ವಿಶ್ವದಲ್ಲೇ ವಿಚಿತ್ರ ಹೆರಿಗೆ; ಒಂದು ಮಗುವಿಗೆ ಜನ್ಮ ನೀಡಿದ 26 ದಿನಗಳ ಬಳಿಕ ಮತ್ತೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..

0
828

ಮಹಿಳೆಯರು ಒಂದು ಅಥವಾ ಎರಡು ಮಕ್ಕಳಿಗೆ ಜನ್ಮ ನೀಡುವುದು ಗೊತ್ತೇ ಇದೆ. ಒಂದು ವೇಳೆ ಎರಡು ಮಗುವಾದರೆ ಒಂದೇ ಸಮಯಕ್ಕೆ ಜನ್ಮ ನೀಡುವುದು ಸಾಮಾನ್ಯ ಆದರೆ ಇಲ್ಲೊಬ್ಬ ಮಹಾ ತಾಯಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಅದರಲ್ಲಿ ಏನೂ ವಿಶೇಷತೆ?. ಇದು ಬಹಳ ಹಳೆಯ ವಿಷಯ ಎನ್ನಬಹುದು ಆದರೆ ಇದು ವಿಶ್ವದಲ್ಲೇ ಮೊದಲನೇಯ ಕೇಸು ಎಂದು ವೈದ್ಯರು ಹೇಳಿದ್ದಾರೆ. ಅಂತಹ ಹೆರಿಗೆ ಆದರು ಆಗಿದ್ದು ಹೇಗೆ ಅಂದರೆ. ಈ ಮಹಿಳೆ ಒಂದು ಮಗುವಿಗೆ ಜನ್ಮ ನೀಡಿ ಮತ್ತೆ 26 ದಿನಗಳ ನಂತರ ಅವಳಿ (ಟ್ವಿನ್ಸ್) ಮಕ್ಕಳಿಗೆ ಜನ್ಮ ನೀಡುವುದರ ಮೂಲಕ ವೈದ್ಯರಿಗೆ ಅಚ್ಚರಿಯಾಗಿದ್ದಾಳೆ.


Also read: ಅನಾರೋಗ್ಯದಿಂದ ಹಾಸಿಗೆ ಹಿಡಿದ ಹೆಂಡತಿ ಕಷ್ಟಕ್ಕೆ ರಿಮೋಟ್‌ ಕಂಟ್ರೋಲ್‌ ಟಾಯ್ಲೆಟ್‌ ಬೆಡ್‌; ಕಾರ್ಮಿಕನ ಆವಿಷ್ಕಾರಕ್ಕೆ ರಾಷ್ಟ್ರೀಯ ಅನ್ವೇಷಣಾ ಪ್ರಶಸ್ತಿ..

ಹೆರಿಗೆಯಾಗಿ 26 ದಿನಗಳಲ್ಲಿ ಮತ್ತೆ ಹೆರಿಗೆ?

ಹೌದು ಬಾಂಗ್ಲಾದೇಶದಲ್ಲಿ 20 ವರ್ಷದ ಅರಿಫಾ ಸುಲ್ತಾನ ಎಂಬುವ ಮಹಿಳೆಯೊಬ್ಬಳು ಕಳೆದ ತಿಂಗಳು ನಾರ್ಮಲ್ ಡೆಲಿವರಿ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೊದಲ ಮಗುವಿನ ಡೆಲಿವರಿ ಮಾಡುವ ವೇಳೆ ವೈದ್ಯರು ಮಹಿಳೆ ದೇಹದಲ್ಲಿ ಎರಡನೇ ಗರ್ಭಾಶಯ ಇರುವುದನ್ನು ಗಮನಿಸಿರಲಿಲ್ಲ. ಅರಿಫಾ ಅವರಿಗೂ ನಾನು ಅವಳಿ ಮಕ್ಕಳ ಗರ್ಭಿಣಿ ಎಂಬ ವಿಷಯ ಗೊತ್ತಿರಲಿಲ್ಲ. ಆಕೆ ಮೊದಲ ಮಗುವಿಗೆ ಜನ್ಮ ನೀಡಿ 26 ದಿನದ ಬಳಿಕ ಆಕೆಯ ಹೊಟ್ಟೆಯಲ್ಲಿದ್ದ ನೀರು ಒಡೆದಿದೆ. ಆಗ ಆಸ್ಪತ್ರೆಗೆ ಕರೆದುಕೊಂಡ ಹೋದಾಗ ಮಹಿಳೆಯ ಹೊಟ್ಟೆಯಲ್ಲಿ ಮತ್ತೆರೆಡು ಮಗು ಇರುವುದು ಗೊತ್ತಾಗಿದೆ.


Also read: ಕೋತಿ ಮರಿಗೆ ತಾಯಿಯಾಗಿ ಹಾಲುಣಿಸುವ ನಾಯಿ; ತನ್ನ ಮರಿಯಂತೆ ಬೆನ್ನಮೇಲೆ ಹೊತ್ತು ರಕ್ಷಣೆ ನೀಡುತ್ತಿರುವ ನಾಯಿಅಮ್ಮನ ವೀಡಿಯೊ ಫುಲ್ ವೈರಲ್..

ಹೊಟ್ಟೆಯಲ್ಲಿ ಮತ್ತೆ ಎರಡು ಗಂಡು ಹೆಣ್ಣು ಮಗು

ಮೊದಲ ಬಾರಿ ನಾರ್ಮಲ್ ಹೆರಿಗೆಯಾಗಿತ್ತು. ಸಿಸೇರಿಯನ್ ಆಗಿದ್ದರೆ ಹೊಟ್ಟೆಯಲ್ಲಿ ಇನ್ನೂ ಎರಡು ಮಕ್ಕಳಿರುವ ವಿಷಯ ತಿಳಿಯುತ್ತಿತ್ತು ಎನ್ನುವ ವೈದ್ಯರಿಗೆ ಸ್ಕ್ಯಾನಿಂಗ್​ನಲ್ಲಿಯೂ ಈ ವಿಷಯ ಗೊತ್ತಾಗಿಲ್ಲ. ಗಂಡು ಮಗುವನ್ನು ನಾರ್ಮಲ್ ಡೆಲಿವರಿ ಮೂಲಕ ಹೆತ್ತ ಆರಿಫಾಗೂ ತನ್ನ ಹೊಟ್ಟೆಯಲ್ಲಿ ಇನ್ನೆರಡು ಮಕ್ಕಳಿರುವ ಬಗ್ಗೆ ಗೊತ್ತಿರಲಿಲ್ಲ. ಚಿಕಿತ್ಸೆ ನೀಡಿದ ವೈದ್ಯೆ ಶೀಲಾ ಪೊದ್ದಾರ್​. ಹೇಳಿದ್ದಾರೆ. ವೈದ್ಯೆರು ಸಿಸೇರಿಯನ್ ಮಾಡಿ ಅವಳಿ ಮಕ್ಕಳಾದ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಹೊರತೆಗೆದಿದ್ದಾರೆ. ಮಕ್ಕಳಿಬ್ಬರು ಆರೋಗ್ಯವಾಗಿದ್ದು, ಎರಡನೇ ಬಾರಿಗೆ ಸಿಸೇರಿಯನ್ ಮೂಲಕ ಅವಳಿ ಮಕ್ಕಳನ್ನು ಹೊರತೆಗೆಯಲಾಗಿದೆ. ಈ ಮೂಲಕ ಮಹಿಳೆಗೆ ಇಬ್ಬರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗು ಹುಟ್ಟಿದಂತಾಗಿದೆ.

ಘಟನೆಯ ಬಗ್ಗೆ ವೈದ್ಯರ ಹೇಳಿಕೆ

ಈ ಘಟನೆಯ ಬಗ್ಗೆ ಮಾತನಾಡಿದ ವೈದ್ಯರು ನಾನು ನನ್ನ 30 ವರ್ಷದ ವೈದ್ಯಕೀಯದ ಅನುಭವದಲ್ಲಿ ಇಂತಹ ಕೇಸ್ ನೋಡಿಲ್ಲ ಎಂದು ಜೆಸ್ಸೋರ್ ಜಿಲ್ಲಾಸ್ಪತ್ರೆಯ ವೈದ್ಯ ದಿಲೀಪ್ ರಾಯ್ ಹೇಳಿದ್ದಾರೆ. ಮೊದಲ ಹೆರಿಗೆ ಮಾಡಿಸಿದ ಆಸ್ಪತ್ರೆಯ ವೈದ್ಯರು ಅರಿಫಾಳ ಹೊಟ್ಟೆಯಲ್ಲಿ ಎರಡನೇ ಗರ್ಭಧಾರಣವನ್ನು ಪತ್ತೆ ಹಚ್ಚದ ಕಾರಣ ಖುಲ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರ ವಿರುದ್ಧ ದಿಲೀಪ್ ಕ್ರಮಕೈಗೊಂಡಿದ್ದಾರೆ. ಎಂದು ತಿಳಿಸಿದ್ದಾರೆ.


Also read: ಗಂಡು ಮಗುವಿಗೆ ಜನ್ಮ ನೀಡಿದ ತೃತೀಯ ಲಿಂಗಿ; ತಾಯ್ತನ ಅನ್ನೋದು ಕೇವಲ ಹೆಣ್ಣಿಗೆ ಮಾತ್ರ ಸೀಮಿತವಲ್ಲ ಎನ್ನುವ ಕಾಲ ಬಂದಾಯಿತು..

ಮಹಾತಾಯಿ ಆರಿಫಾ ಪ್ರತಿಕ್ರಿಯೆ

ಮೂರು ಮಕ್ಕಳಿಗೆ ವಿಚಿತ್ರ ಜನ್ಮ ನೀಡಿದ ಮಹಿಳೆ ಮಾತನಾಡಿ ನನಗೆ ಒಂದು ಕಡೆ ಸಂತೋಷ ವಾಗುತ್ತಿದೆ ಇನ್ನೊಂದು ಕಡೆ ದುಖವು ಆಗುತ್ತಿದೆ. ಏಕೆಂದರೆ ನನಗೆ ಮೂರು ಮಕ್ಕಳು ಬೇಡವಾಗಿತ್ತು. ನಾವು ತುಂಬಾ ಬಡವರಾಗಿದ್ದ ಕಾರಣ ಮೂರು ಮಕ್ಕಳನ್ನು ಸಾಕುವುದು ಹೊರೆಯಾಗುತ್ತೆ. ನನ್ನ ಗಂಡ ಕೂಲಿ ಕೆಲಸ ಮಾಡುತ್ತಿದ್ದು ತಿಂಗಳಿಗೆ 5 ರಿಂದ 6 ಸಾವಿರ ದುಡಿಯುತ್ತಾರೆ. ಅದರಲ್ಲಿ ಹೇಗೆ ಜೀವನ ಮಾಡುವುದು ತಿಳಿಯುತ್ತಿಲ್ಲ. ಹೇಗೋ ದೇವರ ಕೃಪೆಯಿಂದ ಮೂರು ಮಕ್ಕಳು ಆರೋಗ್ಯವಾಗಿದ್ದಾರೆ. ಈಗ ಮಕ್ಕಳನ್ನು ಸರಿಯಾಗಿ ಸಾಕುವುದು ನನ್ನ ಜವಾಬ್ದಾರಿ ಆಗಿದೆ.