ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನ ಸುಳ್ಳು ಆರೋಪದ ಮೇಲೆ ಬಂಧಿಸಿದ್ದು ಹೇಗೆ ಗೊತ್ತಾ??

0
235

ಕುಲಭೂಷಣ್ ವಿಚಾರಣೆಯಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಅಂತಾರಾಷ್ಟ್ರೀಯ ನ್ಯಾಯಾಲಯ, ಪಾಕಿಸ್ತಾನ ಸೇನಾ ನ್ಯಾಯಾಲಯ ಕುಲಭೂಷಣ್ ಜಾಧವ್’ಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಅಮಾನತುಗೊಳಿಸಿದೆ. ಇದನ್ನು ಕೇಳಿ ಸಂತಸದಲ್ಲಿದ ಹಿಂದೂಸ್ತಾನಕ್ಕೆ ತಣ್ಣೀರೆರಚಿದ್ದು, ಕುಲಭೂಷಣ್ ಅವರನ್ನು ಬಿಡುಗಡೆ ಮಾಡಬೇಕೆಂಬ ಭಾರತದ ವಾದಕ್ಕೆ ಐಸಿಜೆ ಮನ್ನಣೆ ನೀಡಿಲ್ಲ. ಆದರೆ ಭಾರತ ತನ್ನ ನೆಲದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ನಂಬಿಸಲು ಹೋದ ಪಾಕಿಸ್ತಾನಕ್ಕೆ ಸೋಲಾಗಿದೆ. ಎನ್ನುವುದು ತಿಳಿದಿದೆ ಪಾಕ್ ಕುಲಭೂಷಣ್ ಅವರನ್ನು ಎಲ್ಲಿ ಹೇಗೆ ಬಂಧಿಸಲಾಗಿತ್ತು ಎನ್ನುವುದು ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಹೌದು ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿದ್ದ ಭಾರತದ ಕುಲಭೂಷಣ್ ಯಾದವ್​​ರ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪಿಗೆ ಭಾರತದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದ್ದು, ನ್ಯಾಯಾಲಯದ ತೀರ್ಪಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಗಣ್ಯರು ತೀರ್ಪನ್ನು ಸ್ವಾಗತಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇದು ನ್ಯಾಯ ಮತ್ತು ಸತ್ಯಕ್ಕೆ ಸಂದ ಜಯವಾಗಿದ್ದು, ಪ್ರಕರಣದಲ್ಲಿ ಜಾಧವ್ ಗೆ ಖಂಡಿತಾ ನ್ಯಾಯ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಾಕ್ ಕುಲಭೂಷಣ್ ಬಂದಿಸಿದ್ದು ಹೇಗೆ?

ಕುಲಭೂಷಣ್ ಜಾಧವ್ ಅವರು ಭಾರತದ ‘ರಾ’ ಏಜೆಂಟ್ ಆಗಿದ್ದು, ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಲು ಮತ್ತು ಭಯೋತ್ಪಾದನಾ ಕೃತ್ಯ ಎಸಗಲು ಬಂದಿದ್ದರು ಎಂದು ಪಾಕ್ ಆರೋಪಿಸಿತ್ತು. ಅವರು ನೌಕಾಪಡೆಯಿಂದ ನಿವೃತ್ತರಾದ ಬಳಿಕ ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಕಾರ್ಯನಿಮಿತ್ತ ಇರಾನ್‌ಗೆ ತೆರಳಿದ್ದಾಗ ಅವರನ್ನು ಅಲ್ಲಿಂದ ಅಪಹರಿಸಲಾಗಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರನ್ನು ತಪ್ಪಿತಸ್ಥ ಎಂದು ಸಾಬೀತುಮಾಡಲು ಪಾಕ್ ಪ್ರಯತ್ನಿಸುತ್ತಿದೆ ಎಂದು ವಾದಿಸಿತ್ತು. ಜಾಧವ್ ಅವರು ಸ್ವಯಂಪ್ರೇರಣೆಯಿಂದ ಪಾಕಿಸ್ತಾನಕ್ಕೆ ಬಂದಿರಲಿಲ್ಲ. ಅವರು ಇರಾನ್‌ನ ಸರವನ್ ಪ್ರದೇಶಕ್ಕೆ ಬಾಡಿಗೆ ಕಾರ್‌ನಲ್ಲಿ ಬಂದಿದ್ದರು. ಆಗ ಅವರನ್ನು ಹಿಡಿದು ಐಎಸ್‌ಐಗೆ ಒಪ್ಪಿಸಲಾಗಿತ್ತು ಎಂಬುದಾಗಿ ಬಲೂಚಿಸ್ತಾನ ಪ್ರತ್ಯೇಕತಾ ಸಂಘಟನೆಯ ಕಾರ್ಯಕರ್ತ ಮೆಹರಮ್ ಸರ್ಜೋವ್ ಹೇಳಿದ್ದರು.

ನಂತರ 2016ರ ಮಾರ್ಚ್ 25 ರಂದು ಕುಲಭೂಷಣ್ ಬಂಧನದ ಬಗ್ಗೆ ಭಾರತಕ್ಕೆ ಮಾಹಿತಿ ನೀಡಿದ ಪಾಕ್. ಜಾಧವ್ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ಪ್ರತಿಪಾದನೆ ಮಾಡಿತು. ಇದಕ್ಕೆ ಭಾರತ ಜಾಧವ್ ಅವರ ರಾಜತಾಂತ್ರಿಕ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿತು. ನಂತರ 2018ರ ಏಪ್ರಿಲ್ 8 ರಂದು ಖ್ವೆಟ್ಟಾದ ಭಯೋತ್ಪಾದನಾ ವಿರೋಧಿ ಇಲಾಖೆಯಲ್ಲಿ ಜಾಧವ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಪಾಕಿಸ್ತಾನ. 2017ರ ಏಪ್ರಿಲ್ 10 ರಲ್ಲಿ ಜಾಧವ್ ಅವರ ವಿರುದ್ಧ ಬೇಹುಗಾರಿಕೆ, ದುಷ್ಕೃತ್ಯ ಮತ್ತು ಭಯೋತ್ಪಾದನೆ ಆರೋಪದಲ್ಲಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ. ಗಲ್ಲು ಶಿಕ್ಷೆ ವಿಧಿಸಿತು.

2017ರ ಏಪ್ರಿಲ್ 15 ರಲ್ಲಿ ಜಾಧವ್ ಗಲ್ಲುಶಿಕ್ಷೆ ವಿರುದ್ಧ ನ್ಯಾಯಾಲಯದಲ್ಲಿ ಮನವಿ ಸಲ್ಲಿಸದಂತೆ ವಕೀಲರಿಗೆ ಎಚ್ಚರಿಕೆ ನೀಡಿದ ಪಾಕಿಸ್ತಾನದ ಬಾರ್ ಕೌನ್ಸಿಲ್. 2017ರ ಮೇ 8 ರಲ್ಲಿ. 1963ರ ವಿಯೆನ್ನಾ ಒಪ್ಪಂದ ಮತ್ತು ಅಂತಾರಾಷ್ಟ್ರೀಯ ನಾಗರಿಕ ಒಪ್ಪಂದ ಹಾಗೂ ರಾಜಕೀಯ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಭಾರತದಿಂದ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಯಿತು. ನಂತರ 2017ರ ಮೇ 15 ರಲ್ಲಿ ತಾತ್ಕಾಲಿಕ ತುರ್ತು ಕ್ರಮಕ್ಕೆ ಆಗ್ರಹಿಸಿ ಭಾರತದ ಮನವಿಯನ್ನು ಆಲಿಸಿದ ಐಸಿಜೆ. 2017ರ ಮೇ 18 ರಂದು, ಈ ಪ್ರಕರಣದ ತೀರ್ಪು ನೀಡುವವರೆಗೂ ಜಾಧವ್ ಅವರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಬಾರದು ಎಂದು ಪಾಕಿಸ್ತಾನಕ್ಕೆ ನ್ಯಾಯಾಲಯ ಸೂಚಿಸಿತು. ಅದರಂತೆ ಕುಲಭೂಷಣ ಜಾಧವ್ ಗಲ್ಲು ಶಿಕ್ಷೆ ಅಮಾನತು ಪಡಿಸಿ ಮರು ವಿಚಾರಣೆಗೆ ಆದೇಶಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ ಭಾರತದ ಪರ ಬುಧವಾರ ತೀರ್ಪು ನೀಡಿತ್ತು.