ಹಾಕಿಕೊಳ್ಳಲು ಸರಿಯಾದ ಶೂಗಳು ಇಲ್ಲದಿದ್ದರೂ, ಭಾರತಕ್ಕೆ ಚಿನ್ನ ತಂದುಕೊಟ್ಟ ಸ್ವಪ್ನ ಬರ್ಮನ್-ರ ಕಥೆ ಕೇಳಿ; ಅವರ ಸಾಧನೆ ಸ್ಫೂರ್ತಿ ಮೂಡಿಸುತ್ತೆ!!

0
836

ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಧ್ವಜವನ್ನು ಬಹು ಎತ್ತರಕ್ಕೆ ಹಾರಿಸುತ್ತಿರುವುದು ಕ್ರೀಡಾಪಟುಗಳು. ಇಂತಹ ಸಾಧನೆ ಮಾಡುತ್ತಿರುವ ಕ್ರೀಡಾಪಟುಗಳು ಎಷ್ಟೊಂದು ಕಷ್ಟದಲ್ಲಿ ಬೇರೆ ಬೇರೆ ದೇಶದ ನೂರಾರು ನುರಿತ ಕ್ರೀಡಾಪಟುಗಳನ್ನು ಹಿಂದಿಕ್ಕಿ ಬಂಗಾರದ ಪದಕಕ್ಕೆ ಮುತ್ತಿಕ್ಕಿ ಭಾರತದ ಹೆಸರನ್ನು ಮತ್ತಷ್ಟು ಬೆಳೆಸುತ್ತಿರುವುದು ಯಾವ ಸಾಧನೆಗೂ ಕಡಿಮೆಯೇನಲ್ಲ. ಇಂತಹ ಸಾಧನೆಯಲ್ಲಿ ಹೆಚ್ಚಾಗಿ ಮಿಂಚುತ್ತಿರುವುದು ಬಡ ಕುಟುಂಬದಿಂದ ಬಂದ ಕ್ರೀಡಾಪಟುಗಳು.

ಇಂತಹ ಬಡಕುಟುಂಬದಿಂದ ಬಂದು ಸಾಧನೆ ಮಾಡಿದ ಕ್ರೀಡಾಪಟುಗಳು ಅಂದ್ರೆ ಕ್ರಿಕೆಟರ್ ಹರ್ಬಜನ್ ಸಿಂಗ್, ಉಮೇಶ್ ಯಾದವ್, ರನ್ನರ್ ಆಶಾ ರಾಯ್, ಪಿಟಿ ಉಷಾ, ಹೀಗೆ ನೂರಾರು ಕ್ರೀಡಾಪಟುಗಳು ಎಷ್ಟೊಂದು ಕಡು ಬಡತನದಲ್ಲಿ ಬಂದಿದ್ದಾರೆ ಅಂದ್ರೆ, ಒಂದು ಹೊತ್ತಿನ ಊಟಕ್ಕೂ ಪರದಾಡಿ ಹಾಕಿಕೊಳ್ಳಲು ಸರಿಯಾದ ಬಟ್ಟೆ, ಬೊಟ್ ಇಲ್ಲದೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ ಅವರ ಸಾಧನೆಗೆ ಎಷ್ಟು ಸಲಾಂ ಮಾಡಿದ್ರು ಕಡ್ಮಿನೆ. ಇಂತವರ ಸಾಲಿನಲ್ಲಿ ಬರುವ “ಸ್ವಪ್ನಾ ಬರ್ಮನ್ ” 2018ರ ಏಷ್ಯನ್ ಗೇಮ್ಸ್‍ನ ‘ಹೆಪ್ಟಾಥ್ಲಾನ್’ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತ ಮಹಿಳೆ ಎಂದು ಐತಿಹಾಸಿಕ ದಾಖಲೆಯನ್ನು ಬರೆದಿದ್ದಾಳೆ.

ಹೆಪ್ಟಾಥ್ಲಾನ್ ಅಂದರೆ, ಈ ಕ್ರೀಡೆಯಲ್ಲಿ ನಲ್ಲಿ 100 ಮೀ. ಅಡೆತಡೆ (ಹರ್ಡಲ್ಸ್) ಓಟ, ಹೈ ಜಂಪ್, ಶಾಟ್ ಪುಟ್, 200 ಮೀ. ಓಟ, ಲಾಂಗ್ ಜಂಪ್, ಜಾವೆಲಿನ್ ಥ್ರೋ ಮತ್ತು 800 ಮೀಟರ್ಸ್ ಸೇರಿರುತ್ತವೆ. ಎಲ್ಲಾ ಈವೆಂಟ್ ಗಳನ್ನು ಸೇರಿಸಿ ಹೆಚ್ಚಿನ ಅಂಕ ಪಡೆದವರು ವಿಜೇತರೆನಿಸಿಕೊಳ್ಳುತ್ತಾರೆ. ಈ ಹೆಪ್ಟಾಥ್ಲಾನ್ ಒಟ್ಟು 7 ಸ್ಪರ್ಧೆಯಲ್ಲಿ 6,026 ಅಂಕ ಪಡೆದು ಸ್ವಪ್ನಾ ಚಿನ್ನಕ್ಕೆ ಮುತ್ತಿಕ್ಕಿದರು. ನಾಲ್ಕು ವರ್ಷಗಳ ಹಿಂದೆಯೂ ಏಷ್ಯಾನ್ ಗೇಮ್ಸ್ ನಲ್ಲಿ ಸ್ವಪ್ನಾ 5,178 ಅಂಕ ಗಳಿಸಿ 5ನೇ ಸ್ಥಾನ ಪಡೆದಿದ್ದರು. ಸ್ವಪ್ನಾ ಬರ್ಮನ್ ಪಶ್ಚಿಮ ಬಂಗಾಳದಲ್ಲಿ ಹುಟ್ಟಿದ ಅವರಿಗೆ ಹುಟ್ಟುತ್ತಲೇ ತಮ್ಮ ಎರಡೂ ಕೈ ಹಾಗೂ ಎರಡೂ ಕಾಲುಗಳಲ್ಲಿ ತಲಾ ಆರು ಬೆರಳುಗಳನ್ನು ಹೊಂದಿದ್ದಾರೆ. ಬಡ ಕುಟುಂಬದಿಂದ ಬಂದಿರುವ ಸ್ವಪ್ನಾ ಬಾಲ್ಯದಲ್ಲಿರುವಾಗೆ ರಿಕ್ಷಾ ಚಾಲಕ ಆಗಿದ್ದ ತಂದೆ ‘ಪಂಚನನ್ ಬರ್ಮನ್’ ಅವರಿಗೆ ಪಾರ್ಶ್ವವಾಯು ತಗುಲಿತ್ತು ಅವರು ಇನ್ನೂ ಅನಾರೋಗ್ಯಕ್ಕೆ ತುತ್ತಾಗಿ ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ತಾಯಿ ಕುಟುಂಬಕ್ಕೆ ಆಧಾರವಾಗಿದ್ದರು, ಅಷ್ಟೇ ಅಲ್ಲದೇ ಮಗಳ ಕ್ರೀಡಾಭ್ಯಾಸಕ್ಕೂ ನೆರವಾದರು.

ಈ ಎಲ್ಲ ತೊಂದರೆಗಳಲ್ಲಿವೂ ಸಾಧನೆಯ ಗುರಿಯನ್ನು ಬಿಟ್ಟಿರಲಿಲ್ಲ ಈ ಪ್ರಯತ್ನದಿಂದ ಸ್ವಪ್ನಾ ಏಷ್ಯಾನ್ ಗೇಮ್ಸ್‍ಗೆ ಆಯ್ಕೆಯಾಗಿದ್ದರು. ಆದರೆ ಅವರ ಕಾಲಿಗೆ ಯಾವುದೇ ಕಂಪೆಯ ಶೂಗಳು ಸೂಕ್ತವಾಗುತ್ತಿಲ್ಲ. ಪ್ರತಿ ಟೂರ್ನಿಯಲ್ಲಿ ಸ್ಪರ್ಧಿಸುವ ವೇಳೆ ವಿಶೇಷ ಶೂಗಳನ್ನು ಆಯ್ಕೆ ಮಾಡುವುದೇ ದೊಡ್ಡ ಸಮಸ್ಯೆ ಆಗುತ್ತಿತ್ತು. ಇನ್ನು ಜಂಪ್ ಮಾಡಬೇಕಾದ ಸ್ಪರ್ಧೆಗಳ ವೇಳೆ ಶೂ ಸಮಸ್ಯೆಯಾಗಿ ಕಾಡುತ್ತಿತ್ತು. ಕಾರಣ ಜಿಗಿದು ನೆಲಕ್ಕೆ ಬರುತ್ತಿದ್ದಂತೆ ಶೂ ಕಳಚಿ ಬಿಳುತಿತ್ತು. ಇಲ್ಲವೇ ಬೆರಳು ಹಾಗೂ ಕಾಲು ನೋವು ಕಾಣಿಸಿ ಭಾರೀ ಸಮಸ್ಯೆ ಎದುರಿಸುತ್ತಿದ್ದರು. ಅದಕ್ಕಾಗಿ ನನ್ನ ಕಾಲಿಗೆ ಸರಿ ಹೋಗುವ ಶೂಗಳನ್ನು ತಯಾರಿಸಿ ಕೊಡಿ’ ಎಂದು ಏಷ್ಯನ್ ಗೇಮ್ಸ್ ನ ಹೆಪ್ಟಾಥ್ಲಾನ್ ಚಿನ್ನದ ಪದಕ ವಿಜೇತ ಸ್ವಪ್ನಾ ಬರ್ಮನ್ ಕೇಳಿಕೊಂಡಿದ್ದಾರೆ.