ದೂರವಾಣಿ ಹುಟ್ಟಿದ ಸ್ವಾರಸ್ಯಕರ ಕಥೆಯನ್ನು ಕೇಳಿದರೆ ನಿಜಕ್ಕೂ ಬೆರಗಾಗುತ್ತೀರ!!

0
2653

ಮಕ್ಕಳೇ ಇತ್ತೀಚಿನ ದಿನಗಳಲ್ಲಿ ದೂರವಾಣಿ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಅಲ್ಲವೇ? ಅದು ನಿಸ್ತಂತು (ಲ್ಯಾಂಡ್‍ಲೈನ್) ಆಗಿರಬಹುದು ಅಥವಾ ಸಂಚಾರಿ ದೂರವಾಣಿ ಆಗಿರಬಹುದು (ಮೊಬೈಲ್ ಫೋನ್) ಆಗಿರಬಹುದು. ಇವು ಇಲ್ಲದ ಜೀವನವನ್ನು ಊಹಿಸಿಕೊಳ್ಳುವುದೇ ಕಷ್ಟ! ಅಲ್ಲದೇ ದೂರವಾಣಿ ಅಥವಾ ಈ ಫೋನ್ ಗಳ ಮೂಲಕ ನಾವು ಸುಮಾರು ದೇಶ ಕಾಲದ ಎಲ್ಲೇ ಮೀರಬಹುದು. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಜನರೊಂದಿಗೆ ಸಂಪರ್ಕ ಸಾಧಿಸಬಹುದು. ದೂರವಾಣಿ ಕ್ಷೇತ್ರದಲ್ಲಿ ಇಷ್ಟೊಂದು ಕ್ರಾಂತಿಗೆ ಕಾರಣರಾದವರು ಒಬ್ಬರು ಇದ್ದಾರೆ. ಅವರೇ “ಅಲೆಗ್ಸಾಂಡರ್ ಗ್ರಾಹಂಬೆಲ್”. ಈಗ ನಾವೇನು ಸಾರ್ವಜನಿಕ ಕ್ಷೇತ್ರದಲ್ಲಿ ದೂರವಾಣಿ ಅಥವಾ ಮೊಬೈಲ್ ಫೋನ್ ಬಳಸುತ್ತೇವೆ ಹಾಗೆ ಉಪಯೋಗವಾಗಲಿ ಎಂಬ ದೃಷ್ಟಿಯಿಂದ ಬೆಲ್ ಇದನ್ನು ಕಂಡುಹಿಡಿಯಲಿಲ್ಲ ! ಕಿವುಡು ಹಾಗೂ ಮೂಗರಾಗಿದ್ದ ತನ್ನ ತಾಯಿ ಹಾಗೂ ಹೆಂಡತಿಯೊಂದಿಗೆ ಮಾತನಾಡಲು ಒಂದು ಸಾಧನ ಬೇಕಿತ್ತು ! ಆಗ ಜನ್ಮ ತಾಳಿದ್ದೆ ಈ ದೂರವಾಣಿ ! ತಾನು ಕಂಡು ಹಿಡಿದ ಸಾಧನ ಮುದೊಂದು ದಿನ ಪ್ರಪಂಚದಲ್ಲಿ ಮಹಾಕ್ರಾಂತಿ ಮಾಡುತ್ತದೆ ಎಂದು ಗ್ರಾಹಂಬೆಲ್ ಸಹ ಉಹಿಸಿರಲಿಲ್ಲವೆಂದು ಕಾಣುತ್ತದೆ!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಗ್ರಾಹಂಬೆಲ್ ಹುಟ್ಟಿದ್ದು ಸ್ಕಾಟ್‍ಲ್ಯಾಂದಿನ ಎಡಿನ್ ಬರ್ಗ್‍ನಲ್ಲಿ. ಮಾರ್ಚ್ 3, 1847 ರಂದು. ಮೂವರು ಮಕ್ಕಳಲ್ಲಿ ಮಧ್ಯದವನು ಇವನು. ಇವನ ಅಣ್ಣ ತಮ್ಮ ಇಬ್ಬರು ಕ್ಷಯದಿಂದ ಮರಣ ಹೊಂದಿದರು. ಎಡಿನ್ ಬರ್ಗ್‍ನ ರಾಯಲ್ ಸ್ಕೂಲ್‍ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದನು. ಅತ್ಯಂತ ಚುರುಕು ಹಾಗೂ ಬುದ್ಧಿವಂತನಾದ ಇವನಿಗೆ 16ನೇ ವಯಸ್ಸಿನಲ್ಲಿಯೇ ವೆಸ್ಟರ್ನ್ ಹೌಸ್ ಅಕಾಡೆಮಿಯಲ್ಲಿ ವಿದ್ಯಾರ್ಥಿ ಭೋದಕನಾಗಿ ಕೆಲಸಕ್ಕೆ ಸೇರಿದನು ಉತ್ತಮ ವಾಕ್ಪಟುತ್ವವವನ್ನು ಹೊಂದಿದ್ದ ಬೆಲ್ ಲಂಡನ್ ವಿಶ್ವವಿದ್ಯಾನಿಲಯದ ಕಾಲೇಜಿನಿಂದ ಪದವಿ ಪಡೆದನು. ನಂತರ ವಿಜ್ಞಾನ ಕ್ಷೇತ್ರದಲ್ಲಿ ಇವನ ಒಲವು ಹರಿಯಿತ್ತಲ್ಲದೇ ತನ್ನ ತಾಯಿಯ ಕಿವುಡುತನವನ್ನು ನಿವಾರಿಸುವ ಮಾರ್ಗೋಪಾಯವನ್ನು ಕಂಡುಹಿಡಿಯಲು ಮುಂದಾದನು.

ಗ್ರಾಹಂಬೆಲ್‍ನ ತಂದೆ ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಕಿವುಡು ಮೂಗರಿಗೆ ಸನ್ನೆಗಳ ಮೂಲಕ ಹೇಗೆ ಮಾತನಾಡುವುದು ಎಂಬ ಬಗ್ಗೆ ಪಾಠ ಮಾಡುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಗ್ರಹಂಬೆಲ್‍ಗೆ ಕಿವುಡು ಹಾಗೂ ಮೂಗರಿಗೆ ಮಾತನಾಡಲು ಉಪಯೋಗವಾಗುವಂತಹ ಸಾಧನೆವೊಂದನ್ನು ಕಂಡುಹಿಡಿಯಬೇಕೆಂದು ಆಸಕ್ತಿ ಬರುತ್ತಿತ್ತು. ಈತನಿಗಿದ್ದ ಸಾಮಥ್ರ್ಯ ಆಸಕ್ತಿ ಇವನಿಗೆ ಬೂಸ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ವೃತ್ತಿ ಸಿಗುವಂತೆ ಮಾಡಿತು. ಅಲ್ಲಿ ತನ್ಕ ಸಂಶೋದನೆಯನ್ನು ಮುಂದುವರೆಸಿದ ಗ್ರಾಹಂಬೆಲ್ ಕೊನೆಗೆ ದೂರವಾಣಿ ಕಂಡು ಹಿಡಿಯಲು ನಾಂದಿ ಹಾಡಿತು. ಈ ದೂರವಾಣಿ ಸಂಶೋಧನೆಗೆ ಆತ 1876 ರಲ್ಲಿ “ವಿಶಿಷ್ಟಾಧಿಕಾರಿ ಪತ್ರ’ (ಪೇಟೆಂಟ್) ನ್ನು ಸಹ ಪಡೆದುಕೊಂಡನು. ಇದಾದ ನಂತರವೂ ಆತ ಸಂವಹನದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದನು. ಇವು ಇಂದಿನ ‘ಆಪ್ಟಿಕಲ್ ಫೈಬರ್; ಕಂಡು ಹಿಡಿಯಲು ನಾಂದಿ ಹಾಡಿತು.

ಬೆಲ್‍ನ ಅನೇಕ ಸಂಶೋಧನೆಗಳಲ್ಲಿ ಹಲವಕ್ಕೆ ಪೆಟೆಂಟ್ ಸಿಕ್ಕಿದೆ. ಅದರಲ್ಲಿ 14 ಪೆಟೆಂಟ್‍ಗಳು ‘ದೂರವಾಣಿ’ ಹಾಗೂ ‘ತಾರಾಯಂತ್ರ’. ನಾಲ್ಲು ಪೇಟೆಂಟ್‍ಗಳು ಫೋಟೋಫೋನ್ ಗೆ ದೊರಕಿದೆ. ಗ್ರಾಹಂಬೆಲ್ ದೂರಶ್ರವಣಯಂತ್ರ. ಅಥವಾ ದೂರವಾಣಿಯನ್ನು ಕಂಡುಹಿಡಿಯದೇ ಇದ್ದರೆ ಇಂದು ಪ್ರಪಂಚದಲ್ಲಿ ಇಷ್ಟೊಂದು ಮೊಬೈಲ್ ಕ್ರಾಂತಿಯಾಗುತ್ತಿರಲಿಲ್ಲ.! ಕಿವುಡರು ಇಂದು ಉಪಯೋಗಿಸುವ ‘ಹಿಯರಿಂಗ್ ಏಡ್’ ಹುಟ್ಟಲಿಕ್ಕೆ ‘ಗ್ರಾಹಂಬೆಲ್’ ಕಾರಣ ಎಂದರೆ ತಪ್ಪಾಗಲಾರದು. ಆದರೆ ಗ್ರಾಹಂಬೆಲ್ ಕಂಡು ಹಿಡಿದ ದೂರಶ್ರವಣಯಂತ್ರದಲ್ಲಿ ತನ್ನ ತಾಯಿ ಹಾಗೂ ಹೆಂಡತಿಯೊಡನೆ ಎಂದು ಮಾತನಾಡಲಿಲ್ಲ ಎಂಬುದು ವಿಪರ್ಯಾಸ! 1922 ರಲ್ಲಿ ತನ್ನ 80ನೇ ವಯಸ್ಸಿನಲ್ಲಿ ಗ್ರಾಹಂಬೆಲ್ ನಿಧನಹೊಂದಿದನು.

ಪ್ರಕಾಶ್ ಕೆ ನಾಡಿಗ್
ಶಿವಮೊಗ್ಗ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522