ಬರಿಗೈಯಲ್ಲಿ ಪ್ರಾರಂಭ ಮಾಡಿದ ಮೈಸೂರು cycle ಬ್ರ್ಯಾಂಡ್ ಅಗರಬತ್ತಿ ವ್ಯಾಪಾರವನ್ನು ಸಾವಿರಾರು ಕೋಟಿಯ ಕಂಪನಿಯಾಗಿ ಮಾಡಿದ ಕನ್ನಡಿಗನ ಸಾಧನೆ, ನಿಮಗೂ ಸ್ಪೂರ್ತಿಯಾಗುತ್ತೆ..

0
698

ಮೈಸೂರು ಸೈಕಲ್ ಅಗರಬತ್ತಿ, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಪಾಕ ಹೀಗೆ ಹಲವಾರು ಉತ್ಪನಗಳನ್ನು ಮೈಸೂರು ಸಿರ್ಸಿಕೆ ಇದ ಪ್ರಾರಂಭವಾಗಿ ದೇಶವಿದೇಶಗಳಲ್ಲಿ ಮನ್ನಣೆ ಪಡೆದು ಮಾರಾಟವಾಗುತ್ತಿವೆ. ಈ ಬ್ರಾಂಡ್-ಗಳು ಎಲ್ಲರ ಮನೆಯಲ್ಲಿ ಇರುವುದು ಸಾಮಾನ್ಯವಾಗಿವೆ, ಅದರಲ್ಲಿ ಮೈಸೂರು ಸೈಕಲ್ ಬ್ರಾಂಡ್ ಅಗರಬತ್ತಿ ಉದ್ಯಮವನ್ನು ಬರಿ ಒಂದು ಸಾವಿರ ಬಂಡವಾಳ ಹೂಡಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ತಂದ ಕನ್ನಡಿಗರ ಸಾಧನೆ ಏನಾದರು ಸಾಧನೆ ಮಾಡಬೇಕು ಎನ್ನುವರಿಗೆ ಸ್ಪೂರ್ತಿಯಾಗುತ್ತೆ.

Also read: ಬಾಲ್ಯದಲ್ಲೇ ದೇಶವೇ ಮೆಚ್ಚುವಂತಹ ಸಾಧನೆ; ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೆರವಾಗುವ ಆಪ್‌ವೊಂದನ್ನು ಅಭಿವೃದ್ದಿ ಪಡಿಸಿದ ಬೆಂಗಳೂರಿನ ಬಾಲಕ..

ಹೌದು ದೇಶ ವಿದೇಶದಲ್ಲಿ ಸುವ್ವಾಸನೆ ಹರಡಿರುವ ಸೈಕಲ್ ಅಗರಬತ್ತಿಯನ್ನು ಎನ್.ರಂಗರಾವ್ ವಾಸನೆಯನ್ನು ಕಂಡು ಹಿಡಿದು ತಯಾರಿಸಲು ಶುರುಮಾಡಿ. 1948ರಲ್ಲಿ ಕೇವಲ ಒಂದು ಸಾವಿರ ರೂಪಾಯಿಲ್ಲಿ ಎನ್.ರಂಗರಾವ್ ಅಂಡ್ ಸನ್ಸ್ ಹೆಸರಿನಲ್ಲಿ ಉದ್ಯಮವನ್ನು ಆರಂಭಿಸಿದ್ದ ಕಡಿಮೆ ಅವಧಿಯಲ್ಲಿಯೇ ಜಾಗತಿಕ ಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸಿ, ಇಂದು ದೇಶಾದ್ಯಂತ 3 ಸಾವಿರಕ್ಕೂ ಅಧಿಕ ಸೇಲ್ಸ್ ಮೆನ್ ಗಳು, 5 ಸಾವಿರಕ್ಕೂ ಅಧಿಕ ಡಿಸ್ಟ್ರಿಬ್ಯೂಟರ್ಸ್ ಗಳು ಕಾರ್ಯನಿರ್ವಹಿಸುತ್ತಿರುವ ಸೈಕಲ್ ಬ್ರ್ಯಾಂಡ್ ಅಗರಬತ್ತಿ ಏಷ್ಯಾ, ಆಫ್ರಿಕಾ, ಯುರೋಪ್, ಲ್ಯಾಟಿನ್ ಅಮೆರಿಕ, ಮಧ್ಯ ಏಷ್ಯಾ, ಉತ್ತರ ಅಮೆರಿಕ ಸೇರಿದಂತೆ 65ಕ್ಕೂ ಅಧಿಕ ವಿದೇಶಗಳಿಗೆ ರಫ್ತಾಗುತ್ತಿದ್ದು ವಾರ್ಷಿಕ ವಹಿವಾಟು 2,500 ಕೋಟಿಗೂ ಅಧಿಕವಾಗಿದೆ ಅಂತೆ. ಇದಕ್ಕೆಲ್ಲ ಕಾರಣ ಎನ್.ರಂಗರಾವ್ ಅವರ ದಿಟ್ಟತನದ ದೈರ್ಯವಂತೆ.

ಯಾರು ಈ ಎನ್.ರಂಗರಾವ್ ?

ಎನ್.ರಂಗರಾವ್ ಕಡು ಬಡತನದ ಕುಟುಂಬದಲ್ಲಿ ಬೆಳೆದವರು ಇವರು ಮೂಲತ ಕನ್ನಡಿಗರಾಗಿದ್ದು, ಇವರ ತಂದೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು, ವಿಧಿ ಆಟದಂತೆ ರಂಗರಾವ್ 6 ವರ್ಷದ ಪುಟ್ಟ ಬಾಲಕನಾಗಿದ್ದಾಗಲೇ ತಂದೆ ಇಹಲೋಕ ತ್ಯಜಿಸಿದ್ದರು. ಆಗ ತಂದೆ ಯಾವುದೇ ಆಸ್ತಿ ಹಣವನ್ನು ಮಾಡಿರಲಿಲ್ಲ, ಮನೆಯ ಪರಿಸ್ಥಿತಿಯನ್ನು ನೀಗಿಸಲು ರಂಗರಾವ್ ಚಿಕ್ಕವರಿದ್ದಾಗಲೇ ಸ್ವಾಭಿಮಾನಿಯಾಗಿ ಬದುಕಲು ಮತ್ತು ತಮ್ಮ ವಿದ್ಯಾಭ್ಯಾಸದ ಫೀಸ್ ಕಟ್ಟಲು11ನೇ ವಯಸ್ಸಿನಲ್ಲಿಯೇ ಶಾಲೆಯ ಆವರಣದಲ್ಲಿ ಬಿಸ್ಕೆಟ್ ಮಾರಾಟ ಮಾಡುತ್ತಿದ್ದರಂತೆ. ಆ ಸಂದರ್ಭದಲ್ಲಿ ಮತ್ತೊಬ್ಬ ಹುಡುಗ ಸ್ಪರ್ಧೆಯೊಡ್ಡಿ ಬಿಟ್ಟಿದ್ದ! ಆಗ ರಂಗರಾವ್ ತನ್ನ ಬಳಿ ಬಿಸ್ಕೆಟ್ ಖರೀದಿಸಿದರೆ ಪೆಪ್ಪರ್ ಮೆಂಟ್ ಉಚಿತವಾಗಿ ಕೊಡುವುದಾಗಿ ಹೇಳಿಬಿಟ್ಟಿದ್ದರು. ಇದರಿಂದಾಗಿ ಬಿಸ್ಕೆಟ್ ಮಾರುತ್ತಿದ್ದ ಪ್ರತಿಸ್ಪರ್ಧಿ ಹುಡುಗನ ವ್ಯವಹಾರ ನಿಂತು ಹೋಗಿತ್ತಂತೆ! ಇದನ್ನೇ ಜೀವನದಲ್ಲಿ ವ್ಯವಹಾರದ ಜ್ಞಾನವನ್ನು ಅಳವಡಿಸಿಕೊಂಡರಂತೆ.

Also read: ಹಳ್ಳಿಯಿಂದ ಬಂದು ಕಂಪನಿ ಸ್ಥಾಪಿಸಿ; ದೇಶದ ಮೊದಲ ಕನ್ನಡದ ಯುವ ಉದ್ಯಮಿ ಪಟ್ಟಿಯಲ್ಲಿ ಸ್ನೇಹಾ ರಾಕೇಶ್..

1912ರಲ್ಲಿ ಜನಿಸಿದ್ದ ರಾವ್ ತಮ್ಮ 27ನೇ ವಯಸ್ಸಿಗೆ ವಿವಾಹವಾಗಿ ಮಾವನ ಮನೆಗೆ ಸೇರಿ 1939ರಲ್ಲಿ ಕೋ ಆಪರೇಟಿವ್ ಸ್ಟೋರ್ ನಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿಕೊಂಡು. 1944ರವರೆಗೆ ಕ್ಲರ್ಕ್ ಕೆಲಸ ಮಾಡುತ್ತಿದ್ದ ರಾವ್ ಸ್ವತಂತ್ರವಾಗಿ ಏನಾದರು ಮಾಡುವ ಆಸೆಯಿಂದ ಕ್ಲರ್ಕ್ ಕೆಲಸ ಬಿಟ್ಟು ಹುಣಸೂರು ಕಾಫಿ ಕ್ಯೂರಿಂಗ್ ವರ್ಕ್ಸ್ ಕೋ ಆಪರೇಟಿವ್ ಸ್ಟೋರ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಬಳಿಕ ಕೊಡಗಿನ ಪೋಲಿಬೆಟ್ಟದಲ್ಲಿರುವ ಕನ್ ಸೋಲಿಡೇಟೆಡ್ ಕಾಫಿ ಎಸ್ಟೇಟ್ ನ ಕೋ ಆಪರೇಟಿವ್ ಸ್ಟೋರ್ ನ ಮ್ಯಾನೇಜರ್ ಆದರು. ನಂತರ 1948ರಲ್ಲಿ ‘ಮೈಸೂರು ಪ್ರಾಡಕ್ಟ್ಸ್ ಆಯಂಡ್ ಜನರಲ್ ಟ್ರೇಡಿಂಗ್ ಕಂಪನಿ’ ಶಾಪ್ ಅನ್ನು ಆರಂಭಿಸಿಬಿಟ್ಟಿದ್ದರು. ಇದರ ನಡುವೆಯೇ ರಂಗರಾವ್ ಅವರು ಸೋಪ್ ಪೌಡರ್ ತಯಾರಿಸಲು ಸ್ಟಾರ್ಟ್ ಮಾಡಿ. ಶಿಕಾಕಾಯಿ ಹೇರ್ ಆಯಿಲ್ ಸ್ನೋ ಕ್ರೀಮ್, ಅಗರಬತ್ತಿ ತಯಾರಿಸುತ್ತಿದರು.

ಒಂದೂವರೆ ವರ್ಷದಲ್ಲಿ ಅಗರಬತ್ತಿ ವ್ಯವಹಾರವೇ ಹೆಚ್ಚು ಕೈಹಿಡಿತೊಡಗಿತ್ತು. ಅಗರಬತ್ತಿಯ ಬಗ್ಗೆ ಖುದ್ದು ರಂಗರಾವ್ ಅವರೇ ಹೆಚ್ಚು ತಿಳಿದುಕೊಳ್ಳತೊಡಗಿದರು. ಜೊತೆಗೆ ಹೊಸ, ಹೊಸ ಪ್ರಯೋಗಗಳನ್ನು ಮಾಡತೊಡಗಿದರು. ಇದರಿಂದ ಅಗರಬತ್ತಿ ವ್ಯವಹಾರ ಹೆಚ್ಚು ಜನಪ್ರಿಯವಾಗತೊಡಗಿತ್ತು. 1949-50ರ ಹೊತ್ತಿಗೆ ರಂಗರಾವ್ ಅವರು ಅಗರಬತ್ತಿ ಮಾರಾಟ ಮಾಡಲು ಬೇರೆ, ಬೇರೆ ಊರಿಗೆ ಹೋಗಲು ಆರಂಭಿಸಿದ್ದರು. ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಅಗರಬತ್ತಿಗೆ ಭಾರೀ ಬೇಡಿಕೆ ಇತ್ತು, ಹೀಗೆ ಹಂತ ಹಂತವಾಗಿ ಬೆಳೆಯಿತು. ನಂತರ 1948ರಲ್ಲಿ ಅಗರಬತ್ತಿ ಬ್ರ್ಯಾಂಡ್ ವಿಸ್ತರಿಸಲು ‘ಸೈಕಲ್’ ಚಿಹ್ನೆಯೇ ಇಟ್ಟು ಸೈಕಲ್ ಫ್ಯೂರ್ ಅಗರಬತ್ತಿ ಎಂದೇ ಬ್ರಾಂಡ್ ಮಾಡಿದರು.

Also read: ಸಾವಿರಾರು ಕಿ.ಲೋ ಮೀ ದೂರದಿಂದಲೇ ಮಕ್ಕಳ, ವಯಸ್ಸಾದವರ ಕಾಳಜಿ ವಹಿಸಬಹುದಾದ ಸ್ಮಾರ್ಟ್​ ಟಿ-ಶರ್ಟ್​ ಕಂಡು ಹಿಡಿದ 17ರ ಯುವಕ, ಇದರ ವಿಶೇಷತೆ ಹೇಗಿದೆ ಗೊತ್ತಾ??

ನಂತರ ಕಂಪನಿ ಬೆಳೆದು ಸೈಕಲ್ ತ್ರೀ ಇನ್ ಒನ್, ಲಿಯಾ, ರಿದಂ, ವುಡ್ಸ್, ಎನ್ ಆರ್ ಆಯಂಡ್ ಫ್ಲೂಟ್ ಪ್ರಮುಖ ಬ್ರ್ಯಾಂಡ್ ಗಳಾಗಿವೆ. ಇದೀಗ ಕಂಪನಿ ಗೃಹೋಪಯೋಗಿ ಸುಗಂಧ ದ್ರವ್ಯ ಉತ್ಪನ್ನಗಳು, ಮೇಣದಬತ್ತಿ, ಎಲೆಕ್ಟ್ರಾನಿಕ್ಸ್, ನೆಸ್ಸೋ, ಎನ್ ಆರ್ ಫೌಂಡೇಶನ್ ಹೀಗೆ ಅನೇಕ ವ್ಯವಹಾರಗಳನ್ನು ನಡೆಸುತ್ತಿದೆ. ರಂಗ ರಾವ್ ಅವರಿಗೆ ಏಳು ಗಂಡು, ಇಬ್ಬರು ಹೆಣ್ಣು ಮಕ್ಕಳು, ಇವರು 1980ರಲ್ಲಿ ವಿಧಿವಶರಾಗಿದ್ದರು. ಪ್ರಸ್ತುತ ಆರ್.ಎನ್ ಮೂರ್ತಿ ಅವರ ಪುತ್ರ ಅರ್ಜುನ್ ರಂಗಾ ಅವರು ಕಂಪನಿ ನಡೆಸುತ್ತಿದ್ದಾರೆ.