ದೆಹಲಿಯಲ್ಲಿ ಹಿಂದಿ ಹೇರಿಕೆಯಿಂದ ಕನ್ನಡಿಗ ಟ್ರೈನಿ ಎಸ್ ಐ ಆತ್ಮಹತ್ಯೆ

0
1628

ಆತ್ಮಹತ್ಯೆ ಮಾಡಿಕೊಂಡ ಕರ್ನಾಟಕದ ತಿಪ್ಪೆಸ್ವಾಮಿರವರು ಎಸ್ ಐ ತರಬೇತಿ ಪಡೆಯುತ್ತಿದ್ದರು.
ಮೂಲತಃ ಗ್ರಾಮೀಣ ಪ್ರತಿಭೆಯಾಗಿದ್ದ ತಿಪ್ಪೆಸ್ವಾಮಿರವರು ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದರು .

tippe

 

ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ನಾಗರಾಜ್ ರವರ ಹೇಳಿಕೆಯ ಪ್ರಕಾರ ತಿಪ್ಪೆಸ್ವಾಮಿರವರಿಗೆ ಹಿಂದಿ ಬರುತ್ತಿರಲಿಲ್ಲ, ಸಮಸ್ಯೆಯಾಗುತ್ತಿದೆ ಎಂದು ಸ್ನೇಹಿತರ ಬಳಿ ಹೇಳಿಕೊಂಡಿದ್ದರು.

ನಾಗರಾಜ್ ರವರು ಕರ್ನಾಟಕ ಸಂಘದ ಪರವಾಗಿ ಬಹಳಷ್ಟು ಬಾರಿ ಧೈರ್ಯ ತುಂಬುವ ಕೆಲಸ ಮಾಡಿದ್ದರು ಹಾಗೆಯೇ ಸಂಘಕ್ಕೆ ಭೇಟಿಕೊಟ್ಟು ಸಮಸ್ಯೆ ಹೇಳಿಕೊಳ್ಳುವಂತೆ ತಿಳಿಸಿದ್ದೆವು
ತಿಪ್ಪೆಸ್ವಾಮಿಯವರು ಸಂಘಕ್ಕೆ ಭೇಟಿ ನೀಡಲೇ ಇಲ್ಲ ಎಂದು ತಿಳಿಸಿದ್ದಾರೆ . ಅನೇಕ ಸರ್ಕಾರಿ ನೌಕರಿಗಳಲ್ಲಿ ಹಿಂದಿ ಕಡ್ಡಾಯವಾಗಿರುವುದು ಹಿಂದಿ ಗೊತಿಲ್ಲದ ಜನರಿಗೆ ಬಹಳಷ್ಟು ಇರಿಸು ಮುರಿಸನ್ನು ಉಂಟುಮಾಡಿದೆ

ಭಾಷಾ ಭೇದ ನೀತಿಯು ಸ್ವಾತಂತ್ರ ಪೂರ್ವದಲ್ಲೂ ಹಾಗು ನಂತರವೂ ಹೆಚ್ಚಾಗಿ ಕಾಡಿದ್ದು ದಕ್ಷಿಣ ಭಾರತದಲ್ಲಿ ಕೇವಲ ೪೦ ರಷ್ಟು ಹಿಂದಿ ಭಾಷಿಗರಿರುವ ಭಾರತ ದೇಶದಲ್ಲಿ ಎಲ್.ಪಿ.ಜಿ , ವಿದ್ಯುತ್ ಬಿಲ್ , ರೈಲ್ವೆ ಟಿಕೆಟ್ , ರಸ್ತೆಗಳಲ್ಲಿ , ವಿಮಾನ ಸುರಕ್ಷತಾ ಹೇಳಿಕೆಗಳು ಇನ್ನು ಇತರ ದೈನಂದಿನ ಅನೇಕ ವಿಷಯಗಳಲ್ಲಿ ಎಲ್ಲ ಹಿಂದಿಹೇತರ ರಾಜ್ಯಗಳಲ್ಲೂ ನಿರಂತರ ಹಿಂದಿ ಪ್ರವರ ನಡೆಯುತ್ತಲೇ ಇದೆ .
ಒಕ್ಕೂಟ ವ್ಯವಸ್ಥೆಯಲ್ಲಿ ನೂರಾರು ಭಾಷೆಗಳಿದ್ದರು ಹಿಂದಿ ಸಾಮ್ರಾಜ್ಯಶಾಯಿ ಧೋರಣೆ ನಿಲ್ಲಬೇಕೆಂದು ಈಗಾಗಲೇ ಅನೇಕ ಸಂಘ ಸಂಸ್ಥೆಗಳು ಸರ್ಕಾರವನ್ನು ಒತ್ತಾಯಿಸಿದ್ದರು ಸಹ ಹಿಂದಿ ಹೇರಿಕೆ ಹಾಗು ಹಿಂದಿ ಗೊತ್ತಿಲ್ಲದಿದ್ದರೆ ಬದುಕುವುದೇ ಕಷ್ಟ ಎಂಬ ನಿಲುವಿನೊಂದಿಗೆ ನಮ್ಮ ರಾಜ್ಯ ಹಾಗು ಕೇಂದ್ರ ಸರ್ಕಾರಗಳು ನಿರಂತರ ಹಿಂದಿ ಹೇರಿಕೆಯೇ ಜನರನ್ನು ನಾವು ನಮ್ಮದೇ ದೇಶದಲ್ಲಿ ದ್ವಿತೀಯ ದರ್ಜೆಯ ಪ್ರಜೆಗಳಂತೆ ಬಿಂಬಿಸುವ ಪ್ರಯತ್ನ ಎಂಬುದು ಅನೇಕರ ಅಭಿಪ್ರಾಯವಾಗಿದೆ .