ರಾಜ್ಯದಲ್ಲೇ ಇರುವ ವಿಚಿತ್ರ ಸಂಪ್ರದಾಯ; ಮನೆಯಲ್ಲಿ ಗಂಡು ಮಕ್ಕಳಿಗೆ ಮದುವೆಯಾದರೆ ಇಡಿ ಕುಟುಂಬದವರಿಗೆ ಬಿಳ್ಳುತ್ತೆ ಬೇಡಿ..

0
248

ಸಾಮಾನ್ಯವಾಗಿ ಅಪರಾಧ ಮಾಡಿದರೆ ಜನರಿಗೆ ಬೇಡಿಹಾಕುತ್ತಾರೆ. ಇಲ್ಲವಾದರೆ ಮಾನಸಿಕ ಅಸ್ತವ್ಯಸ್ತರಾಗಿ ಬೇರೆಯವರಿಗೆ ತೊಂದರೆ ನೀಡುತ್ತಿದ್ದರೆ ಮಾತ್ರ ಬೇಡಿ ಹಾಕುವುದು ನೋಡಿರುತ್ತಿರಾ. ಆದರೆ ರಾಜ್ಯದಲ್ಲೇ ಇರುವ ಒಂದು ಸಂಪ್ರದಾಯ ಕೇಳಿದರೆ ಒಂದು ಕ್ಷಣ ಗಾಡ ಯೋಚನೆಯಲ್ಲಿ ಬಿಳ್ಳುವುದು ತಪ್ಪೋದಿಲ್ಲ. ಏಕೆಂದರೆ ಮನೆಯಲ್ಲಿ ಗಂಡು ಮಕ್ಕಳ ಮದುವೆಯಾದರೆ ಮನೆಯವರೆಲ್ಲ ಬೇಡಿಹಾಕಿಕೊಂಡು ದೇವಸ್ಥಾನದಲ್ಲಿ ಇರಬೇಕು ಇದಕ್ಕೆ ಯಾವ ಜಾಮೀನು ನೀಡಿದರು ಈ ಶಿಕ್ಷೆ ಸಡಿಲಿಸುವುದಿಲ್ಲ, ಇದಕ್ಕೆ ದೇವರೆ ಜಾಮೀನು ನೀಡಿ ಬೇಡಿ ಕಳಚಿದರೆ ಮಾತ್ರ ಮನೆಗೆ ಹೋಗಿ ಸಂಸಾರ ಮಾಡಬೇಕು. ಇದು ಎಷ್ಟೇ ದಿನವಾದರೂ ಇಲ್ಲೇ ಇರಬೇಕು.

@publictv.in

Also read: ತನ್ನ ಜೀವನವನ್ನೇ ತ್ಯಾಗ ಮಾಡಿ ಮಗನ ಭವಿಷ್ಯಕ್ಕಾಗಿ ಶ್ರಮಿಸಿದ ಅಮ್ಮನಿಗೆ ಪುನರ್ ವಿವಾಹ ಮಾಡಿಸಿದ ಮಗ; ತಾಯಿಗೆ ಶುಭಾಶಯ ತಿಳಿಸಿದ್ದು ಹೀಗೆ..

ಹೌದು ವಿಚಿತ್ರ ಅನಿಸಿದರು ಸತ್ಯವಾಗಿರುವ ಈ ಘಟನೆ ಇರುವುದು ಬೇರೆಲ್ಲೂ ಅಲ್ಲ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ಇಂಥದ್ದೊಂದು ಬೇಡಿ ಸಂಪ್ರದಾಯ ನೂರಾರು ವರ್ಷಗಳಿಂದ ಇಲ್ಲಿ ನಡೆದುಕೊಂಡು ಬರುತ್ತಿದೆ. ಸದ್ಯ ದೇವಾಲಯಕ್ಕೆ ಇಲ್ಲಿನ ಮುಜಾವರ್ ಎಂಬ ಕುಟುಂಬದಲ್ಲಿ ಸುಮಾರು 18 ಜನ ದೇವಸ್ಥಾನದಲ್ಲೇ ವಾಸ್ತವ್ಯ ಹೂಡಿದ್ದಾರೆ. ಕಳೆದ 15 ದಿನಗಳಿಂದ ಕಾಲಿಗೆ ಕಬ್ಬಿಣದ ಸಣ್ಣ ಸರಳಿನಿಂದ ಮಾಡಿದ ಬೇಡಿ ಕಟ್ಟಿಕೊಂಡು ದೇವಸ್ಥಾನದಲ್ಲೇ ಅಡ್ಡಾಡುತ್ತಿದ್ದಾರೆ.

ಏನಿದು ಸಂಪ್ರದಾಯ?

ಹೌದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ದಾವಲ್‌ಮಲ್ಲಿಕ್ ದೇವಸ್ಥಾನದ ಅರ್ಚಕರಾದ ಮುಜಾವರ ಕುಟುಂಬದಲ್ಲಿ ಇಂತಹದೊಂದು ವಿಶಿಷ್ಟ ಸಂಪ್ರದಾಯ ಆಚರಣೆಯಲ್ಲಿದೆ. ದಾವಲ್‌ಮಲ್ಲಿಕ್ ಮುಸ್ಲಿಂ ದೇವರಾದರೂ ಇಲ್ಲಿ ಹಾಲುಮತಸ್ಥ ಸಮುದಾಯದ ಮುಜಾವರ ಕುಟುಂಬವೇ ಅರ್ಚಕರಾಗಿದ್ದಾರೆ. ಈ ಅರ್ಚಕ ಕುಟುಂಬದಲ್ಲಿ ಗಂಡುಮಕ್ಕಳ ಮದುವೆಯಾದರೆ ಕುಟುಂಬಸ್ಥರೆಲ್ಲರೂ ಕೋಳವನ್ನು ಕಾಲಿಗೆ ಕಟ್ಟಿಕೊಂಡು ದೇವಾಲಯದಲ್ಲೇ ವಾಸ್ತವ್ಯ ಹೂಡಬೇಕು. ಅದು ವಾರ, ತಿಂಗಳು ಎಷ್ಟೇ ವರ್ಷವಾದರೂ ಸರಿ. ತಾವೇ ತಾವಾಗಿ ಬೇಡಿ ಬಿಚ್ಚುವಂತಿಲ್ಲ. ದೇವರೇ ಅದನ್ನು ಕಳಚಬೇಕು. ಅಷ್ಟೇ ಅಲ್ಲ ಹೀಗೆ ಬೇಡಿ ಹಾಕಿಕೊಂಡವರು ಪ್ರತಿದಿನ ಬೆಳಗ್ಗೆ ಗ್ರಾಮದಲ್ಲಿ ಕಂತಿಭಿಕ್ಷೆ ಬೇಡಿಯೇ ಪ್ರಸಾದ ಸೇವಿಸುತ್ತಾರೆ. ರಾತ್ರಿ ದೇವಸ್ಥಾನದಲ್ಲೇ ಮಲಗಬೇಕು.

@publictv.in

Also read: ಈ ಸ್ಟೋರಿ ನೋಡಿದ ಬಳಿಕ ಕೃಷಿಕ ಯುವಕರನ್ನು ಮದುವೆಯಾಗಲು ಒಪ್ಪದ ಯುವತಿಯರು ಕ್ಯೂ ನಿಂತರೂ ಅಚ್ಚರಿ ಇಲ್ಲ..

ಈ ಸಂಪ್ರದಾಯದ ಹಿನ್ನೆಲೆ:

ಹೀಗೆ ಬೇಡಿ ಹಾಕಿಕೊಂಡವರು ತಿಂಗಳ ಮೇಲೆ ನಿಲ್ಲೋದಿಲ್ಲ. ಯಾಕೆಂದರೇ, ಅಷ್ಟರಲ್ಲಿ ಹೇಗೂ ತನ್ನಿಂತಾನೇ ಬೇಡಿ ಕಳಚಲೇ ಬೇಕು. ಅದು ದೇವರ ಪವಾಡ ಎನ್ನುತ್ತಾರೆ ಅರ್ಚಕರು. ಇನ್ನು ಈ ಬೇಡಿ ಆಚರಣೆ ಹೇಗೆ ಬಂತು ಎಂದು ನೋಡುವುದಾದ್ರೆ ಆಂಗ್ಲರ ಆಳ್ವಿಕೆಯಲ್ಲಿ ವಿಜಯಪುರ ಬದಲು ಕಲಾದಗಿ ಜಿಲ್ಲೆಯಾಗಿತ್ತು. ಕಂದಾಯ ಸರಿಯಾಗಿ ಕಟ್ಟಲಿಲ್ಲ ಎಂಬ ಕಾರಣಕ್ಕೆ ಬ್ರಿಟಿಷರು ಗ್ರಾಮದ ಗೌಡರು, ಕುಲಕರ್ಣಿಗಳನ್ನು ಕಲಾದಗಿಯ ಜೈಲಿಗೆ ಕರೆದೊಯ್ದಿರುತ್ತಾರೆ. ಆಗ ವಾಲೀಕಾರರಾಗಿದ್ದ ಈಗಿನ ಮುಜಾವರ ಕುಟುಂಬದ ಹಿರಿಯ ಹೊನ್ನಜಾಂಜಪ್ಪ ಜೈಲಿಗೆ ಅವರಿಗೆ ಕಾಣಲೆಂದು ಹೋಗಿರುತ್ತಾರೆ. ಆಗ ಅಲ್ಲೇ ಹತ್ತಿರದಲ್ಲೊಂದು ದಾವಲ್ ಮಲಿಕ್‌ರ ಪಾಳು ಬಿದ್ದ ಗುಡಿ ಇರಲಾಗಿ ಅಲ್ಲಿ ರಾತ್ರಿ ತಂಗುತ್ತಾರೆ.

@publictv.in

Also read: ಈ ಊರಿನಲ್ಲಿ ಮದುಮಗ ಶೃಂಗಾರಗೊಂಡು ಮನೆಯಲ್ಲೇ ಇರಬೇಕು; ಏಕೆಂದರೆ ವಧುವಿಗೆ ತಾಳಿ ಕಟ್ಟಿ ಮದುವೆಯಾಗುವುದು ವರನ ಸಹೋದರಿ ಅಂತೆ..

ಆಗ ಆತ ದೇವರೇ ನಮಗೆ ಈ ಸರ್ಕಾರದ ಬೇಡಿ ಬೇಡ, ಬೇಕಿದ್ದರೆ ನಿನ್ನ ಬೇಡಿ ತೊಡಿಸು ಎಂದು ಪ್ರಾರ್ಥನೆ ಮಾಡುತ್ತಾರೆ. ಬಳಿಕ ಕನಸಿನಲ್ಲಿ ಬಂದ ದಾವಲ್‌ಮಲ್ಲಿಕ್‌ರು ಜೈಲಿನ ಕಚೇರಿಯಲ್ಲೊಂದು ಕುದುರೆಯಿದ್ದು ಅದನ್ನು ಯಾರೂ ಪಳಗಿಸಲಾಗಿಲ್ಲ. ಅದನ್ನು ನೀನು ಪಳಗಿಸಿದರೆ ಬ್ರಿಟಿಷರು ಕುದುರೆಯೊಂದಿಗೆ ನೀನು ಬೇಡಿದ್ದನ್ನು ನೀಡಲಿದ್ದಾರೆ ಎನ್ನುತ್ತಾರೆ. ಆದರೆ, ಕುದುರೆ ಪಳಗಿಸುವ ಶಕ್ತಿ ತಮ್ಮಲಿಲ್ಲವೆನ್ನಲಾಗಿ ದಾವಲ್‌ಮಲ್ಲಿಕ್‌ರು ಆ ಶಕ್ತಿ ನಿನಗೆ ಸಿಕ್ಕಿದೆ ಹೋಗೆನ್ನುತ್ತಾರೆ. ಅದರಂತೆ ಹೊನ್ನಜಾಂಜಪ್ಪ ಕುದುರೆ ಪಳಗಿಸಲಾಗಿ ಅಂದುಕೊಂಡಂತೆ ಕುಲಕರ್ಣಿ ಹಾಗೂ ಗೌಡರು ಬಿಡುಗಡೆಗೊಳ್ಳುತ್ತಾರೆ. ಮರಳಿ ಬರುವಾಗ ಎಲ್ಲರೂ ದೇವರ ದರ್ಶನ ಪಡೆದು ಇನ್ಮುಂದೆ ನಿನಗಾಗಿ ಬೇಡಿ ಹಾಕಿಕೊಳ್ಳುತ್ತೇವೆಂದು ಬೇಡಿಕೊಳ್ಳುತ್ತಾರೆ.

ಅಂದಿನಿಂದ ಈ ಸಂಪ್ರದಾಯ ಮುಂದುವರೆದಿದ್ದು ದೇವರು ಅಪ್ಪಣೆ ಕೊಟ್ಟು ತನ್ನಿಂದ ತಾನೇ ಕೋಳ ಮುರಿಯುವ ವರೆಗೂ ಯಾವೊಬ್ಬ ಕುಟುಂಬದ ಸದಸ್ಯ ಕೂಡ ಮನೆಗೆ ಹೋಗಿ ಸಂಸಾರ ಮಾಡುವಂತಿಲ್ಲ. ಈಗಾಗಲೇ 6 ಜನರ ಬೇಡಿ ಕಳಚಿದ್ದು ಇನ್ನುಳಿದ 18 ಜನ ದೇವರ ಕೃಪೆಗಾಗಿ ಕಾದಿದ್ದಾರೆ.

ಮಾಹಿತಿ ಕೃಪೆ: Public tv