ಪರೀಕ್ಷೆಗೆ ಗೈರಾದ ವಿದ್ಯಾರ್ಥಿ ವಿಶ್ವವಿದ್ಯಾಲಯದ ಟಾಪ್ಪರ್ ಆಗ್ತಾನೆ ಅಂದ್ರೆ ನಂಬ್ತೀರಾ??

0
367

ಮುಂಬೈ ವಿಶ್ವವಿದ್ಯಾಲಯದ ಎಲ್​ಎಲ್​​ಬಿ (LLB) ಫಲಿತಾಂಶ ಹೊರ ಬಿದ್ದಾಗ, ಓರ್ವ ವಿದ್ಯಾರ್ಥಿ ಪರೀಕ್ಷೆಯನ್ನೇ ಬರೆದಿಲ್ಲ ಎಂದು ಮುದ್ರಿಸಲಾಗಿತ್ತು. ಆದ್ರೆ ಅದೇ ವಿದ್ಯಾರ್ಥಿ ಮರುಪರಿಶೀಲನೆ ನಡೆಸಿದ ಬಳಿಕ ಗರಿಷ್ಠ ಅಂಕಗಳನ್ನು ಪಡೆದು ವಿಶ್ವ ವಿದ್ಯಾಲಯಕ್ಕೆ ಪ್ರಥಮನಾಗಿದ್ದಾನೆ.

ಪ್ರಶವ್​ ಭಾನಕರಿ ಎಲ್​​ಎಲ್​​ಬಿಯ ಕೊನೆಯ ಸೆಮಿಸ್ಟರ್​ ಎಲ್ಲ ಪರೀಕ್ಷೆಗಳಲ್ಲೂ absent ಎಂದು ತಿಳಿಸಲಾದ ವಿದ್ಯಾರ್ಥಿ. ಬಳಿಕ ಬಹಿರಂಗಗೊಂಡ ಸತ್ಯ ಎಂದ್ರೆ ಈತನಿಗೆ 71.75% ಬಿದ್ದಿರುವುದು ಬೆಳಕಿಗೆ ಬಂದಿದೆ.

ಇನ್ನು ಪ್ರಶವ್​ ತನ್ನ ಕಾಲೇಜಿನ ಟಾಪರ್​ ಸ್ಟುಡೆಂಟ್​.. ಕಳೆದ ಸೆಮಿಸ್ಟರ್​ನಲ್ಲಿ ಅವರು ಸುಮಾರು 65 ಪ್ರತಿಶತ ಅಂಕಗಳನ್ನು ತೆಗೆದುಕೊಂಡಿದ್ದರು. ಇನ್ನು ಫೈನಲ್​ ಸೆಮಿಸ್ಟರ್​ ಪರೀಕ್ಷೆಗೆ ಇವರು ಗೈರು ಎಂದು ತಿಳಿಸಲಾಗಿತ್ತು. ಪ್ರಶವ್​ ವಿಶ್ವ ವಿದ್ಯಾಲಯ ಅಡ್ಡಾಡಿ ಅಡ್ಡಾಡಿ ಸುಸ್ತಾದ್ರು. ಆದ್ರೆ ಕೊನೆಯಗೂ ಅವರಿಗೆ ನ್ಯಾಯ ಸಿಕ್ಕಿತು.

ದೀಪಾವಳಿಗೂ ಒಂದು ದಿನ ಮುನ್ನವೇ ಪ್ರಶವ್​ ಕೈಗೆ ಅವರ ಎಲ್​ಎಲ್​ಬಿ ಅಂಕ ಪಟ್ಟಿ ಸಿಕ್ಕಿದು ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿತು.

ಇನ್ನು ಪ್ರಶವ್​ಗೆ ಈ ಅಂಕಗಳು ಅಷ್ಟೋಂದು ಸಮಾಧಾನ ತಂದಿಲ್ಲ. ಆದ್ರೆ ಗೈರು ಎನ್ನುವ ಬದಲು ಕಡಿಮೆ ಅಂಕ ಬಿದ್ದಿರುವ ಖುಷಿ ಅವರ ಮುಖದಲ್ಲಿ ಎದ್ದು ಕಾಣುತ್ತದೆ. ಅಂದಹಾಗೆ ಪ್ರಶವ್​ ಇನ್ನು ಹೆಚ್ಚಿನ ಅಂಕದ ನಿರೀಕ್ಷೆಯಲ್ಲಿದ್ದರು. ಆದ್ರೆ ಕೊನೆಯ ಸೆಮಿಸ್ಟರ್​ನಲ್ಲಿ ಆದ ಎಡವಟ್ಟಿನಿಂದ ಇವರ ಅಂಕಗಳಲ್ಲಿ ಇಳಿಮುಖವಾಗಿದೆ. ಇನ್ನು ಪ್ರಶವ್​ ತಮ್ಮ ಅಂಕ ಪಟ್ಟಿಯನ್ನು ಪಡೆಯಲು ಸಹ ಅಲೆದಾಡ ಬೇಕಾಯಿತು. ಅಲೆದು ಅಲೆದು ಸುಸ್ತಾದ ಬಳಿಕ ಇವರ ಕೈಗೆ ಇವರ ಅಂಕ ಪಟ್ಟಿ ಸಿಕ್ಕದೆ.

ಇನ್ನು ಈ ತರಹ ಮುಂಬೈ ವಿಶ್ವ ವಿದ್ಯಾಲಯ ಮಾಡಿದ ಎಡವಟ್ಟು ಇದೇ ಮೊದಲೇನಲ್ಲ. ವರ್ಷದ ಆರಂಭದಲ್ಲೂ ಇಂತಹದ್ದೇ ಒಂದು ಪ್ರಕರಣ ಬಯಲಿಗೆ ಬಂದಿದೆ.