ಕಳ್ಳತನವಾಗೋದು ಸರ್ವೇ ಸಾಮಾನ್ಯ, ಇದನ್ನು ಓದಿದ ಮೇಲೆ ಹೀಗೂ ಕಳ್ಳತನವಾಗಬಹುದಾ ಅಂತ ಆಶ್ಚರ್ಯ ಪಡ್ತೀರ!!

0
659

ನಿವೂ ಕಳವು ಮಾಡಿರೋದನ್ನು ಹೇಗೆಲ್ಲಾ ನೋಡಿರಿತ್ತೀರಿ.. ಆದ್ರೆ ಈ ಒಂದು ಸ್ಟೋರಿ ಸ್ವಲ್ಪ ಡಿಫ್ರೆಂಟ್ ಆಗಿದೆ. ಈ ಸ್ಟೋರಿ ಓದಿದ ಮೇಲೆ ಹೀಗೂ ಕಳವು ಮಾಡ ಬಹುದಾ ಎಂದು ನೀವು ಮೂಗಿನ ಮೇಲೆ ಬೆರಳು ಇಡಬಹುದು.

ಸಾಮಾನ್ಯವಾಗಿ ಭಾರತದಲ್ಲಿ ಸಂಪ್ರದಾಯದ ಪ್ರಕಾರ ಸತ್ತನಂತರ ವಿಧಿವಿಧಾನ ಮಾಡುತ್ತಾರೆ. ಅದು ಅವರ ಆಚಾರ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾಡುತ್ತಾರೆ. ಒಬ್ಬರು ಸತ್ತ ವ್ಯಕ್ತಿಯ ಶವ ಸುಡುತ್ತಾರೆ. ಇನ್ನು ಕೆಲವು ಸಂಪ್ರದಾಯದಂತೆ ಹೂಳುತ್ತಾರೆ. ಇದೇನಪ್ಪಾ ಮೇಲೆ ಎಲ್ಲಾ ಕಳುವು ಮಾಡುವ ಸುದ್ದಿ ಹೇಳ್ತೀವಿ ಎಂದು ಸಾವಿನ ಸುದ್ದಿ ಹೇಳ್ತಿದ್ದಾರಲ್ಲ ಎಂದು ನೀವು ಅಂದುಕೊಳ್ಳಬಹುದು. ಆದ್ರೆ ನಾವು ಹೇಳುವ ಸುದ್ದಿಗೂ ಹಾಗೂ ಕಳುವಿಗೂ ಸಂಬಂಧವಿದೆ.


ಘಟನೆ ಏನು:
ಅನಾರೋಗ್ಯದಿಂದ 75 ವರ್ಷದ ಪ್ರೇಮಾಬಾಯಿ ಇತ್ತೀಚಿಗೆ ಕಲಬೂರಗಿ ಜಿಲ್ಲೆಯ ಆಳಮದ ತಾಲೂಕಿನ ಖಜೂರಿ ಗ್ರಾಮದಲ್ಲಿ ಮೃತ ಪಟ್ಟಿದ್ದರು. ಮೃತಳಿಗೆ ಮಕ್ಕಳಿಲ್ಲ ಎಂದು ಅರಿತು ಗ್ರಾಮಸ್ಥರು, ಮಗನ ಸ್ಥಾನದಲ್ಲಿ ನಿಂತು ವಿಧಿವಿಧಾನವನ್ನು ಪೂರ್ಣಗೊಳಿಸಿದ್ರು. ಆಗ, ಅವಳ ಮೈ ಮೇಲೆ ಇದ್ದ ಬಂಗಾರವನ್ನು ಸಹ ಮಣ್ಣಿನಲ್ಲಿ ಹೂತಾಕಿದ್ದರು. ಗ್ರಾಮಸ್ಥರು ಆಕೆಯ ಮೈಮೇಲಿನ ಚಿನ್ನದ ಒಡವೆ ಸಮೇತ ಅಂತ್ಯಕ್ರಿಯೆ ನೆರವೇರಿಸಿದ್ದರು.

ಇದಾದ ಬಳಿಕ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋಗಿ ದೈನಂದಿನ ಕೆಲಸ ಮಾಡುತ್ತಿದ್ರೂ, ಆದ್ರೆ ಅದರಲ್ಲಿ ಒಬ್ಬನ ಕಣ್ಣು ಅಜ್ಜಿ ಹಾಕಿಕೊಂಡ ಒಡವೆಯ ಮೇಲೆ ಇತ್ತು. ಅದಕ್ಕೆ ಆತ ರಾತ್ರಿ ಎಲ್ಲಾ ನಿದ್ದೆ ಮಾಡದೇ ಒಂದು ಮಾಸ್ಟರ್ ಪ್ಲಾನ್ ರೆಡಿ ಮಾಡ್ತಾನೆ.
ಕಳೆದ ರಾತ್ರಿ ಸಂಭವಿಸಿದ ಸತ್ತ ಅಜ್ಜಿಯ ಮೇಲಿನ ಆಭರಣ ಕಳ್ಳನ ಕಣ್ಣು ಕೊರೆಸುತ್ತಿತ್ತು. ಕಾರಣ ಕಳ್ಳ ಸಮಾಧಿಯಿಂದ ಶವವನ್ನು ಹೊರ ತೆಗೆದು. ಅಜ್ಜಿಯ ಮೈಮೇಲಿನ 50 ಗ್ರಾಮ್ ಗೂ ಹೆಚ್ಚಿನ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದನೆ. ಇನ್ನು ಶವವನ್ನು  ಮತ್ತೆ ಹೂತು ಹೋಗಿದ್ರೆ, ಯಾರ ಕಣ್ಣಿಗೂ ಕಳುವು ಪ್ರಕರಣ ಬೀಳ್ತೀರಲಿಲ್ಲ. ಆದ್ರೆ ಕಳ್ಳ ಚಿನ್ನಾಭರಣ ದೋಚಿ ಶವ ಹೊರಗೆ ಬಿಟ್ಟು ಪರಾರಿಯಾಗಿದ್ದಾನೆ. ಶವ ಸಮಾಧಿಯಿಂದ ಹೊರ ಬಿದ್ದಿರುವುದನ್ನು ಕಂಡು ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.