ಸಚಿವ ಗಡ್ಕರಿ ಹೊಸ ಸಂಶೋಧನೆ; ಮೂತ್ರ ಸಂಗ್ರಹಿಸಿದರೆ ದೇಶದ ರೈತರಿಗೆ ಸಾಕಾಗುವಷ್ಟು ಯೂರಿಯಾ ತಯಾರಿಸಬಹುದು..

0
423

ಕಸದಿಂದ ರಸವೆನ್ನುವ ರೀತಿಯಲ್ಲಿ ಮೂತ್ರದಿಂದ ಯೂರಿಯಾ ತಯಾರಿಸಬಹುದು ಎನ್ನುವ ಪರಿಕಲ್ಪನೆ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಇದು ನಗು ಪಾಟಿಗೆ ಒಳಗಾದರು ಸತ್ಯವಾಗಿದೆ. ಏಕೆಂದರೆ ತಮ್ಮ ಹೊಸ ಹೊಸ ಐಡಿಯಾಗಳಿಂದ ಹೆಚ್ಚು ಸುದ್ದಿಯಲ್ಲಿರುವ ನಿತಿನ್ ಗಡ್ಕರಿ ಅವರ ಹೊಸ ವಿಚಾರದಿಂದ ಮನುಷ್ಯರ ಮೂತ್ರ ಕೂಡ ಜೈವಿಕ ಇಂಧನ ತಯಾರಿಸಲು ಸಹಕಾರಿ ಅದು ಅಮೋನಿಯಂ ಸಲ್ಫೇಟ್ ಹಾಗೂ ನೈಟ್ರೋಜನ್ ಒದಗಿಸುತ್ತದೆ” ಎಂದು ತಿಳಿಸಿದ್ದಾರೆ.

Also read: ಭಾರತದಲ್ಲಿ ಮತ್ತೊಬ್ಬ ಯುವ ವಿಜ್ಞಾನಿ; ಸಮುದ್ರದಲ್ಲಿ ತ್ಯಾಜ್ಯ ತೆಗೆಯವ ಹಡಗು ಕಂಡುಹಿಡಿದ 12 ವರ್ಷದ ಬಾಲಕ..

ಮೂತ್ರದಿಂದ ಯೂರಿಯಾ?

ಹೌದು ಕೇಳುವುದಕ್ಕೆ ಸ್ವಲ್ಪ ವಿಚಿತ್ರ ಎನಿಸಿದರೂ ಗಡ್ಕರಿ ಇಂಥದ್ದೊಂದು ವಿಚಿತ್ರವಾದ ಕಲ್ಪನೆಯೊಂದನ್ನು ಸಂಶೋಧಕರಿಗೆ ಸಲಹೆ ತಿಳಿಸಿದ್ದಾರೆ. ಇಚ್ಚಿನ ದಿನಗಳಲ್ಲಿ ಕೃಷಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಆಮದಾಗುತ್ತಿದ್ದು, ಇದನ್ನು ತಡೆಗಟ್ಟುವುದಕ್ಕೆ ಗಡ್ಕರಿ ವಿನೂತನವಾದ ಕಲ್ಪನೆಯೊಂದನ್ನು ಪ್ರಸ್ತಾಪಿಸಿದ್ದಾರೆ. ಅದೇನೆಂದರೆ ಮೂತ್ರದ ಶೇಖರಣೆ! ಮತ್ತು ಅದರ ಬಗ್ಗೆ ಸರಿಯಾಗಿ ತಿಳಿದರೆ ರೈತರಿಗೆ ಬೇಕಾಗುವಷ್ಟು ಗೊಬ್ಬರವನ್ನು ನಾವೇ ತಯಾರಿಸಬಹುದು ಎಂದಿದ್ದಾರೆ.

Also read: ನೀವು ಈ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದೀರ? ಹಾಗಾದ್ರೆ ಪಕ್ಕಾ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಚ್ಚರ…

ಇಂತಹ ಮಹತ್ವದ ಸಂಶೋಧನೆ ನಾಗ್ಪುರ ಪುರಸಭೆ ಕಾರ್ಪೊರೇಷನ್ ನ ಮೇಯರ್ ಇನೋವೇಷನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ನಿತಿನ್ ಗಡ್ಕರಿ, ವಿಮಾನ ನಿಲ್ದಾಣಗಳಲ್ಲಿ ಮೂತ್ರವನ್ನು ಶೇಖರಿಸಲು ಸಲಹೆ ನೀಡಿದ್ದೇನೆ. ನಾವು ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾವನ್ನು ಆಮದು ಮಾಡಿಕೊಳ್ಳುತ್ತೇವೆ. ಆದರೆ ನಾವು ದೇಶದ ಜನತೆ ಮೂತ್ರ ಸಂಗ್ರಹಣೆ ಮಾಡಿದರೆ ಯೂರಿಯಾ ಆಮದು ಮಾಡಿಕೊಳ್ಳುವ ಅಗತ್ಯವೇ ಇರುವುದಿಲ್ಲ, ಮೂತ್ರದಲ್ಲಿ ವಿಶೇಷ ಸಾಮರ್ಥ್ಯವಿದೆ, ಮನುಷ್ಯನ ಮೂತ್ರದಿಂದ ಜೈವಿಕ ಇಂಧನವನ್ನೂ ತಯಾರಿಸಬಹುದು ಅದರಿಂದ ಅಮೋನಿಯಂ ಸಲ್ಫೇಟ್ ಹಾಗೂ ನೈಟ್ರೋಜನ್ ಲಭ್ಯವಾಗುತ್ತದೆ ಯಾವುದೂ ವ್ಯರ್ಥವಾಗುವುದಿಲ್ಲ. ಎಲ್ಲವೂ ಪ್ರಯೋಜನಕರ ಎಂದು ತಿಳಿಸಿದ್ದಾರೆ.

ತಲೆ ಕೂದಲಿಂದ ಅಮೈನೊ ಆ್ಯಸಿಡ್:

ಈ ವೇಳೆ ಮಾನವನ ತಲೆಕೂದಲು ಬಳಸಿ ಅಮೈನೊ ಆ್ಯಸಿಡ್ ಉತ್ಪಾದನೆಯ ವಿಚಾರವನ್ನು ಪ್ರಸ್ತಾಪಿಸಿರುವ ಅವರು, ನಾಗ್ಪುರದಲ್ಲಿ ಜಾಸ್ತಿ ಪ್ರಮಾಣದಲ್ಲಿ ತಲೆಕೂದಲು ಸಿಗದ ಕಾರಣ ನಾವು ಪ್ರತಿ ತಿಂಗಳು ತಿರುಪತಿಯಿಂದ 5 ಟ್ರಕ್ ತಲೆಕೂದಲನ್ನು ತರುತ್ತೇವೆ ಎಂದು ತಿಳಿಸಿದರು. ತಲೆಕೂದಲಿನ ಪ್ರಯೋಗ ಯಶಸ್ವಿಯಾದ ಬಳಿಕ ಅಮೈನೊ ಆ್ಯಸಿಡ್ ಉತ್ಪಾದನೆ ಶೇ.25 ರಷ್ಟು ಹೆಚ್ಚಾಗಿದೆ. ನಾವು ಈಗ ವಿದೇಶಕ್ಕೆ ಅಮೈನೊ ಆ್ಯಸಿಡ್ ಮಾರಾಟ ಮಾಡುತ್ತೇವೆ. ದುಬೈ ಸರ್ಕಾರ 180 ಕಂಟೈನರ್ ಬಯೋ ಗೊಬ್ಬರಕ್ಕೆ ಆರ್ಡರ್ ಮಾಡಿದೆ ಎಂದು ತಮ್ಮ ಸಾಧನೆಯನ್ನು ಕುರಿತು ಹೇಳಿ.

ಸಂಶೋಧನೆಗೆ ಸಹಕಾರವಿಲ್ಲ;

Also read: ನಿಜಕ್ಕೂ ಗೋಮೂತ್ರದಿಂದ ಇಷ್ಟೇಲ್ಲಾ ಖಾಯಿಲೆಗಳು ವಾಸಿಯಾಗುತ್ತಾ? ಇಲ್ಲಿದೆ ನೋಡಿ ಸತ್ಯ!!

ನನ್ನ ವಿನೂತನ ಕಲ್ಪನೆಗಳಿಗೆ ಯಾರೂ ಸಹಕಾರ ನೀಡುವುದಿಲ್ಲ, ಕಾರ್ಪೊರೇಷನ್ ಸಹ ನನ್ನ ಕಲ್ಪನೆಗಳಿಗೆ ಸಹಕರಿಸುವುದಿಲ್ಲ ಏಕೆಂದರೆ ಸರ್ಕಾರದಲ್ಲಿರುವ ಜನರನ್ನು ಆಚೆ ಈಚೆ ನೋಡದೇ ನುಗ್ಗುವ ಹೋರಿಗಳಂತೆ ತಯಾರು ಮಾಡಲಾಗುತ್ತದೆ ಎಂದು ಇದೇ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿತಿನ್ ಗಡ್ಕರಿ ಮೂತ್ರದಿಂದ ಗೊಬ್ಬರ ಮಾಡುವ ಕಲ್ಪನೆಯನ್ನು ಕೇವಲ ಸಲಹೆಗೆ ಸೀಮಿತ ಮಾಡದೇ ದೆಹಲಿಯಲ್ಲಿರುವ ತಮ್ಮ ಗಾರ್ಡನ್ ನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದಾರೆ. ಈಗಾಗಲೇ ಇದನ್ನು ತಮ್ಮ ತೋಟದಲ್ಲಿನ ಇಳುವರಿ ಇದರಿಂದ ಶೇ 25ರಷ್ಟು ಹೆಚ್ಚಾಗಿತ್ತು ಎಂದು ತಿಳಿಸಿದರು.