ಪಾಲಕರೆ ನಿಮ್ಮ ಮಕ್ಕಳನ್ನು ಟಿಕ್​ಟಾಕ್​ ಚಟದಿಂದ ಈಗಲೇ ಹೊರತನ್ನಿ, ಇಲ್ಲದಿದ್ದರೆ ಏನಾಗುತ್ತೆ ನೋಡಿ..

0
977

ಮೊಬೈಲ್ ಬಳಕೆಯಿಂದ ಯುವ ಸಮುದಾಯ ಸಾವಿನ ಅಂಚಿನಲ್ಲಿ ಸಾಹಸಕ್ಕೆ ಇಳಿದು ಪ್ರಾಣ ಕಳೆದುಕೊಳ್ಳುತಿದೆ, ಕೇವಲ ಮನರಂಜನೆಗೆ ಮಾಡಿದ app -ಗಿಳಿಗೆ ಒಳಗಾಗಿ ಏನೆಲ್ಲಾ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಎನ್ನುವುದಕ್ಕೆ ಹಲವು ಘಟನೆಗಳು ಕಾರಣವಾಗಿವೆ. ಮೊನ್ನೆ ತಾನೇ ತುಮಕೂರಿನಲ್ಲಿ ಟಿಕ್ ಟಾಕ್ ಹುಚ್ಚಿಗೆ ಕತ್ತನೆ ಮುರಿದುಕೊಂಡು ಪ್ರಾಣ ಕಳೆದುಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದು ಹೋಗಿದ್ದು, ಪದವಿ ಓದುತ್ತಿದ್ದ ವಿದ್ಯಾರ್ಥಿ ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

Also read: ಮತ್ತೊಂದು ಟಿಕ್‍ಟಾಕ್ ಅವಘಡ; ಸಾಹಸ ಮಾಡಲು ಹೋಗಿ ಕತ್ತು ಮುರಿದುಕೊಂಡ ಯುವಕನ ವಿಡಿಯೋ ವೈರಲ್..

ಏನಿದು ಘಟನೆ?

ಟಿಕ್ ಟಾಕ್ ಹಾವಳಿ ಎಲ್ಲೇ ಮೀರುತ್ತಿದೆ. ಈ ಆ್ಯಪ್​​ ನಿಷೇಧವಾಗಬೇಕೆಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಟಿಕ್​ಟಾಕ್​ ಆ್ಯಪ್​ನಿಂದ ಜೀವ ಕಳೆದುಕೊಳ್ಳುತ್ತಿರುವವ ಸಂಖ್ಯೆಯೂ ಹೆಚ್ಚುತ್ತಿದೆ. ಈ app ನಲ್ಲಿ ವಿಡಿಯೋ ಮಾಡುವ ಮೂಲಕ ಹೆಚ್ಚಿನ ಲೈಕ್ ಪಡೆಯುವ ಹುಚ್ಚಿಗೆ ಒಳಗಾಗುತ್ತಿದ್ದಾರೆ. ಇಂತಹ ಹುಚ್ಚಿಗೆ ಬಿದ್ದ ಕೋಲಾರ ತಾಲೂಕಿನ ವಡಗೇರಿ ಗ್ರಾಮದಲ್ಲಿ ನಡೆದಿದ್ದು, ಕೃಷಿಹೊಂಡದ ಬಳಿ ಟಿಕ್​ಟಾಕ್​ ಮಾಡಲು ಹೋದ ವಿದ್ಯಾರ್ಥಿನಿ ಮಾಲಾ ಎಂಬಾಕೆ ಅದೇ ಕೃಷಿ ಹೊಂಡದಲ್ಲಿ ಬಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಇವಳು ಬಿ.ಎ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೋಲಾರ ಮಹಿಳಾ ಕಾಲೇಜಿನಲ್ಲಿ ಓದುತ್ತಿದ್ದಳು. ಆದರೆ ಶುಕ್ರವಾರ ಸಂಜೆ ಮಾಲಾ, ಕೃಷಿ ಹೊಂಡದ ಬಳಿ ಟಿಕ್‍ಟಾಕ್ ವಿಡಿಯೋ ಮಾಡುವಾಗ ಈ ಘಟನೆ ನಡೆದಿದೆ.

Also read: ಟಿಕ್‍ಟಾಕ್ ಹುಚ್ಚಿಗೆ ಗೃಹಿಣಿ ಬಲಿ; ವಿಷ ಕುಡಿಯುವುದನ್ನೂ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ..

ಮಾಲಾ ಶುಕ್ರವಾರ ಸಂಜೆ ಹೊಲದ ಬಳಿ ಹೋಗಿ ಅಲ್ಲಿದ್ದ ಕೃಷಿಹೊಂಡದ ಬಳಿ ತನ್ನ ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ಒಬ್ಬಳೇ ಟಿಕ್‍ಟಾಕ್ ಮಾಡುತ್ತಿದ್ದಳು. ಈ ವೇಳೆ ಮಾಲಾ ಮೊಬೈಲ್ ಸಮೇತ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಆಕೆಯನ್ನು ಕಾಪಾಡಲು ಸಾಧ್ಯವಾಗಿಲ್ಲ. ಕೊನೆಗೆ ಹೊಲಕ್ಕೆ ಹೋಗಿ ತುಂಬಾ ಸಮಯವಾಗಿದೆ. ಇನ್ನೂ ಯಾಕೆ ಮಾಲಾ ಮನೆಗೆ ಬಂದಿಲ್ಲ ಎಂದು ಪೋಷಕರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Also read: ಕಾಗೆ’ಗಳಿಗೂ ಬಂತು ಡಿಮ್ಯಾಂಡ್; ಉತ್ತರಕ್ರಿಯೆ ಕಾಗೆ ನೀಡುವ ಬ್ಯುಸಿನೆಸ್-ಗೆ ಭಾರಿ ಬೇಡಿಕೆ..

ಈ ಹಿಂದೆ ಕೂಡ ಜೂನ್ 19ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಗೋಡೆಕೆರೆ ಗ್ರಾಮದಲ್ಲಿ ಟಿಕ್​ ಟಾಕ್​ನಲ್ಲಿ ವೀಡಿಯೋ ಸ್ಟಂಟ್‌ ಮಾಡಲು ಹೋಗಿದ್ದ ಕುಮಾರ್‌ ಎಂಬವರು ಕತ್ತು, ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ನಂತರ ಇಂತಹದೆ ಘಟನೆ ಹೈದರಾಬಾದ್‌ನಲ್ಲಿ ನಡೆದಿದ್ದು, ಸಹೋದರ ಸಂಬಂಧಿ ಜತೆ ಕೊಳದಲ್ಲಿ ಸ್ನಾನ ಮಾಡುತ್ತಾ ಟಿಕ್ ಟಾಕ್ ವೀಡಿಯೋ ಮಾಡಲು ಹೋದ ಯುವಕ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದನ್ನು. ಈಗ ಮತ್ತೆ ಅಂತಹದೇ ಕೃತ್ಯ ನಡೆದಿದ್ದು ಮಕ್ಕಳಿಗೆ ಮೊಬೈಲ್ ಕೊಡಿಸುವಾಗ ಪಾಲಕರು ಜಾಗೃತರಾಗಬೇಕು ಇಲ್ಲದಿದ್ದರೆ. ವಯಸ್ಸಿಗೆ ಬಂದ ಮಕ್ಕಳು ಕಳೆದುಕೊಳ್ಳುವಂತ ಪರಿಸ್ಥಿತಿ ಬರಬಹುದು.