ಹೇಡಿಗಳಂತೆ ನಮ್ಮ ಸಿ.ಆರ್.ಪಿ.ಎಫ್. ಮೇಲೆ ದಾಳಿ ಮಾಡಿದ ಜೈಶ್-ಎ-ಮಹಮ್ಮದ್-ನ ನಾಯಕನನ್ನು ಭಾರತ ಸೆರೆ ಹಿಡಿದು ಬಿಟ್ಟು ಕಳುಸಿದ ರೋಚಕ ಕಥೆ ಇಲ್ಲಿದೆ ಓದಿ!!

0
540

ಜಮ್ಮು ಕಾಶ್ಮೀರ ರಾಜ್ಯದ ಪುಲ್ವಾಮ ಬಳಿ ನಡೆದೆ ಭಯೋತ್ಪಾದಕ ಉಗ್ರರ ಬಾಂಬ್ ದಾಳಿಗೆ ಈ ಕ್ಷಣದವರೆಗೆ 49 ಭಾರತೀಯ ವೀರಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.ಇಂತಹ ಭಯೋತ್ಪಾದನೆ ಕೃತ್ಯೆಕ್ಕೆ ಪಾಕಿಸ್ಥಾನ ಮೂಲದ ಜೈಶ್–ಎ–ಮಹಮ್ಮದ್ ಸಂಘಟನೆಯು ಕಾರಣವಾಗಿದ್ದು, ಈ ದಾಳಿ ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದೆ. ದಾಳಿ ನಡೆಸುವ ಮುನ್ನವೇ ಆದಿಲ್ ದಾರ್ ಸಂಘಟನೆಯ ಧ್ವಜದ ಮುಂದೆ ಶಸ್ತ್ರಸಜ್ಜಿತನಾಗಿ ನಿಂತು ತಾನು ಮಾಡಲು ಹೊರಟ ಕೃತ್ಯದ ಬಗ್ಗೆ ಮಾತನಾಡಿದ್ದಾನೆ. ಇದಕ್ಕೆ ಉತ್ತರ ನೀಡಿದ ಜೈಶ್–ಎ–ಮಹಮ್ಮದ್ ಸಂಘಟನೆಯು ಈ ಕೃತ್ಯ ನಡೆದಿದ್ದು ಅದನ್ನು ಮಾಡಿದ್ದು ನಾನೇ ಎಂದು ಒಪ್ಪಿಕೊಂಡಿದೆ.

Also read: ಸೇಡಿಗೆ ಸೇಡು, ರಕ್ತಕ್ಕೆ ರಕ್ತ; ಉಗ್ರರ ಸೆದೆ ಬಡೆಯಲು ಸಕಲ ಕ್ರಮ.. ಪಾಕಿಗೆ ನರೇಂದ್ರ ಮೋದಿ ಅವರಿಂದ ಖಡಕ್ ಸಂದೇಶ..

ಜೈಶ್–ಎ–ಮಹಮ್ಮದ್ ಯಾರು?

ಜೈಶ್–ಎ–ಮಹಮ್ಮದ್ ಒಬ್ಬ ಭಯೋತ್ಪಾದಕನ ಹೆಸರು ಆಗಿದ್ದು ಮತ್ತು ಜೈಶ್–ಎ–ಮಹಮ್ಮದ ಅದು ಮೌಲೋನಾ ಮಸೂದ್ ಅಜರ್ ಎನ್ನುವ ಡೆಡ್ಲಿ ಟೆರರಿಸ್ಟ್ ನಡೆಸುವ ಸಂಘಟನೆಯಾಗಿದೆ. ಈ ವ್ಯಕ್ತಿ ಮೂಲತ ಪಾಕಿಸ್ಥಾನದ ಪಂಜಾಬ್ ನವನು ಅವನು ಕರಾಚಿಯ ಇಸ್ಲಾಂಮಿಕ್ ಟ್ರಸ್ಟ್ ಶಾಲೆಯಲ್ಲಿ ಶಿಕ್ಷಣ ಪಡೆದುಕೊಂಡು. ನಂತರ ಹರ್ಕತುಲ್ ಅನ್ಸರ್ ಎಂಬ ಸಂಘಟನೆಯಲ್ಲಿ ಕೆಲಸಕ್ಕೆ ಸೇರಿಕೊಂಡ, ಮುಂದೆ ನೈಜೆರಿಯಾಕೆ ಹೋದ ನಂತರ UK ಗೆ ಹೋಗಿ ಫಂಡ್ ಕೂಡಿಸಿಕೊಂಡು ಒಂದು ದೊಡ್ಡ ಸಂಘಟನೆಯ ನಾಯಕನಾಗಿ ಬೆಳೆದು ನಿಂತ. ನಂತರ ಭಾರತಕ್ಕೆ ಮರಳಿ ವಿಶೇಷವಾಗಿ ಕಾಶ್ಮೀರಕ್ಕೆ ಬಂದ. ಈ ಸಮಯದಲ್ಲಿ ಕಾಶ್ಮೀರದಲ್ಲಿ ಎರಡು ಸಂಘಟನೆಗಳು ಘಲಾಟೆ ಮಾಡುತ್ತಿದವು ಅವುಗಳನ್ನು ಒಂದು ಮಾಡಿದ.

Also read: ಪುಲ್ವಾಮ ಆತ್ಮಾಹುತಿ ದಾಳಿಯ ಬಗ್ಗೆ ಭಾರತಕ್ಕೆ ಮೊದಲೇ ಸುಳಿವು ಸಿಕ್ಕಿತ್ತಾ?

ಮುಖ್ಯವಾಗಿ ಅಜರ್ ಕಾಶ್ಮೀರದ ಅಜಾದ್ ಕಾಶ್ಮೀರ್ ಹೋರಾಟವನ್ನು ಗಟ್ಟಿ ಮಾಡಲು ಬಂದವನು ವಿಚಿತ್ರವಾಗಿ ಭಾರತೀಯ ಸೈನಿಕರ ಕೈಯಲ್ಲಿ ಸಿಲುಕಿಕೊಂಡ. ಈ ವೇಳೆಯಲ್ಲಿ ಅವನ ಟ್ರ್ಯಾಕ್ ರೆಕಾರ್ಡ್ ನೋಡಿದಾಗ ಇವನು ದೊಡ್ಡ ಆತಂಕಕಾರಿ ಎಂದು ತಿಳಿಯಿತು. 1994 ನಲ್ಲಿ ಅವನನ್ನು ಬಂದಿಸಲಾಯಿತು 95-96 ನಲ್ಲಿ ಭಯೋತ್ಪಾದಕರು ಅವನ್ನು ಬಿಡುಗಡೆ ಮಾಡಬೇಕು ಎಂದು ವಿದೇಶಿ ಪ್ರವಾಶಿಗರನ್ನು ಕಾಶ್ಮೀರದಲ್ಲಿ ಕಿಡ್ನಾಪ್ ಮಾಡಿದರು. ಇದಕ್ಕೆ ಭಾರತ ಸರ್ಕಾರ ಒಪ್ಪಲಿಲ್ಲ ಆಗ ಆರು ವಿದೇಶಿಗರನ್ನು ಕೊಂದರು. ಆದರೆ ನಂತರ ಏನಾಯಿತು ಅಂತ ಯಾರಿಗೂ ತಿಳಿಯಲಿಲ್ಲ ಆದರೆ 99 ಅಲ್ಲಿ ಅಜಾರ್- ನನ್ನು ಬಿಡುಗಡೆ ಮಾಡಬೇಕು ಅಂತ IC 814 ಎನ್ನುವ ಒಂದು ವಿಮಾನವನ್ನು ಅಪಹರಿಸಲಾಯಿತು.

ಈ ವಿಷಯ ಬಹುತೇಕರಿಗೆ ನೆನಪಿರಬೇಕು ಅನಿಸುತ್ತೆ. ಆ ವಿಮಾನದಲ್ಲಿದ ಭಾರತೀಯರನ್ನು ಕಂದಹಾರಕ್ಕೆ ತೆಗೆದುಕೊಂಡು ಹೋಗಲಾಯಿತು. ಈ ವಿಮಾನದಲ್ಲಿರುವರನ್ನು ಬಿಡುಗಡೆ ಮಾಡಲು ಅಜರ್ ನನ್ನು ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಇಟ್ಟರು, ಆಗ ಅಟಲ್ ಜಿ ಅವರ ಸರ್ಕಾರವಿತ್ತು ಆಗ ಅಜರ್ ನನ್ನು ಬಿಡುಗಡೆ ಮಾಡಲು ಒಪ್ಪಲಿಲ್ಲ, ಈ ವಿಷಯ ತಿಳಿದ ವಿರೋಧ ಪಕ್ಷಗಳು ಅವನನ್ನು ಬಿಟ್ಟುಬಿಡಿ ಭಾರತೀಯರನ್ನು ಕಾಪಾಡಿ, ಅವನನ್ನು ಮತ್ತೆ ಹಿಡಿಯಬಹುದು ಎಂದು ಹೇಳಿ ವಿಚಿತ್ರವಾಗಿ ಆಡತೊಡಗಿದವು. ಆಗ ದೇಶದಲ್ಲಿ ಅವಮಾನಕರ ಕೆಟ್ಟ ಘಟನೆಯೊಂದು ನಡೆಯಿತು, ಇದು ಎಲ್ಲರಿಗೂ ಬೇಸರ ವಿಷಯವಾಗಿದೆ. ಅದು ಏನೆಂದರೆ ಭಾರತದ ವಿದೇಶಾಂಗ ಸಚಿವರು ತನ್ನ ಜೊತೆಗೆ ಅಜರ್ ನನ್ನು ವಿಮಾನದಲ್ಲಿ ಕೂರಿಸಿಕೊಂಡು ಹೋಗಿ ಅವನನ್ನು ವಿದೇಶಿ ನೆಲದಲ್ಲಿ ಬಿಟ್ಟು IC 814 ವಿಮಾನವನ್ನು ಕರೆದುಕೊಂಡು ಬರುವ ಪರಿಸ್ಥಿತಿ ಬಂತು.

Also read: ನಿಮಗೂ ಹುತಾತ್ಮ ಸೈನಿಕರ ಕುಟುಂಬಗಳಿಗೆ ಧನ ಸಹಾಯ ಮಾಡುವ ಇಚ್ಛೆ ಇದ್ರೆ ಈ ಆ್ಯಪ್​ ಮೂಲಕ ಹುತಾತ್ಮ ಸೈನಿಕರ ಕುಟುಂಬಕ್ಕೆ ನೆರವಾಗಿ..

ನಂತರ ಅದೇ ಮಸೂದ್ ಅಜರ್ 2001 ರಲ್ಲಿ ದೇಶದ ಪಾರ್ಲಿಮೆಂಟಿನ ಮೇಲೆ ಅಟ್ಯಾಕ್ ಮಾಡಿದ, 2008 ರಲ್ಲಿ ಮುಂಬೈನಲ್ಲಿ ಅಟ್ಯಾಕ್ ಮಾಡಿದ. ಅಷ್ಟೇ ಅಲ್ಲದೆ ಇದನ್ನು ನಾವೇ ಮಾಡಿದ್ದು ಎಂದು ಹೇಳಿಕೊಂಡರು. ನಂತರ 2016 ರಲ್ಲಿ ಪಟಾನ್ ಕೋಟ್ ಅಟ್ಯಾಕ್ ಆಯಿತು. ಅದೆಲ್ಲ ಮರೆಯುವ ಮುನ್ನವೇ 2019 ರಲ್ಲಿ ನಡೆದ ಈ ಪುಲ್ವಾಮ ಘಟನೆಗೆ ಜೈಶ್–ಎ–ಮಹಮ್ಮದ್ ಸಂಘಟನೆ ಕಾರಣವಾಗಿದೆ. ಇದನ್ನು ಕೂಡ ನಾವೇ ಮಾಡಿದ್ದು ಅಂತ ಹೇಳಿಕೊಳ್ಳುತ್ತಿದೆ. ಇದೆಲ್ಲ ನೋಡಿದರೆ ಆ ಒಬ್ಬ ಅಜರ್ ಎನ್ನುವ ಭಯೋತ್ಪಾದಕನನ್ನು ಬಿಟ್ಟಿದು ಎಷ್ಟೊಂದು ಘಟನೆ ನಡೆಯಲು ಕಾರಣವಾಗಿದೆ. ಆವತ್ತು ಏನಾದರು ಅವನನ್ನು ಬಿಟ್ತಿಲ್ಲವಾದರೆ ಆ ಸಂಘಟನೆ ಇಷ್ಟೊಂದು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಘಟನೆಗೆ ರಾಜಕೀಯ ಬಿಟ್ಟು ಎಲ್ಲರು ಒಂದಾಗಿ ಭಾರತದ ಸೈನ್ಯೆಕ್ಕೆ ಸಪೋರ್ಟ್ ಮಾಡಬೇಕು ಎನ್ನುವುದು ಎಲ್ಲರ ಆಸೆಯವಾಗಿದೆ.