500 ಖಾಸಗಿ ಮತ್ತು ಸರಕಾರಿ ಸಾಮ್ಯದ ಬ್ಯಾಂಕ್ಗಳಲ್ಲಿ ಸರ್ಕಾರದಿಂದಲೇ ಸ್ಟಿಂಗ್ ಆಪರೇಷನ್

0
699

ಹೊಸದಿಲ್ಲಿ :ಸರಕಾರ ತನ್ನ ಎಜೆಂಟ್ಗಳ ಮೂಲಕ ದೇಶದ ಉದ್ದಗಲಕ್ಕೆ ಸುಮಾರು 500 ಖಾಸಗಿ ಮತ್ತು ಸರಕಾರಿ ಸಾಮ್ಯದ ಬ್ಯಾಂಕ್ಗಳಲ್ಲಿ ಸ್ಟಿಂಗ್ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದ್ದು, ಕಾರ್ಯಾಚರಣೆಯ 400 ಸೀಡಿಗಳು ಈಗಾಗಲೇ ಕೇಂದ್ರ ಹಣಕಾಸು ಸಚಿವಾಲಯವನ್ನು ತಲುಪಿದ್ದು ಪರಿಶೀಲನೆ ನಡೆಸಲಾಗುತ್ತಿರುವ ಬಗ್ಗೆ ವರದಿಯಾಗಿದೆ.

ಬ್ಯಾಂಕ್ಗಳ ಮ್ಯಾನೇಜರ್ಗಳು, ಕ್ಯಾಶರ್ಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಪ್ಪು ಹಣವನ್ನು ಬಳಿಯಾಗಿರಿಸಲು ಕಪ್ಪು ಕುಳಗಳಿಗೆ ನೆರವಾಗಿರುವುದು ಹಲವೆಡೆ ನಡೆದಿದ್ದು, ಈಗಾಗಲೇ ಹಲವರನ್ನು ಅಮಾನತು ಮಾಡಲಾಗಿದೆ.

 ನೋಟು ಅಪನಗದೀಕರಣದ ಬಳಿಕ ಕಠಿಣ ನಿರ್ಬಂಧಗಳ ಹೊರತಾಗಿಯೂ ದೇಶದ ಉದ್ದಗಲಕ್ಕೂ ಕಪ್ಪು ಹಣವನ್ನು ಬಿಳಿಯಾಗಿರಿಸಿರುವುದು ಈಗಾಗಲೇ ಹಲವು ದಾಳಿಗಳಲ್ಲಿ ಬಯಲಾಗಿದ್ದು, ಇದಕ್ಕೆ ಸಾಕ್ಷಿಯಾಗಿ ಕೋಟ್ಯಾಂತರ ರೂಪಾಯಿ ಹೊಸ ನೋಟುಗಳನ್ನು ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆಕ್ರಮ ನಡೆಯುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಕೇಂದ್ರ ಸರಕಾರವೇ ಕುಟುಕು ಕಾರ್ಯಾಚರಣೆಯ ಮೂಲಕ ಬ್ಯಾಂಕ್ಗಳಲ್ಲಿ ನಡೆಯುತ್ತಿರುವ ಆಕ್ರಮಗಳನ್ನು ಬಯಲಿಗೆಳೆದಿರುವ ಬಗ್ಗೆ ವರದಿಯಾಗಿದೆ.

ಅಕ್ರಮ ನಡೆಸಿದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಗಂಭೀರ ಚಿಂತನೆ ನಡೆಸಿರುವ ಕೇಂದ್ರ ಸರಕಾರ ಆಕ್ರಮಗಳಿಗೆ ಕಡಿವಾಣ ಮತ್ತು ಬ್ಯಾಂಕ್ಗಳಲ್ಲಿ ಯಾವ ರೀತಿ ಆಕ್ರಮ ನಡೆಯುತ್ತಿದೆ ಎನ್ನುವುದನ್ನು ಅರಿಯಲು ಕುಟುಕು ಕಾರ್ಯಾಚರಣೆ ನಡೆಸಿದೆ ಎಂದು ಹೇಳಲಾಗಿದೆ.

ಸ್ಟಿಂಗ್ ಕಾರ್ಯಾಚರಣೆ ನಡೆಸಿರುವ ಕುರಿತು ಇದುವರೆಗೆ ಸರಕಾರ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಆಕ್ರಮ ಎಸಗಿದವರ ವಿರುದ್ಧ ನೇರ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.