ಸ್ಟೀಲ್ ಪ್ಲೈಓವರ್ ನಿರ್ಮಾಣ ಸದ್ಯಕ್ಕಿಲ್ಲ : ಹೈಕೋರ್ಟ್

0
592

 

ಬೆಂಗಳೂರು: ಕರ್ನಾಟಕ ಸರ್ಕಾರದ ಉದ್ದೇಶಿತ ಬಹುಕೋಟಿ ಉಕ್ಕಿನ ಸೇತುವೆ(Steel Flyover) ನಿರ್ಮಾಣ ಸದ್ಯಕ್ಕೆ ಕೈಗೆತ್ತಿಕೊಳ್ಳುತ್ತಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ವಕೀಲರು ಗುರುವಾರ ಬೆಳಗ್ಗೆ ಹೈಕೋರ್ಟಿನಲ್ಲಿ ಹೇಳಿದ್ದಾರೆ.

ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ ಜಿಟಿ) ದ ಆದೇಶ(injunction order) ವನ್ನು ಪರಿಗಣಿಸಿರುವ ಹೈಕೋರ್ಟ್, ಉಕ್ಕಿನ ಸೇತುವೆ ನಿರ್ಮಾಣಕ್ಕೆ ತಡೆ ಕೋರಿ ಸಲ್ಲಿಸಲವಿಚಾರಣೆಯನ್ನು ಮುಂದೂಡಿದೆ.

ಸುಮಾರು 6.7 ಕಿಲೋ ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ1,761 ಕೋಟಿ ರು ಎಂದು ಅಂದಾಜು ವೆಚ್ಚ ನಿಗದಿ ಮಾಡಲಾಗಿದೆ.ಸ್ಟೀಲ್ ಫ್ಲೈಓವರ್ ಬೇಕು ಹಾಗೂ ಬೇಡ ಎಂದು ನಾಗರಿಕರು ನಡೆಸಿದ ಪ್ರತಿಭಟನೆಗಳು, ಅಹವಾಲುಗಳು, ತಜ್ಞರ ವರದಿಗಳನ್ನು ಕೂಡಾ ಹೈಕೋರ್ಟ್ ಪರಿಶೀಲಿಸಲಿದೆ.

ನಮ್ಮ ಬೆಂಗಳೂರು ಫೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಸರ್ಕಾರವು ಸಾರ್ವಜನಿಕರು ಹಾಗೂ ನಗರ ಯೋಜನಾ ಸಮಿತಿಯೊಂದಿಗೆ ಸಮಾಲೋಚನೆ ನಡೆಸಿ ನಂತರ ಮುಂದುವರಿಯಬೇಕು. ಅಲ್ಲಿಯವರೆಗೆ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಸ್ಟೀಲ್ ಪ್ಲೈಓವರ್ ಯೋಜನೆಗೆ ಹಸಿರು ನ್ಯಾಯಾಧಿಕರಣ ತಡೆ ನೀಡಿ ಒಂದು ವಾರ ಕಳೆಯುವುದರೊಳಗಾಗಿ ಕರ್ನಾಟಕ ಉಚ್ಚ ನ್ಯಾಯಾಲಯ ಕೂಡ ಈ ವಿವಾದಿತ ಯೋಜನೆಗೆ ತಡೆನೀಡಿದೆ. ಈ ಮೂಲಕ ನಮ್ಮ ಬೆಂಗಳೂರು ಫೌಂಡೇಶನ್’ಗೆ ದೊಡ್ಡ ಗೆಲುವು ಸಿಕ್ಕಂತಾಗಿದೆ.