ಉಪ್ಪು ಅತಿಯಾದರೆ ಆಪತ್ತು..!

0
579

ಬಿಪಿ ಬೇಡ ಅಂದರೂ ಬರುತ್ತದೆ: ಬ್ಲಡ್ ಪ್ರೆಶರ್ ಉಪ್ಪಿನಿಂದ ಬರುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ನಾವು ಬೇಡ ಅಂದರೂ ಅದು ನಮ್ಮ ದೇಹವೇ ಉಪ್ಪು ಬಯಸುತ್ತದೆ. ಹೀಗಾಗಿ ಇದರಿಂದ ದೇಹ ಸೋಡಿಯಂನಿಂದ ಕೂಡುತ್ತದೆ. ಸೋಡಿಯಂ ಪ್ರಮಾಣ ಹೆಚ್ಚಾದಂತೆ ಬಿಪಿ ಹೆಚ್ಚಾಗುತ್ತದೆ. ನಮ್ಮ ದೇಹಕ್ಕೆ 4.6 ಗ್ರಾಂ. ನಷ್ಟು ಮಾತ್ರ ಉಪ್ಪು ಬೇಕಾಗುತ್ತದೆ. ಅದನ್ನಷ್ಟೇ ಬಳಸಿದರೆ ಬಿಪಿನೂ ಬರಲ್ಲ, ಏನೂ ಬರಲ್ಲ, ಆದ್ದರಿಂದ ಉಪ್ಪು ಕಡಿಮೆ ಮಾಡಿ.

ಹೃದಯಕ್ಕೂ ಉಪ್ಪಿಗೂ ಆಗಿಬರುವುದಿಲ್ಲ: ಸೋಡಿಯಂ ಪ್ರಮಾಣ ಹೆಚ್ಚಾದಂತೆ ದೇಹದಲ್ಲಿ ರಕ್ತನಾಳಗಳ ಬಿಗಿತ ಉಂಟಾಗುತ್ತದೆ. ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳು ಬಂದರೂ ಬರಬಹುದು.

ಮೆದುಳು ಕೈ ಕೊಡುತ್ತೆ ಹುಷಾರ್: ನಿತ್ಯ ಬದುಕಿನಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದರೆ ಕೇವಲ ಹೃದಯ ಅಷ್ಟೇ ಅಲ್ಲದೆ ಮೆದುಳಿನ ಶಕ್ತಿ ಕೂಡಾ ಕಡಿಮೆಯಾಗುತ್ತದೆ. ಹೀಗಾಗಿ ನಿತ್ಯ ಆಹಾರ ಪದ್ಧತಿಯಲ್ಲಿ ಉಪ್ಪಿನ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಸೂಕ್ತ.

ಕಿಡ್ನಿ ಸಮಸ್ಯೆ: ದೇಹದ ಪ್ರಮುಖ ಅಂಗಾಂಗಗಳಲ್ಲಿ ಕಿಡ್ನಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತ ಚಲನೆಯಲ್ಲಿ ಅತೀ ಹೆಚ್ಚು ಶ್ರಮವಹಿಸುವ ಅಂಗ ಅಂದರೂ ತಪ್ಪೇನಲ್ಲ, ಆದರೆ ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದರೆ ರಕ್ತದಲ್ಲೂ ಮಿಶ್ರಣವಾಗುತ್ತದೆ. ಸೋಡಿಯಂ ರಕ್ತದೊಂದಿಗೆ ಬೆರೆತು ರಕ್ತ ಪಂಪ್ ಮಾಡುವಾಗ ಕಿಡ್ನಿ ಸಮಸ್ಯೆ ಎದುರಾಗಬಹುದು, ಇನ್ನೊಂದು ಮುಖ್ಯ ವಿಷಯವೆಂದರೆ ಕಿಡ್ನಿ ಸಮಸ್ಯೆ ಇರುವವರು ಕಡಿಮೆ ಉಪ್ಪು ತಿಂದರೆ ಸಮಸ್ಯೆ ಬೇಗ ನಿವಾರಣೆಯಾಗುತ್ತದೆ.