ಬೀದಿ ಬೀದಿಯಲ್ಲಿ ನಾಟಕ ಮಾಡಿ ಸ್ಟಾರ್ ಆದ ಸ್ಟಾರ್ ಕುಟುಂಬದ ಕುಡಿ’ಯ 10 ವರ್ಷದ ಹಿಂದಿನ ಕಹಾನಿ

0
776

ಒಬ್ಬ ಸಾಮಾನ್ಯ ವ್ಯಕ್ತಿ ಸಿನಿಮಾ ನಾಯಕ ನಟನಾಗಿ ಸ್ಟಾರ್ ಆಗ್ಬೇಕು ಅಂದ್ರೆ ಅವನು ಏನೆಲ್ಲಾ ಮಾಡಬೇಕು ಅಲ್ವ? 99%ಶ್ರಮ ಇದ್ರೂ ಜೊತೆಗೆ 1% ಲಕ್ ಅನ್ನೋದು ಬೇಕೇಬೇಕು ಇಂತವರ ಸಾಲಿನಲ್ಲಿ ಶ್ರಮದಿಂದ ಮೇಲೆ ಬಂದು ಸ್ಟಾರ್ ಆದವರು ನಮ್ಮ ಸ್ಟಾಂಡಲ್ ವುಡ್ ನಲ್ಲಿ ತುಂಬಾನೇ ಇದ್ದಾರೆ. ಆದ್ರೆ ಸ್ಟಾರ್ ಕುಟುಂಬದಲ್ಲೇ ಹುಟ್ಟಿ ಸ್ಟಾರ್ ಆದ್ರೆ ಎಲ್ಲರೂ ಯೋಚನೆ ಮಾಡೋದು ಒಂದೇ, ಫ್ಯಾಮಿಲಿ ಸಪೋರ್ಟ್ ನಿಂದ ಸ್ಟಾರ್ಗಿರಿ ಬಂತು ಅಂತಾ ಆದ್ರೆ ಇಲೊಬ್ಬ ಸ್ಟಾಂಡಲ್ ವುಡ್ ಸ್ಟಾರ್ ತಾನು ಸ್ಟಾರ್ ಕುಟುಂಬದ ಕುಡಿಯೆಂದು ಯಾರಿಗೂ ಗೊತ್ತು ಮಾಡದೇ ಬೀದಿ ಬೀದಿಯಲ್ಲಿ ನಾಟಕ ಮಾಡಿ ಸಿನಿಮಾದಲ್ಲಿ ಚಾನ್ಸ್ ಪಡೆದು 50% ಸಿನಿಮಾ ಮುಗಿದಮೇಲೆ ಈ ಹೀರೋ ಸ್ಟಾರ್ ಕುಟುಂಬದವನು ಅಂತ ಹೇಳಿಕೊಂಡಿದು ಆಕಸ್ಮಿಕವಂತೆ. ನಾವು ಹೇಳ್ತಿರೋ ಈ ಶ್ರಮದ ಹೀರೋ ಯಾರಂದ್ರೆ ಮೊದಲೇನೆ ಸಿನಿಮಾದಲ್ಲೇ ಸೆಂಚುರಿ ಬಾರಿಸಿ ಸ್ಟಾರ್ ಗಿರಿ ಪಡೆದ ನಾಯಕ ಆಕ್ಷನ್ ಪ್ರಿನ್ಸ್ “ದ್ರುವ ಸರ್ಜಾ”

Also read: ಬೇರೆಭಾಷೆಗೆ ಮರುಮಾರಾಟವಾದ ಕನ್ನಡದ 14 ಸಿನಿಮಾಗಳು.. ಯಾವುದೇ ಚಿತ್ರರಂಗಕ್ಕೆ ಕಡಿಮೆಯೆನ್ ಇಲ್ಲ..!!

ಹೌದು ದ್ರುವ ಸರ್ಜಾ ಸ್ಟಾರ್ ಕುಟುಂಬದವನು ಅಂತ ಸ್ನೇಹಿತರಿಗೆ ಅಷ್ಟೇ ಅಲ್ಲ ಅದ್ದೂರಿ ನಿರ್ಮಾಪಕರಿಗೂ ಗೊತ್ತೇ ಇರ್ಲಿಲ್ಲ ಅಂತೆ ಫೋಟೋ ಶೂಟ್ ಗೆ ಸ್ನೇಹಿತನಿಂದ 7 ಸಾವಿರ ಸಾಲ ಮಾಡಿ ಬೀದಿ ಬೀದಿಗಳಲ್ಲಿ ನಾಟಕ ಮಾಡಿ ದಿನಕ್ಕೆ 150- 300 ರುಪಾಯಿಗೆ ದುಡಿದು ನಾಯಕನಾದ ದೃವ ಒಂದು ಸಿನಿಮಾಕ್ಕೆ ಇಗ 6 ಕೋಟಿ ಸಂಭಾವನೆ ಮಾಡುತ್ತಿದ್ದಾರೆ. ಇದೆನೆಲ್ಲ ಕೇಳಿದ್ರೆ ಇದೇ ಕಥೆ ಒಂದು ಸಿನಿಮಾ ಆಗುತ್ತೆ ಅನ್ಸುತೆ ಅಲ್ವ?.

ಈ ನಾಯಕನ ಫ್ಯಾಮಿಲಿಗೆ ಸಿನಿಮಾ ಏನು ಹೊಸತ್ತೆನು ಅಲ್ಲ ತಾತ ದೀಘಜರೊಂದಿಗೆ ಬಣ್ಣಹಚ್ಚಿ ಸೈ ಯೆನಿಸಿಕೊಂಡಿದ್ರು ಮಾವ ಸೌತ್ ಇಂಡಿಯಾಗೆ ಸೂಪರ್ ಸ್ಟಾರ್ ‘ಅರ್ಜುನ್ ಸರ್ಜಾ’ ಹಿಗಿದ್ರು ಸ್ಟಾಂಡಲ್ ವುಡ್ ನಲ್ಲಿ ನೆಲೆ ಉರೋಕೆ ಈ ನಟ ಪಟ ಶ್ರಮ ಅಷ್ಟು-ಇಷ್ಟು ಅಲ್ಲ, ಇದು 10 ವಷದ ಹಿಂದಿನ ದ್ರುವನ ಸಾಧನೆಯ ನೆನಪು, 10 ವರ್ಷ ಹಿಂದೆ ಈ ಫೋಟೋದಲ್ಲಿರೋ ದ್ರುವನನ್ನು ಕಂಡು ಹಿಡಿಯೋದು ಕಷ್ಟಾನೆ.

Also read: ದರ್ಶನ್ 50ನೇ ಸಿನಿಮಾ ಕುರುಕ್ಷೇತ್ರ ದಲ್ಲಿ ಅನ್ಯಾಯವಾಗ್ತಿದ್ಯ? ಸಿನೆಮಾಕ್ಕೂ ರಾಜಕೀಯ ಕಾಲಿಟ್ಟಿದ್ಯ??

ದೃವನ 10 ವರ್ಷಗಳ ಹಿಂದಿನ ಜರ್ನಿ ನೋಡಿದ್ರೆ ವಿಚಿತ್ರ, ದೃವಗೆ ಮೊದಲು ಸಿನಿಮಾ ಹುಚ್ಚು ಇರಲ್ಲೇ ಇಲ್ಲವಂತೆ ಬಾಕ್ಸರ್ ಆಗ್ಬೇಕು ಅಂತಾ ಮೂಗಿನ ಮೂಳೆ ಕೂಡ ತೆಗೆಸಿದ್ರು ಇದ್ದಾದ ಸ್ವಲ್ಪ ದಿನದಲ್ಲೇ ತಲೆಯಲ್ಲಿ ಅದೇನು ಬಂತು ಗೊತ್ತಿಲ್ಲ ಹೀರೋ ಆಗಲೇಬೇಕು ಅಂತ ನಿರ್ಧಾರ ಮಾಡಿದ್ರು ಆದ್ರೆ ಪೆಟ್ರೋಲ್ ಗೆ ಕೂಡ ಹಣವಿಲ್ಲದ ದೃವ ತನ್ನ ಸ್ನೇಹಿತನಿಂದ 7000 ರೂ  ಸಾಲಮಾಡಿ ಫೋಟೋ ಶೂಟ್ ಮಾಡ್ಸಿ ಹಲವಾರು ನಿರ್ಮಾಪಕರ ಹತ್ರಹೋದ್ರು ಎಲ್ಲರೂ ಅವಮಾನ ಮಾಡಿ ಈ ಮೂಗಿನಿಂದ ನೀನು ಹೀರೋ ಆಗೋಕ್ಕೆ ಸಾದ್ಯೆನೆ ಇಲ್ಲ ಅಂತಿದ್ರು. ಇದುಯಾವುದಕ್ಕೂ ತೆಲೆಕೆಡಿಸಿಕೊಳ್ಳದ ದೃವ ಸಿಕ್ಕ ಚಿಕ್ಕ ಅವಕಾಶ ಕಿರುಚಿತ್ರ, ಮಾಡ್ಲಿಂಗ್, ಸ್ಟೇಟ್ ಶೋ ಮಾಡಿಕೊಂಡು 150 ರುಪಾಯಿಗೆ ಬೀದಿ ಬೀದಿಯಲ್ಲಿ ನಾಟಕ ಮಾಡಿ ಚಂದನ್ ಶೆಟ್ಟಿಯವರ ಮೊದಲ ಸಾಂಗ್ನಲ್ಲಿ ನಟಿಸಿದರು.

Also read: ಕುಸ್ತಿಪೈಲ್ವಾನ್ ಆಗಲು ದರ್ಶನ್ ದಿನಕ್ಕೆ 3 ಕೋಳಿ, 25 ಚಪಾತಿ, 15 ಕಲಂಗಡಿ ಜ್ಯೂಸ್ ಸೇವಿಸಿ ಪೈಲ್ವಾನ್ ಆಗ್ತಿರೋ ತಯಾರಿ ಕೇಳಿದ್ರೆ ದರ್ಶನ್-ರ ಶ್ರಮಕ್ಕೆ ಸಲ್ಯೂಟ್ ಹೊಡಿತೀರ!!

ಹೀಗೆ ಒಂದು ನಾಟಕದಲ್ಲಿ ನೋಡಿದ ನಿರ್ದೇಶಕ APM ಕರೆದು ಒಂದು ಸಿನಿಮಾಗೆ ಆಫರ್ ಕೊಟ್ರು ಅದೇ ಸಿನಿಮಾನೇ ‘ಅದ್ದೂರಿ’ ಹೇಗೋ ಚಾನ್ಸ್ ಸಿಕ್ತು ಅಂತ ಸಿನಿಮಾಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ರೆಡಿ ಆದ ದೃವಾಗೆ ಬ್ಯಾಡ್ ಟೈಮ್ ಅಂದ್ರೆ ಚೊಚ್ಚಲ ಚಿತ್ರ ಅದ್ದೂರಿ ಗೆ 5 ನಿರ್ಮಾಪಕರು ಬದಲಾಗಿದ್ರು ಯಾಕೆಂದ್ರೆ ಶೂಟಿಂಗ್ ಮೊದಲ ದಿನವೇ ಬೆಂಕಿ ಬಿತ್ತುಅಂತಾ ಒಬ್ರು ಬಿಟ್ಟು ಹೋದ್ರೆ ಇನೋಬ್ರು ಧ್ರುವ ಸರ್ಜಾ ಮೇಲೆ ನಂಬಿಕೆ ಇಲ್ಲ ಅಂತಾ ಸಿನಿಮಾ ನೀಲಿಸಿದ್ರು ಇದನೆಲ್ಲ ನೋಡಿದ ನಿರ್ದೇಶಕ APM ಗೆ ಧ್ರುವ ಸರ್ಜಾ ಸಿನಿಮಾ ಪೂರ್ಣಮಾಡೋ ನಂಬಿಕೆ ಇರ್ಲಿಲ್ಲ ಅಂತೆ. ಕಣ್ಣಿರಲ್ಲೇ ಹುಟ್ಟಿದ ಸ್ಟಾರ್ ಆಕ್ಷನ್ ಪ್ರಿನ್ಸ್ 10 ವರ್ಷದಲ್ಲಿ ಮಾಡಿದು ಅದ್ಧೂರಿ, ಪೊಗರು, ಭರ್ಜರಿ ಮೂರೇ ಮೂರೂ ಸಿನಿಮಾ ಮಾಡಿ ಸ್ಟಾರ್ ಆದ್ರು ಈಗ ಒಂದರಹಿಂದೆ ಒಂದು ಆಫರ್ ಬರುತ್ತಿವೆ, ಮೊದಲು ಅವಮಾನ ಮಾಡಿದ ನಿರ್ಮಾಪಕರು ಹಿಂದೆ ಬಿದ್ದು 6 ಕೋಟಿ ಸಂಭಾವನೆ ಕೋಟು ಸಿನಿಮಾಕ್ಕೆ ಕರೆಯಿತ್ತಿದ್ದಾರೆ.