ಫಾಸ್ಟ್ ಫುಡ್ ಸ್ವಲ್ಪ ಬ್ರೇಕ್ ಹಾಕಿ

0
703

*ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲವೆಂದು ತಿಳಿದಿದ್ದರೂ ಸಹ ಕೆಲವು ಸಲ ಫಾಸ್ಟ್ ಫುಡ್ ತಿನ್ನಲೇಬೇಕಾದಂತಹ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಫಾಸ್ಟ್ ಫುಡ್ ಗಳ ಆಯ್ಕೆ, ಪ್ರಮಾಣಗಳ ಮಿತಿಯನ್ನು ಪಾಲಿಸಿದರೆ ಸ್ವಲ್ಪ ಮಟ್ಟಿಗಾದರೂ ಹಾನಿಯಾಗದಂತೆ ನೋಡಿಕೊಳ್ಳಬಹುದು.

*ಫಾಸ್ಟ್ ಫುಡ್ ರೆಸ್ಟೊರೆಂಟಿನಲ್ಲಿ ಸ್ಯಾಂಡ್ ವಿಚ್ ಗಳು. ಬರ್ಗರ್ ಗಳು, ಪಿಜ್ಜಾಗಳಂತಹವುಗಳು ಬಗೆಬಗೆಯ ಸೈಜಿನಲ್ಲಿರುತ್ತವೆ. ಇವುಗಳಲ್ಲಿ ಬಹಳಷ್ಟು ದೊಡ್ಡವುಗಳನ್ನು ಬಿಟ್ಟು ಮಕ್ಕಳಿಗಾಗಿ ಮಾಡಿದ ಚಿಕ್ಕ ಗಾತ್ರವುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗೇಯೇ ಫ್ರೆಂಚ್ ಪ್ರೈನ್, ಚಿಪ್ಸ್ ಗಳಂತಹವುಗಳನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಇದರಿಂದ ಕ್ಯಾಲರಿಗಳು ಕೆಳಮಟ್ಟಿಗೆ ತಗ್ಗುತ್ತವೆ.

*ಫಾಸ್ಟ್ ಫುಡ್ ನೊಂದಿಗೆ ಅವುಗಳನ್ನು ನೆಂಜಿಕೊಳ್ಳಲು, ವಿಧವಿಧವಾದ ಪದಾರ್ಥಗಳನ್ನು ನೀಡುತ್ತಿರುತ್ತಾರೆ. ಇವುಗಳಲ್ಲಿ ಆರೋಗ್ಯಕರವಾದದನ್ನು ಆಯ್ಕೆ ಮಾಡಿಕೊಂಡರೆ ಉತ್ತಮ. ಉದಾಹರಣೆಗೆ ಫ್ರೆಂಚ್ ಫ್ರೈ ತಿನ್ನುವಾಗ ಕಡಿಮೆ ಕೊಬ್ಬಿರುವಂತಹ ಸಲಾಡ್ ಗಳು, ಬೇಯಿಸಿದ ಆಲೂಗಡ್ಡೆಯಂತಹವುಗಳನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ, ಹಾಗೆಯೇ ಹಣ್ಣು, ಮೊಸರು, ಮುಸುಕಿನ ಜೋಳಗಳಂತಹವುಗಳನ್ನು ಬಳಸುವ ಪ್ರಯತ್ನ ಮಾಡಿರಿ.

*ಧಾರಾಳವಾಗಿ ಎಣ್ಣೆಯಲ್ಲಿ ಕರಿದ ಫ್ರೈಗಳು, ಬ್ರೆಡ್ ನಿಂದ ತಯಾರಿಸಿದ ಪದಾರ್ಥಗಳ ಬದಲಿಗೆ, ಸುಟ್ಟು ಬೆಯಿಸಿದ (ಗ್ರಿಲ್ಡ್. ಬಾಯಲ್ಡ್)ಗಳಂತಹವುಗಳನ್ನು ತೆಗೆದುಕೊಂಡರೆ ಒಳ್ಳೆಯದು.

*ಫಾಸ್ಟ್ ಫುಡ್ ನೊಂದಿಗೆ ಕೂಲ್ ಡ್ರಿಂಕ್ಸ್ ಗಳನ್ನು ಕುಡಿಯುವುದು ಬಹಳ ಮಂದಿಗೆ ಅಭ್ಯಾಸ. ಒಂದು ದೊಡ್ಡಕೂಲ್ ಡ್ರಿಂಕ್ಸ್ ನಲ್ಲಿ ಸುಮಾರು 300ರ ವರೆಗೂ ಕ್ಯಾಲೋರಿಗಳಿರುತ್ತದೆ. ಇಂತಹವುದಕ್ಕೆ ಬದಲಾಗಿ ಡೈಟ್ ಸೋಡಾ. ನೀರನ್ನು ಕುಡಿಯುವುದು ಉತ್ತಮ. ಬಗೆಬಗೆಯ ಮಿಲ್ಕ್ ಶೇಕ್ ನಲ್ಲಿ 800ರವರೆಗೂ ಕ್ಯಾಲೊರಿಗಳಿರುವುದರಿಂದ ಕೂಲ್ ಡ್ರಿಂಕ್ಸ್ ಆಯ್ಕೆಯಲ್ಲಯೂ ಎಚ್ಚರ ವಹಿಸುವ ಅಗತ್ಯವಿದೆ.