ಅತಿಯಾಗಿ ಸೆಲ್ಫೀ ತೆಗೆದುಕೊಳ್ಳುವುದು ಒಂದು ಮಾನಸಿಕ(ರಕ) ರೋಗ ಅಂತ ಹೇಳುತ್ತಿದೆ ಒಂದು ಹೊಸ ಸಂಶೋಧನೆ..

0
693

ಇಂದು ಮೊಬೈಲ್ ಎಲ್ಲರಿಗೂ ಬೇಕು. ಈ ಮೊಬೈಲ್ನಲ್ಲಿ ಕ್ಯಾಮರಾ ಕಡ್ಡಾಯ. ಅದರ ಪ್ರತಿಫಲವೇ ಸೆಲ್ಫೀ ಮೇನಿಯಾ. ಹೌದು… ಮೊಬೈಲಿನಲ್ಲಿ ಸೆಲ್ಫೀ ತಗೊಳೋದು ಅಂದರೆ ಎಲ್ಲಿಲ್ಲದ ಹುಚ್ಚು.. ಯಾರ ಕೈಯಲ್ಲಿ ನೋಡಿದ್ರೂ ಮೊಬೈಲ್ ಇದ್ದೇ ಇರುತ್ತೆ. ಅವರ ಗ್ಯಾಲೆರಿಯಲ್ಲಿ ಸೆಲ್ಫಿಗಳ ಸರಮಾಲೆಯೇ ಇರುತ್ತೆ. ಒಂದೆರಡು ಬಾರಿಯಾದರೆ ಒಕೆ. ಆದರೆ ಪ್ರತಿದಿನವೂ ಸೆಲ್ಫೀ ತೆಗೆಯುವ ಹುಚ್ಚರಿದ್ದಾರೆ. ಎಲ್ಲಿ ಹೋಗುತ್ತಾರೋ ಅಲ್ಲಿ ತಮ್ಮ ಫೊಟೋ ತೆಗೆಯುವ ಹುಚ್ಚು.

ಪ್ರವಾಸಿ ತಾಣಗಳಲ್ಲಿ ಮೊಬೈಲ್‌ ಫೋನ್‌ನಿಂದ ಸೆಲ್ಫಿ ಫೋಟೊ ತೆಗೆದುಕೊಳ್ಳುವ ವೇಳೆ ಆಕಸ್ಮಿಕ ಸಾವು ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಭಾರತ ನಂಬರ್ ಒನ್ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸೋದ್ಯಮ ಇಲಾಖೆ ರಾಜ್ಯದ 400ಕ್ಕೂ ಅಧಿಕ ಪ್ರದೇಶವನ್ನು “ನೋ ಸೆಲ್ಫಿ ಝೋನ್” ಎಂದು ಘೋಷಿಸಿತ್ತು. ಬೆಂಗಳೂರು ಸಮೀಪದ ನಂದಿಬೆಟ್ಟ, ಚಿಂತಾಮಣಿ ಬೆಟ್ಟ, ಗುಡಿಬಂಡೆ ಬೆಟ್ಟಗಳು ಕೂಡ ನೋ ಸೆಲ್ಫಿ ಝೋನ್‌ ವಲಯ. ರಾಜ್ಯದ ಕರಾವಳಿ ವಲಯ, ದಕ್ಷಿಣ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕ ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದರಿಂದ ಆಗುತ್ತಿರುವ ಅಪಾಯಗಳಾಗುತ್ತಿವೆ. ಈ ಹಿಂದೆ ರಾಜ್ಯದ ಅನೇಕ ಪ್ರವಾಸಿ ತಾಣಗಳಲ್ಲಿ ಸೆಲ್ಫಿ ತೆಗೆಯಲು ಹೋಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

ಸೆಲ್ಫೀ ತೆಗೆಯುವುದು ಒಂದು ರೋಗ ಎನ್ನುವುದು ಇದೀಗ ಸಾಬೀತಾಗಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸೆಲ್ಫಿ ತೆಗೆಯುವುದು ರೋಗವೆಂದು ಹೇಳಲಾಗಿದೆ. ಇದನ್ನು ಸೆಲ್ಫಿಟಿಸ್ ಎಂದು ಇಂಟರ್ ನ್ಯಾಷನಲ್ ಜರ್ನಲ್ ಆಫ ಮೆಂಟಲ್ ಹೆಲ್ತ್ ಹೇಳಿದೆ. ಬಿಹೇವಿಯರ್ ಸ್ಕೇಲ್ ನಲ್ಲಿ ಸೆಲ್ಫಿ ತೆಗೆಯುವ ಮಾನಸಿಕ ರೋಗವನ್ನು ಮೂರು ರೀತಿಯಲ್ಲಿ ವಿಂಗಡಿಸಲಾಗಿದೆ.

ಬಾರ್ಡರ್ ಲೈನ್:

ಈ ಹಂತದಲ್ಲಿರುವ ವ್ಯಕ್ತಿ ದಿನಕ್ಕೆ ಕನಿಷ್ಠ ಮೂರು ಬಾರಿ ಸೆಲ್ಫೀ ಕ್ಲಿಕ್ಕಿಸುಕೊಳ್ಳುತ್ತಾನೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾರ.

ಅಕೇಯ್ಯೂಟ್:

ಈ ಹಂತದಲ್ಲಿ ವ್ಯಕ್ತಿಯೊಬ್ಬ ದಿನಕ್ಕೆ ಮೂರು ಸೆಲ್ಫಿ ಕ್ಲಿಕ್ಕಿಸಿ, ಅಷ್ಟನ್ನೂ ಪೋಸ್ಟ್ ಮಾಡುತ್ತಾನೆ.

ಕ್ರಾನಿಕ್:

ಈ ಹಂತದಲ್ಲಿ ವ್ಯಕ್ತಿಯೊಬ್ಬ ಯಾವಾಗಲೂ ಸೆಲ್ಫಿ ಕ್ಲಿಕ್ಕಿಸುತ್ತಲೇ ಇರುತ್ತಾರೆ. ಅದರಲ್ಲಿ ಕನಿಷ್ಠ ಆರು ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.

ಈ ಸೆಲ್ಫಿ ಅನ್ನೋ‌ ಮಾಯೆ ಬರೀ ಖುಷಿಯನ್ನಷ್ಟೇ‌ ತಂದಿಲ್ಲ. ಬದಲಾಗಿ ಜೊತೆಗೆ ದುಃಖವನ್ನೂ‌ ತನ್ನೊಟ್ಟಿಗೇ ತಂದು ಬಿಟ್ಟಿದೆ. ಮೋಜು ಮಸ್ತಿಗಾಗಿ‌ ನಮ್ಮ ಜನ‌ ಏನನ್ನಾದರೂ ಮಾಡುತ್ತಾರೆ ಬಿಡಿ. ಅದೇನೆ ಮಾಡಿದರೂ ಜೀವಕ್ಕೆ ಅಪಾಯ ಬಂದೊದಗದಿದ್ದರೆ ಅಷ್ಟೇ ಸಾಕು‌. ಸೆಲ್ಫಿ ಅನ್ನೋ ಮಾಯೆಗೆ‌ ಬಲಿಯಾದವರೂ ಇದ್ದಾರೆ. ಅದೆಷ್ಟೋ ಜೀವಗಳು ಇದಕ್ಕೆ ಬಲಿಯಾಗಿದ್ದಾವೆ. ನಾವು ಅವಶ್ಯವಾಗಿ ತಿಳಿಯಲೇಬೇಕಾದ ಎರಡು ಪದಗಳೆಂದರೆ, ಒಂದು‌ ಅವಶ್ಯಕತೆ ಮತ್ತೊಂದು ಅನಿವಾರ್ಯ. ಇವೆರಡರ ಅರ್ಥವನ್ನು ಯುವ ಜನತೆ ಸರಿಯಾಗಿ‌ ತಿಳಿದುಕೊಂಡರೆ ಯಾವುದರಿಂದಲೂ ನಮಗೆ‌ ಅಪಾಯ ಮತ್ತು ಹಾನಿಯುಂಟಾಗುವುದಿಲ್ಲ. ಮೊಬೈಲ್‌ ನಮಗೆ ಅವಶ್ಯಕತೆ ಅಷ್ಟೇ ಹೊರತು ಅನಿವಾರ್ಯವಲ್ಲ. ಆದಷ್ಟು ಸೆಲ್ಫಿ ಹುಚ್ಚನ್ನು ಕಡಿಮೆ ಮಾಡಿಕೊಂಡರೆ ಅಪಾಯಗಳು ನಮ್ಮ ಬಳಿ ಸುಳಿಯೊಲ್ಲ ಅನ್ನೋದನ್ನ ಮಾನದಟ್ಟು ಮಾಡಿ ಕೊಳ್ಳಬೇಕಿದೆ.