ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ರಾಶಿಗನುಗುಣವಾಗಿ ಯಾವ ರತ್ನವನ್ನು ಧರಿಸುವುದರಿಂದ ಯಾವ ಫಲ ಸಿಗುವುದೆಂದು ತಿಳಿದುಕೊಳ್ಳಿ…!!

0
2463

1. ಮಾಣಿಕ್ಯ Ruby
ಈ ರತ್ನಕ್ಕೆ ರವಿ ಗ್ರಹ ಅಧಿಪತಿ ಮಾಣಿಕ್ಯವನ್ನು ರವಿ ದೆಶೆ ಅಥವಾ ರವಿ ಭುಕ್ತಿ ಸಮಯದಲ್ಲಿ ಧರಿಸುವುದರಿಂದ ಆತ್ಮಶಕ್ತಿ, ಉನ್ನತ ಅಧಿಕಾರ, ಒಳ್ಳೆಯ ಕೆಲಸ, ಸರ್ಕಾರದಿಂದಾಗುವ ಕೆಲಸಗಳು, ತಂದೆಯ ಪ್ರೀತಿ, ಗೌರವ, ಸಂಘದಲ್ಲಿ ಉನ್ನತವಾದ ಸ್ಥಾನ ಸಿಗುತ್ತದೆ.

2. ಮುತ್ತು Pearl
ಈ ರತ್ನಕ್ಕೆ ಚಂದ್ರ ಗ್ರಹ ಅಧಿಪತಿ
ಮುತ್ತು ರತ್ನವನ್ನು ಚಂದ್ರದೆಶೆಯಲ್ಲಿ ಅಥವಾ ಚಂದ್ರಗ್ರಹ ನೀಚನಿರುವ ಜಾತಕರು ಧರಿಸುವುದರಿಂದ ಒಳ್ಳೆಯ ಆರೋಗ್ಯ, ಧೃಢ ಮನಸ್ಸು, ಜ್ಞಾನವೃದ್ದಿಯಾಗುವುದು, ವಿದೇಶ ಪ್ರಯಾಣಕ್ಕೆ ಸಹಾಯ , ತಾಯಿಯ ಪ್ರೀತಿ, ವ್ಯವಸಾಯದಿಂದ ಲಾಭ.

3. ಹವಳ Coral
ಈ ರತ್ನಕ್ಕೆ ಕುಜ ಗ್ರಹ ಅಧಿಪತಿ
ಹವಳವನ್ನು ಕುಜದೆಶೆ ಅಥವಾ ಕುಜಭುಕ್ತಿ, ಕುಜು ದೋಷವಿರುವವರು ಧರಿಸುವುದರಿಂದ ಋಣಬಾಧೆ, ಶತ್ರು ಭಾದೆ, ಭೂ ಸಂಬಂಧವಾದ ಭಾದೆನಿವಾರಣೆ, ದಾಂಪತ್ಯ ಸುಖ, ಶೀರ್ಘವಿವಾಹ, ಹೆಣ್ಣು ಮಕ್ಕಳ ಆರೋಗ್ಯ ಸಮಸ್ಸೆ ನಿವಾರಣೆ, ಸಂತಾನಪ್ರಾಪ್ತಿಯು ಆಗುವುದು.

4. ಪಚ್ಚೆ Emerald
ಈ ರತ್ನಕ್ಕೆ ಬುಧ ಗ್ರಹ ಅಧಿಪತಿ
ಪಚ್ಚೆಯನ್ನು ಬುಧದೆಶೆ ಭುಕ್ತಿಯ ಸಮಯದಲ್ಲಿ ಧರಿಸುವುದರಿಂದ ಮಕ್ಕಳ ಬುದ್ದಿಶಕ್ತಿ ಹೆಚ್ಚುವುದು, ಬಂಧುವರ್ಗದಿಂದ ಶುಭವಾಗುವುದು, ಒಳ್ಳೆಯ ಯೋಚನೆಗಳು, ವಿದ್ಯಾಭ್ಯಾಸದಲ್ಲಿ ಅಭಿವೃದ್ದಿ, ವ್ಯಾಪಾರದಲ್ಲಿ ವೃದ್ದಿಯಾಗುವುದು.

5. ಪುಷ್ಯರಾಗ Topaz
ಈ ರತ್ನಕ್ಕೆ ಗುರು ಗ್ರಹ ಅಧಿಪತಿ
ಪುಷ್ಯರಾಗವನ್ನು ಗುರು ದೆಶೆ ಗುರು ಭುಕ್ತಿಯ ಸಮಯದಲ್ಲಿ ಧರಿಸುವುದರಿಂದ ಆರ್ಥಿಕ ಅಭಿವೃದ್ದಿ, ಮಕ್ಕಳಿಂದ ಸುಖಕರ, ವಿವಾಹವು, ಧರ್ಮಿಕಕ್ಷೇತ್ರದಲ್ಲಿ ಹೆಸರು, ಒಳ್ಳೆಯ ಉದ್ಯೋಗ, ಪುತ್ರ ಸಂತಾನ, ಒಳ್ಳೆಯ ಆರೋಗ್ಯವು ಸಿಗುತ್ತದೆ.

6. ವಜ್ರ Diamond
ಈ ರತ್ನಕ್ಕೆ ಶುಕ್ರ ಗ್ರಹ ಅಧಿಪತಿ
ವಜ್ರವನ್ನು ಶುಕ್ರದೆಶೆ ಅಥವಾ ಭುಕ್ತಿ ಸಮಯದಲ್ಲಿ ಧರಿಸುವುದರಿಂದ ಧನ, ಕನಕ, ವಸ್ತು, ವಾಹನಲಾಭ ವಿದೇಶಯಾನಕ್ಕೆ ಅನಕೂಲ, ಸುಖಕರ ಜೀವನ, ಸಂಸಾರದಲ್ಲಿ ಪ್ರೀತಿ, ಪ್ರೇಮ ವಿವಾಹಕ್ಕೆ, ಹುಡುಗನ ಶೀರ್ಘ ವಿವಾಹಕ್ಕೆ ಅನುಕೂಲವಾಗುವುದು.

7. ನೀಲ Blue sapphire
ಈ ರತ್ನಕ್ಕೆ ಶನಿ ಗ್ರಹ ಅಧಿಪತಿ
ನೀಲವನ್ನು ಶನಿ ದೆಶೆಯಲ್ಲಿ ಮತ್ತು ಸಾಡೆಸಾತಿ ಸಮಯದಲ್ಲಿ ಧರಿಸುವುದರಿಂದ ಸೋಮಾರಿತನವಿಲ್ಲದಂತೆ, ದರಿದ್ರವನ್ನು ದೂರಮಾಡಿ ಆರೋಗ್ಯದ ಜೀವನ ನಡೆಸಬಹುದು, ವ್ಯಪಾರವೃದ್ದಿ, ವಿದ್ಯಾಭ್ಯಾಸವೃದ್ದಿಯಾಗುವುದು.

8. ಗೋಮೇಧ Hessonite
ಈ ರತ್ನಕ್ಕೆ ರಾಹು ಗ್ರಹ ಅಧಿಪತಿ
ಗೋಮೇಧವನ್ನು ರಾಹುದೆಶೆ ಮತ್ತು ಕಾಳಸರ್ಪದೋಷವಿರುವವರು ಧರಿಸುವುದರಿಂದ ಮಾನಸಿಕ ರೋಗಕ್ಕೆ, ಕಾರ್ಯಭಂಗವಾಗದಂತೆ, ಗೌರವ ಕಡಿಮೆಯಾಗದಂತೆ, ಶತೃಗಳಿಂದ ಜಯವಾಗುವುದಕ್ಕೆ ಸಹಾಯವಾಗುತ್ತದೆ.

9. ವೈಢೂರ್ಯ Cat’s Eye
ಈ ರತ್ನಕ್ಕೆ ಕೇತು ಗ್ರಹ ಅಧಿಪತಿ
ವೈಢೂರ್ಯವನ್ನು ಕೇತು ದೆಶೆ ಅಥವಾ ಕೇತು ಭುಕ್ತಿ ಸಮಯದಲ್ಲಿ ಧರಿಸುವುದರಿಂದ ಭಕ್ತಿ, ಜ್ಞಾನ, ತೀರ್ಥಯಾತ್ರೆ,ವೈರಾಗ್ಯದಿಂದ ಮುಕ್ತಿ, ಆರೋಗ್ಯದಲ್ಲಿ ಉನ್ನತಿ ಕಾಣಬಹುದು.