ಖಾಲಿ ಇರುವ 16,838 ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ; ಅಭ್ಯರ್ಥಿಗಳು ಇಂದಿನಿಂದಲೇ ಸಜ್ಜಾಗಿ.!

0
456

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿ ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ಖಾಲಿಯಿರುವ 16,838 ಸಬ್ ಇನ್ಸ್’ಪೆಕ್ಟರ್ ಹಾಗೂ ಕಾನ್ಸ್ ಟೇಬಲ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಆದೇಶ ಹೊರಡಿಸಿದ್ದು. 2022ರ ಮಾರ್ಚ್ ವೇಳೆಗೆ ನಾಲ್ಕು ಹಂತಗಳಲ್ಲಿ ಭರ್ತಿ ಮಾಡುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ, ಅದರಂತೆ ರಾಜ್ಯ ಪೊಲೀಸ್ ಹುದ್ದೆಗೆ ಸೇರಲು ತಯಾರಿ ನಡೆಸಿರುವ ಅಭ್ಯರ್ಥಿಗಳು ಈಗಿನಿಂದಲೇ ತಯಾರಿ ನಡೆಸುವುದು ಒಳ್ಳೆಯದು ಏಕೆಂದರೆ ಪೊಲೀಸ್ ಹುದ್ದೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಅದಕ್ಕಾಗಿ ಹೆಚ್ಚಿನ ಅಧ್ಯಯನ ಮುಖ್ಯವಾಗಿದೆ.

Also read: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಹಲವು ಅಭಿವೃದ್ಧಿ ಸಹಾಯಕ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಪೊಲೀಸರ ಹುದ್ದೆ ಭರ್ತಿ ಹೈಕೋರ್ಟ್ ಆದೇಶ?

ಹೌದು ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿ ವಿಚಾರವಾಗಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. ಈ ಅರ್ಜಿಯನ್ನು ಬುಧವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್.ಏಕ ಹಾಗೂ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ವಿಚಾರಣೆ ವೇಳೆ ಸರ್ಕಾರಿ ವಕೀಲ ಬಿ.ಪಿ.ಕೃಷ್ಣ ಪ್ರಮಾಣಪತ್ರ ಸಲ್ಲಿಸಿ, ರಾಜ್ಯ ಪೊಲೀಸ್ ಇಲಾಖೆಯಲ್ಲಿ 16,838 ಸಬ್ ಇನ್ಸ್ ಪೆಕ್ಟರ್ ಹಾಗೂ ಕಾನ್ಸ್ ಟೇಬಲ್ ಹುದ್ದೆಗಳು ಖಾಲಿಯಿವೆ. ಆ ಹುದ್ದೆಗಳನ್ನು 2022ರ ಮಾರ್ಚ್ ವೇಳೆಗೆ 4 ಹಂತಗಳಲ್ಲಿ ತುಂಬಲಾಗುವುದು. ಮೊದಲ ಹಂತದಲ್ಲಿ 300 ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು 2019ರ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದ್ದಾರೆ.

ಪೊಲೀಸ್ ಹುದ್ದೆಗಳಿಗೆ ನೇಮಕಾತಿಕೊಂಡವರಲ್ಲಿ ಏಕಕಾಲಕ್ಕೆ ಗರಿಷ್ಠ 6 ಸಾವರ ಜನರಿಗೆ ಮಾತ್ರ ತರಬೇತಿ ನೀಡುವ ಸಾಮರ್ಥ್ಯವನ್ನು ಹೊಂದಲಾಗಿದೆ. ಹೀಗಾಗಿ 16 ಸಾವಿರ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಏಕಕಾಲಕ್ಕೆ ಕೈಗೆತ್ತಿಕೊಂಡರೆ ತರಬೇತಿ ಹಾಗೂ ನಿಯೋಜನೆ ಕಷ್ಟಕರವಾಗಲಿದೆ. ಆದ್ದರಿಂದ ನಾಲ್ಕು ಹಂತದಲ್ಲಿ 16 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಈ ಅಂಶ ಪರಿಗಣಿಸಿ, ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು 2019ರ ಡಿಸೆಂಬರ್ ವೇಳೆಗ ಭರ್ತಿ ಮಾಡುವಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಮಾರ್ಪಡಿಸುವಂತೆ ನ್ಯಾಯಪೀಠದ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ಮನವನ್ನು ಪರಿಗಣಿಸಿದ ನ್ಯಾಯಪೀಠ, ಪೊಲೀಸ್ ಇಲಾಖೆಯಲ್ಲಿ ಸದ್ಯ ಖಾಲಿಯಿರುವ ಹುದ್ದೆಗಳನ್ನು2022ರ ಮಾರ್ಚ್ ವೇಳೆಗೆ ಭರ್ತಿ ಮಾಡಬೇಕು. ಮುಂದಿನ ವಿಚಾರಣೆ ವೇಳೆ ಎಷ್ಟು ಪೊಲೀಸ್ ಹುದ್ದೆಗಳು ಮಂಜೂರಾಗಿವೆ? ಎಷ್ಟು ಮಂದಿಗೆ ಹುದ್ದೆಗಳಿಗೆ ಬಡ್ತಿ ನೀಡಲಾಗಿದೆ ಎಂಬುದರ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಅ.9ಕ್ಕೆ ಮುಂದೂಡಿದೆ.

ಕಳೆದ ವಿಚಾರಣೆ ವೇಳೆ ಹೈಕೋರ್ಟ್​ಗೆ ಮೆಮೋ ಸಲ್ಲಿಸಿದ್ದ ರಾಜ್ಯ ಗೃಹ ಇಲಾಖೆ, ಪೊಲೀಸ್ ಇಲಾಖೆಯಲ್ಲಿ ಒಟ್ಟು 65,214 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 48,376 ಹುದ್ದೆಗಳು ಭರ್ತಿಯಾಗಿವೆ. 9,146 ಕಾನ್​ಸ್ಟೇಬಲ್ ಶ್ರೇಣಿಯ ಹುದ್ದೆಗಳು ಸೇರಿ ಒಟ್ಟು 16,838 ಹುದ್ದೆ ಖಾಲಿ ಇರುವುದಾಗಿ ತಿಳಿಸಿತ್ತು. 2014-15ರಿಂದ 2017-18ನೇ ಸಾಲಿನವರೆಗೆ 1,676 ಸಬ್​ಇನ್​ಸ್ಪೆಕ್ಟರ್ ಮತ್ತು 30,117 ಕಾನ್​ಸ್ಟೇಬಲ್​ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. 2018-19ನೇ ಸಾಲಿನಲ್ಲಿ 346 ಪಿಎಸ್​ಐ ಮತ್ತು 5,185 ಪೇದೆಗಳ ಭರ್ತಿ ಪ್ರಕ್ರಿಯೆ ನಡೆದಿದೆ ಎಂದು ಮಾಹಿತಿ ನೀಡಿದ್ದ ಸರ್ಕಾರ, ಹೆಚ್ಚುವರಿಯಾಗಿ 877 ಪಿಎಸ್​ಐ ಮತ್ತು 8,000 ಪೇದೆಗಳ ಹುದ್ದೆಗಳನ್ನು ಸೃಷ್ಟಿಸಿದೆ ಎಂದಿತ್ತು. ಸದ್ಯ ಖಾಲಿ ಹುದ್ದೆಗಳು ಹಾಗೂ 2018ರಿಂದ 2022ರ ಅವಧಿಯಲ್ಲಿ ನಿವೃತ್ತರಾಗಲಿರುವವರ ಹುದ್ದೆಗಳಿಗೆ ಅನುಸಾರವಾಗಿ 1,223 ಪಿಎಸ್​ಐ, 13,185 ಕಾನ್​ಸ್ಟೇಬಲ್ ಹುದ್ದೆಗಳನ್ನು ತುಂಬಲು ಉದ್ದೇಶಿಸಲಾಗಿದೆ.

Also read: ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ ಅಸಿಸ್ಟೆಂಟ್ ಸೂಪರ್‌ವೈಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..