ಬೀದಿ ಬದಿಯ ವ್ಯಾಪಾರಿಗಳು ಆಹಾರ ಪದಾರ್ಥವನ್ನು ಪೇಪರ್-ನಲ್ಲಿ ಸುತ್ತಿ ಕಟ್ಟುವುದನ್ನು ತಡೆಯಿರಿ, ಇಲ್ಲಾಂದ್ರೆ ಆಹಾರ ಕ್ಯಾನ್ಸರ್ ಕಾರಕ ವಿಷವಾಗುತ್ತದೆ!!

0
694

ಪ್ಲಾಸ್ಟಿಕ್ ಬ್ಯಾನ್ ಮಾಡಿರುವದು ಎಲ್ಲರಿಗೂ ಗೊತ್ತೇ ಇದೆ. ಪ್ಲಾಸ್ಟಿಕ್ ಬದಲಿಗೆ ಬೀದಿ ವ್ಯಾಪರಾಸ್ಥರು ಪೇಪರ್ ಪಟ್ಟಣಗಳಲ್ಲಿ ವಸ್ತುಗಳನ್ನು ಹಾಕಿ ನಿಮಗೆ ಕೊಡುತ್ತಾರೆ. ಈ ಬಗ್ಗೆ ಪುಣೆ ಬೋರ್ಡ್ ಸರ್ವಾಜನಿಕ ನೋಟಿಸ್ ಹೊರಡಿಸಿದೆ. ಇಂತಹ ಪೇಪರ್ ಪೊಟ್ಟಣಗಳಲ್ಲಿನ ಖಾದ್ಯಗಳನ್ನು ಉಪಯೋಗಿಸದಂತೆ ಸುತ್ತೋಲೆಯನ್ನು ಹೊರಡಿಸಿದೆ.

ಕಳೆದ ವರ್ಷ ಪೇಪರ್ ಪೊಟ್ಟಣಗಳಲ್ಲಿಯೂ ಆಹಾರವನ್ನು ನೀಡದಂತೆ ಸೂಚಿಸಲಾಗಿತ್ತು. ಆದರೂ ಸಹ ಭಾರತದಲ್ಲಿ ೧೦ ಮಿಲಿಯನ್ ವ್ಯಾಪರಸ್ತರು ಇಂದಿಗೂ ಪೇಪರ್ ಕವರ್‌ಗಳನ್ನೇ ಬಳಸುತ್ತಾರೆ. ಇದರಲ್ಲಿನ ಆಹಾರವನ್ನು ಸೇವಿಸುವದರಿಂದ ಆರೋಗ್ಯಕ್ಕೆ ಹಾನಿ ಎಂದು ಸಂಶೋಧನೆಗಳು ತಿಳಿಸಿವೆ.

ಪೇಪರ್‌ಗಳಲ್ಲಿ ಬಳಸುವ ಇಂಕ್‌ನಲ್ಲಿ ವಿಷ ಪೂರಿತ ಅಂಶಗಳು ಅಡಗಿರುತ್ತವೆ ಎಂದು ತಿಳಿಸಲಾಗಿದ್ದು, ಇದನ್ನು ಸೇವಿಸುವದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದೇ ಸಂಶೋಧಕರ ವಾದವಾಗಿದೆ. ಪೇಪರ್‌ಗಳಲ್ಲಿ ಬಳಸು ಸೂಕ್ಷ್ಮ ಕೆಮಿಕಲ್ಸ್‌ಗಳು ಮನುಷ್ಯನಿಗೆ ಹಾನಿ ಉಂಟು ಮಾಡುತ್ತವೆ.

ಹೈಜನಿಕ್ ಆಗಿ ಖಾದ್ಯವನ್ನು ತಯಾರಿಸಿದರೂ ಸಹ, ಪೇಪರ್‌ಗಳಲ್ಲಿ ಅವುಗಳನ್ನು ಹಾಕುವದರಿಂದ ಅದರಲ್ಲಿನ ಸೂಕ್ಷ್ಮ ಕಣಗಳು ಮನುಷ್ಯನ ಅಂಗದಲ್ಲಿ ಸೇರಿ ಹಾನಿಯುಂಟು ಮಾಡುತ್ತವೆ ಎಂಬುದೇ ವಿಜ್ಞಾನಿಗಳ ವಾದ.

ಸಂಘಟಿತವಲ್ಲದ ಆಹಾರ ಮಾರಾಟಗರರು, ಗ್ರಾಹರಿಗೆ ನ್ಯೂಸ್ ಪೇಪರ್ ಗಳಲ್ಲಿ ಆಹಾರ ಪದಾರ್ಥ ಕಟ್ಟಿ ಕೊಡದಂತೆ ಸುತ್ತೊಲೆ ನೀಡಲಾಗಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಫ್ ಎಸ್ ಎಸ್ಎ ಐ ಆಯುಕ್ತರು ಸೂಚಿಸಿದ್ದಾರೆ.

ಪೇಪರ್‌ಗಳಲ್ಲಿ ಕಟ್ಟುವುದು ಏಕೆ ಬೇಡ?

ನ್ಯೂಸ್ ಪೇಪರ್ ಮುದ್ರಣಕ್ಕೆ ಬಳಸುವ ಮಸಿಯಲ್ಲಿ ವಿಷ ಪೂರಿತ ರಾಸಾಯನಿಕಗಳು, ಬಣ್ಣಗಳು, ರೋಗಕಾರಗಳು, ಸೂಕ್ಷ್ಮ ಜೀವಿಗಳಿದ್ದು ಮನುಷ್ಯನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ.