇ ನಾನು ಜೈಲಿಗೆ ಹೋದೆ. ನಾನು ಜೈಲಿಗೆ ಹೋದಾಗ ನೀವೆಲ್ಲಾ ಹೋರಾಡಿದ್ದೀರಿ. ನಿಮ್ಮೆಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಡಿಕೆಶಿ ಭಾವುಕರಾದರು.

ಸಿಎಂ ಆಗಬೇಕೆಂದು ಡಿಕೆಶಿ ಪರ ಘೋಷಣೆ;

Also read: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಎಚ್ ಡಿಕೆ, ಡಿಕೆಶಿ ಭೇಟಿ!! ಉಪಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತ??

ನಾವು ವೋಟ್ ಕೇಳುವುದು ಒಂದೇ ಅಲ್ಲ. ಅನರ್ಹ ಶಾಸಕರಿಗೆ ಬುದ್ಧಿ ಕಲಿಸಬೇಕು ಎಂದು ಮತದಾರರಿಗೆ ಕರೆ ನೀಡಿದರು. ಈ ವೇಳೆ ಕಾರ್ಯಕರ್ತರು ನೀವೇ ಸಿಎಂ ಆಗಬೇಕೆಂದು ಡಿಕೆಶಿ ಪರ ಘೋಷಣೆ ಕೂಗಿದರು. ಎಸ್​​.ಟಿ ಸೋಮಶೇಖರ್​ಗೆ ಶಕ್ತಿ ಕೊಟ್ಟಿದ್ದು ಕಾಂಗ್ರೆಸ್. ಸೋಮಶೇಖರ್ ತಾಯಿ ಪಕ್ಷಕ್ಕೆ ಮೋಸ ಮಾಡಿದ್ದಾರೆ. ಇಂದಿರಾ, ಸೋನಿಯಾ, ರಾಜೀವ್ ಗಾಂಧಿ ಪಕ್ಷ ಕಾಂಗ್ರೆಸ್​. ಯಾವತ್ತು ನಮ್ಮ ಸ್ವಾಭಿಮಾನವನ್ನು ಬಿಡಬಾರದು. ಸೋಮಶೇಖರ್​ ಅವರನ್ನು ಮನೆಗೆ ಕಳಿಸುವ ಕೆಲಸ ಮಾಡೋಣ, ಸೋಮಶೇಖರ್​​ರನ್ನು ಸೋಲಿಸಬೇಕು. ಮಾಧ್ಯಮದವರ ಹೇಳ್ತಾ ಇದ್ರು ನಾಗರಾಜ್ ಜೊತೆ ಯಾರು ಇಲ್ಲ ಅಂತ. ಈಗ ಎಷ್ಟು ಜನ ಇದ್ದಾರೆ ನೋಡಿ. ಹಾಗೆಯೇ ಬಿಜೆಪಿಯವರು ಏನ್ ಕೊಟ್ಟರೂ ತೆಗೆದುಕೊಳ್ಳಿ. ಸೋಮಶೇಖರ್ ನೋಟು, ಕಾಂಗ್ರೆಸ್​​ಗೆ ವೋಟ್. ಈ 15 ಜನ ಮಾತ್ರ ಯಾವುದೇ ಕಾರಣಕ್ಕೂ ಗೆಲ್ಲಬಾರದು ಎಂದು ಹೇಳಿದ್ದಾರೆ.