ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯ ಪ್ರಚಾರದ ವೇಳೆ ದರ್ಶನ್ ಕಾರಿಗೆ ಕಲ್ಲು ತೂರಾಟ ನಡೆಸಿದ್ದು ಎಷ್ಟು ಸರಿ??

0
330

ಮಂಡ್ಯ ಚುನಾವಣಾ ಅಕಾಡ ದಿನದಿಂದ ದಿನಕ್ಕೆ ಸುದ್ದಿಯಲ್ಲಿದ್ದು ಸುಮಲತಾ ಮತ್ತು ಸಿಎಂ ಪುತ್ರನ ನಡುವೆ ಹಗ್ಗಜಗ್ಗಾಟ ಜೋರಾಗಿದೆ. ಏನಾದರು ಮಾಡಿ ಸುಮಲತಾ ವಿರುದ್ದ ಗೆಲ್ಲಬೇಕು ಎನ್ನುವ ದಾವತದಲ್ಲಿರುವ ಜೆಡಿಎಸ್ ಈಗ ಮತ್ತೊಂದು ತಗಾದೆ ತೆಗೆದಿದ್ದು ಚುನಾವಣಾ ಆಯೋಗಕ್ಕೆ ಸುಮಲತಾ ವಿರುದ್ದ ದೂರು ಸಲ್ಲಿಸಿದೆ. ಇಷ್ಟು ದಿನ ಸುಮಲತಾ ಪರ ಪ್ರಚಾರಕ್ಕೆ ಇಳಿದ ಸ್ಟಾರ್ ನಟರಾದ ದರ್ಶನ್ ಯಶ್ ವಿರುದ್ದ ದೂರುಗಳು ಟೀಕೆಗಳು ಕೇಳಿ ಬರುತ್ತಿದ್ದರೆ ಈಗ ಅಭ್ಯರ್ಥಿ ಸುಮಲತಾ ಮೇಲೆ ದೂರು ಸಲ್ಲಿಸಿದ್ದು ಮಂಡ್ಯದಲ್ಲಿ ಕಿಡಿ ಎಬ್ಬಿಸಿದೆ.

Also read: ಮಂಡ್ಯದ ರಾಜಕೀಯಕ್ಕೆ ಜುಟ್ಟಲು ಹಿಡಿದ ಐಟಿ ಅಧಿಕಾರಿಗಳು; ತಂದೆ -ಮಗ ಉಳಿದುಕೊಂಡಿದ್ದ ಹೋಟೆಲ್​​ ಮೇಲೆ ಐಟಿ ದಾಳಿ; ಬೇಸತ್ತ ಕುಮಾರಣ್ಣ ಮೋದಿಯ ಮೇಲೆ ಕಿಡಿ..

ಹೌದು ಸುಮಲತಾ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡುವೆ ಪೈಟ್ ಜೋರಾಗಿದ್ದು ಇದರ ಮಧ್ಯೆ ಆರೋಪ-ಪ್ರತ್ಯಾರೋಪಗಳ ಜತೆ ದೂರು-ಪ್ರತಿ ದೂರು ನೀಡುವುದು ಜೋರಾಗಿದ್ದು, ಇದೀಗ ಸುಮಲತಾ ವಿರುದ್ಧ ಜೆಡಿಎಸ್ ಚುನಾವಣಾ ಆಯೋಗದ ಜೆಡಿಎಸ್ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಎಂಬವರು ಸುಮಲತಾ ವಿರುದ್ಧ ದೂರು ನೀಡಿದ್ದಾರೆ. ಸುಮಲತಾ ನಟಿಸಿರುವ ಜಾಹೀರಾತು ಟಿ.ವಿಗಳಲ್ಲಿ ಪ್ರಸಾರವಾಗುತ್ತಿದೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಹೀಗಾಗಿ ಅವರ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳ ಬಳಿಕ ಮನವಿ ಮಾಡಿಕೊಂಡಿದ್ದಾರೆ.

ದೂರಿನಲ್ಲಿ ಏನಿದೆ?

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎ.ಸುಮಲತಾ ಅವರು ನಟಿಸಿರುವ ಹಿಂದೂಸ್ತಾನ್ ಗೋಲ್ಡ್​ ಕಂಪೆನಿ’ ಎಂಬ ಜಾಹೀರಾತನ್ನು ಹಲವು ಖಾಸಗಿ ಟಿ.ವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಈ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿರುವುದರಿಂದ ಇದು ಪರೋಕ್ಷವಾಗಿ ಪ್ರತಿ ಸ್ಪರ್ಧಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಇದರ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನತಾದಳ ಪಕ್ಷದ ಪರವಾಗಿ ಕೋರುತ್ತಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿಗೆ ಸಂಬಂಧಪಟ್ಟಂತೆ ಸುಮಲತಾ ಬೆಂಬಲಿಗರು ಕಿಡಿ ಪ್ರತಿಕ್ರಿಯೆ ನೀಡಿದ್ದು ಇದೆಲ್ಲ ಜೆಡಿಎಸ್-ಗೆ ಸಹಿಸಲಾಗದ ಹೊಟ್ಟೆಉರಿ ಎಂದು ಪ್ರತಿಕಿಯೆ ನೀಡಿ.

Also read: ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದ ಬೇಸತ್ತು ಮಂಡ್ಯ ಕಾಂಗ್ರೆಸ್ ನಾಯಕರು ಸುಮಲತಾಗೆ ಬಹಿರಂಗ ಬೆಂಬಲ?? ನಿಖಿಲ್ ಗತಿ??

ಸುಮಲತಾ ಅವರ ಬೆಂಬಲಕ್ಕೆ ನಿಂತಿರುವ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಹಾಗೂ ‘ರಾಕಿಂಗ್​ ಸ್ಟಾರ್​’ ಯಶ್​ ಮೇಲೆ ಜೆಡಿಎಸ್​ ನಾಯಕರು ಭಾರೀ ಆರೋಪಗಳನ್ನು ಮಾಡುತ್ತಿದ್ದಾರೆ. ‘ಇವರು ಜೋಡೆತ್ತುಗಳಲ್ಲ ಕಳ್ಳೆತ್ತುಗಳು’ ಎನ್ನುವ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈಗ ನಟ ದರ್ಶನ್​ ಸಂಚಾರ ಮಾಡುತ್ತಿದ್ದ ಕಾರಿನ ಮೇಲೆ ಕಲ್ಲು ತೂರಾಟ ಮಾಡುವ ಪ್ರಯತ್ನ ನಡೆದಿದ್ದು, ಅದೃಷ್ಟವಶಾತ್​ ವಿಫಲವಾಗಿದೆ ಎಂದು ಹೇಳಿದ್ದಾರೆ.

ಈ ಎಲ್ಲ ವಿಚಾರ ಮೊದಲೇ ತಿಳಿದಿದ್ದು ಈ ಬಗ್ಗೆ ರಾಜನಾಥ್​ ಸಿಂಗ್​ಗೆ ಪತ್ರ ಬರೆದಿರುವ ಬಿಜೆಪಿ ಶಾಸಕ ಅರವಿಂದ್​ ಲಿಂಬಾವಳಿ, “ಸುಮಲತಾ ಬೆಂಬಲಕ್ಕೆ ನಿಂತಿರುವ ದರ್ಶನ್​ ಮನೆಯ ಮೇಲೆ ಮಾ.23ರಂದು ಕಲ್ಲು ತೂರಾಟ ನಡೆದಿದೆ. ಸುಮಲತಾ ಅವರ ನಾಮಪತ್ರ ಸಲ್ಲಿಕೆ ಮಾಡುವ ದಿನದಂದು ಕಾಂಗ್ರೆಸ್​ ಹಾಗೂ ಜೆಡಿಎಸ್​ ಗೂಂಡಾಗಳು ವಿದ್ಯುತ್​ ಕೇಬಲ್​ ಕತ್ತರಿಸಿದ್ದಾರೆ. ಜೆಡಿಎಸ್​​ ಹಾಗೂ ಕಾಂಗ್ರೆಸ್​ ನಾಯಕರು ಸುಮಲತಾ ಮೇಲೆ ಅವಾಚ್ಯ ಶಬ್ದ ಬಳಸಿದ್ದಾರೆ,” ಎಂದು ಲಿಂಬಾವಳಿ ಪತ್ರದಲ್ಲಿ ಆರೋಪಿಸಿದ್ದರು. ಹಾಗಾಗಿ ಅವರಿಗೆ ರಕ್ಷಣೆ ಅಗತ್ಯವಿದೆ ಎಂದು ಹೇಳಿದರು ಅದೆಲ್ಲವೂ ಈಗ ಸತ್ಯವಾಗುತ್ತಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದು. ಇನ್ನೂ ಚುನಾವಣೆ ಮುಗಿಯುವ ವರೆಗೆ ಏನೆಲ್ಲಾ ಬೆಳೆವಣಿಗಳು ಕಂಡು ಬರುತ್ತೇವೆ ಎಂದು ಕಾದು ನೋಡಬೇಕಿದೆ.