ಸ್ಟ್ರೆಸ್ ಜಾಸ್ತಿ ಮಾಡ್ಕೊಂಡ್ರೆ ಕೆಳಗಿನ ಲಕ್ಷಣಗಳು ಕಾಣಿಸ್ಕೊಳೋದು ಗ್ಯಾರಂಟೀ !!!

0
1167

೧) ತಲೆನೋವು ಅಥವಾ ಮೈಗ್ರೇನ್:

ಧೀರ್ಘಕಾಲದ ಒತ್ತಡಗಳು ಉದ್ವೇಗವನ್ನು ಹೆಚ್ಚುಮಾಡಿ ಒತ್ತಡಯುಕ್ತ ತಲೆ ನೋವು ಅಥವಾ ಮೈಗ್ರೇನ್ ಗಳಿಗೆ ಕಾರಣವಾಗುತ್ತದೆ. ಭುಜ ಹಾಗು ಕತ್ತಿನಲ್ಲಿ ನಿರಂತರ ನೋವು,ತಲೆ ಭಾರ, ಮೇಲಿನ ಬೆನ್ನಿನ ಸ್ನಾಯುಗಳ ಸೆಳೆತ ಇವೆಲ್ಲವೂ ಒತ್ತಡದಿಂದಲೇ ಹೆಚ್ಚಾಗುತ್ತದೆ.

source: flickriver.com

೨) ಚೆಸ್ಟ್ ಪೇನ್

ಒತ್ತಡ ಮತ್ತು ಆತಂಕದಿಂದ ಎದೆ ನೋವು ಕಾಣಿಸಬಹುದು ಅಥವಾ ಉಲ್ಬಣಿಸಬಹುದು. ಸಾಮಾನ್ಯವಾಗಿ, ಒತ್ತಡ ಮತ್ತು ಆತಂಕದೊಂದಿಗೆ ಸಂಬಂಧಿಸಿದ ಎದೆ ನೋವು ತೀಕ್ಷ್ಣ ಮತ್ತು ಮಧ್ಯಂತರವಾಗಿರುತ್ತದೆ. ಇದು ಸಹ ಎದೆ ಭಾಗದ ಸ್ನಾಯುಗಳ ಬಿಗಿತದಿಂದ ಸಂಭವಿಸುತ್ತದೆ.

source: healthxchange.sg

೩) ಕೂದಲು ಉದುರುವಿಕೆ:

ಒತ್ತಡದಿಂದ ಕೂದಲು ಉದುರಬಹುದು ಎಂಬುದು  ಸಂಶೋಧನೆಗಳಿಂದ ದೃಢಪಟ್ಟಿದೆ. ಒತ್ತಡದಿಂದ ಕೂದಲ ಬುಡಗಳಿಗೆ ರಕ್ತ ಸಂಚಾರ ಕಡಿಮೆಯಾಗುವುದರಿಂದ ಕೂದಲು ತೆಳುವಾಗುವುದಲ್ಲದೆ, ಬುಡವು ಬಲವಿಲ್ಲದೆ ಕೂದಲು ಉದರುತ್ತದೆ.ಸಾಮಾನ್ಯವಾಗಿ, ಈ ಕೂದಲಿನ ನಷ್ಟವು ತಾತ್ಕಾಲಿಕವಾಗಿರುತ್ತದೆ. ಆದಾಗ್ಯೂ, ದೀರ್ಘಕಾಲದ ಒತ್ತಡವು ಈ ಪ್ರಕ್ರಿಯೆಯನ್ನು ಪುನರಾವರ್ತಿಸಲು ಕಾರಣವಾಗುತ್ತದೆ.

source: cdn2.stylecraze.com

೪) ಲೈಂಗಿಕ ನಿರಾಸಕ್ತಿ:

ಲೈಂಗಿಕ ಆರೋಗ್ಯಕ್ಕೆ  ಹಾರ್ಮೋನುಗಳ ಸ್ಥಿರತೆ ಮತ್ತು ಸ್ವಸ್ಥ  ಮನಸ್ಸಿನ ಅಗತ್ಯವಿರುತ್ತದೆ. ತುಂಬಾ ಒತ್ತಡ ನಮ್ಮ ಹಾರ್ಮೋನುಗಳನ್ನು ಏರುಪೇರಾಗಿಸಿ ಲೈಂಗಿಕ ನಿರಾಸಕ್ತಿಯನ್ನು ಹೆಚ್ಚುಮಾಡುತ್ತದೆ.

source: 2.bp.blogspot.com

೫) ಸ್ಮರಣಾ ಶಕ್ತಿ ಕ್ಷೀಣಿಸುವುದು;

ಒತ್ತಡದ ಪ್ರತಿಕ್ರಿಯೆ ಮಿದುಳಿನ ಟೆಂಪೊರಲ್ ಲೋಬ್ ನ  ಸಾಮಾನ್ಯ ಚಟುವಟಿಕೆಯನ್ನು ತಡೆಗಟ್ಟುತ್ತದೆ,  ಇದು ಮೆಮೊರಿಗೆ ಕಾರಣವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ದೀರ್ಘಕಾಲಿಕ ಒತ್ತಡವು ಅಲ್ಪಾವಧಿಯ ಸ್ಮರಣೆಯನ್ನು ಹೆಚ್ಚಾಗಿ ದುರ್ಬಲಗೊಳಿಸುತ್ತದೆ. ಇದು ಕ್ರಮೇಣ ನಮ್ಮ ದೈನಂದಿನ ಕೆಲಸಗಳಲ್ಲಿ ತಡೆಯೊಡ್ಡಬಹುದು.

source: kannadanewsnow.com

೬) ಏಕಾಗ್ರತೆ ಕಡಿಮೆಯಾಗುವುದು;

ಒತ್ತಡ ಉಂಟಾದಾಗ ನಮ್ಮ ದೇಹದಲ್ಲಿ ಕಾರ್ಟಿಸೋಲ್ ಹೆಚ್ಚಾಗಿ ಮಿದುಳಿನಲ್ಲಿ ರಕ್ತ ಸಂಚಾರ ಕಡಿಮೆಯಾಗುತ್ತದೆ. ಇದರಿಂದ ಫ್ರಾಂಟಲ್ ಲೋಬ್ ನ ಕಾರ್ಯದಕ್ಷತೆ ಕಡಿಮೆಯಾಗುವುದರ ಜೊತೆಗೆ ಏಕಾಗ್ರತೆಯು ಕ್ಷೀಣಿಸುತ್ತದೆ.

source: mystictreasuretrove.com

೭) ಹೊಟ್ಟೆಯ ಸಮಸ್ಯೆಗಳು;

ಹೊಟ್ಟೆಯ ಪ್ರದೇಶಗಳಲ್ಲಿ ಒತ್ತಡವು ಗಮನಾರ್ಹವಾಗಿ ಪ್ರಭಾವ ಬೀರುತ್ತದೆ. ಹೊಟ್ಟೆ ನೋವು, ಎದೆ ಉರಿ, ಹೊಟ್ಟೆ ಭಾರ ಮತ್ತು ಕರುಳಿನ ಅಸ್ವಸ್ಥತೆಗಳು ಸಾಮಾನ್ಯವಾಗಿ ಒತ್ತಡ-ಸಂಬಂಧಿತ ಆತಂಕಗಳ ದೈಹಿಕ ಲಕ್ಷಣಗಳಾಗಿವೆ.

source: thehealthsite.com

೮) ತೂಕದ ಸಮಸ್ಯೆ;

ತೂಕದ ಏರುಪೇರುಗಳಿಗೆ ಒತ್ತಡವು ಸಂಬಂಧಿಸಿದೆಯಾದರೂ, ದೀರ್ಘಕಾಲದ ಒತ್ತಡದಿಂದಾಗಿ  ಸಾಮಾನ್ಯವಾಗಿ ತೂಕ ಹೆಚ್ಚಾಗುತ್ತದೆ. ಒತ್ತಡದ ಹಾರ್ಮೋನ್ ಕೊರ್ಟಿಸೋಲ್ ನಿಮ್ಮ ಹಸಿವಿನ ಮಟ್ಟದಲ್ಲಿ ಗಮನಾರ್ಹ ಪರಿಣಾಮ ಬೀರುತ್ತದೆ. ಒತ್ತಡ ಉಂಟಾದಾಗ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುವುದರ ಜೊತೆ ನಿಮ್ಮ ಹಸಿವು ಹಾಗು ಸಿಹಿ ತಿನ್ನಬೇಕೆಂಬ ಅಪೇಕ್ಷೆಯು ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ತೂಕವು ಹೆಚ್ಚಾಗುತ್ತದೆ.

source: healthclop.com

೯) ಸಂಧಿವಾತ/ಸ್ನಾಯು ಸೆಳೆತ;

ಸಂಧಿ ನೋವು, ಸ್ನಾಯುಗಳ ಬಿಗಿತ/ಸೆಳೆತ ಒತ್ತಡ-ಸಂಬಂಧಿತ ತೊಂದರೆಗಳಾಗಿವೆ. ಒತ್ತಡ ಉಂಟಾದಾಗ ನಮ್ಮ ಸ್ನಾಯುಗಳಿಗೆ ರಕ್ತ ಸಂಚಾರ ಹೆಚ್ಚಾಗುವುದರ ಜೊತೆಗೆ ಸ್ನಾಯುಗಳ ಬಿಗಿತ ಉಂಟಾಗುತ್ತದೆ. ಈ ಬಿಗಿತಗಳು ಕ್ರಮೇಣ ಸ್ನಾಯುಗಳ ಶಕ್ತಿಯನ್ನು ಕುಂದಿಸಿ   ಮೂಳೆಗಳ ನೋವು ಸೆಳೆತವನ್ನುಂಟುಮಾಡುತ್ತದೆ.

source: lh3.googleusercontent.com