ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿಗೆ ವಿದ್ಯಾಭ್ಯಾಸದ ನೆರವು ನೀಡಿದ ಪ್ರಧಾನಿ ಮೋದಿ!!

0
616
ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ಉತ್ತಮ ಜೀವನ ನಿರ್ವಹಣೆ ಮಾಡಬೇಕು ಎಂಬುದು ಎಲ್ಲರ ಆಸೆ. ಈಗಂತೂ ಬ್ಯಾಂಕ್‌ಗಳು ವಿದ್ಯಾಭ್ಯಾಸಕ್ಕೆ ಸಾಲವನ್ನು ನೀಡುತ್ತವೆ. ಆದರೆ ಮಂಡ್ಯದ ಒಬ್ಬ ವಿದ್ಯಾರ್ಥಿಗೆ ಬ್ಯಾಂಕ್ ಸಾಲ ನೀಡಲು ನಿರಾಕರಿಸಿತು. ಆಗ ಅವಳು ನೇರವಾಗಿಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಮುಖೆನ ತನ್ನ ತೊಂದರೆಯನ್ನು ಹೇಳಿಕೊಂಡಿದ್ದಾರೆ.
Bibi Sara
ಮಂಡ್ಯ ಮೂಲದ ಸಾರಾ ಅವರೇ ನರೇಂದ್ರ ಮೋದಿ ಕಾರ್ಯಲಯಕ್ಕೆ ಪತ್ರ ಬರೆದು ತನ್ನ ಅಳಿಲನ್ನು ತೋಡಿಕೊಂಡಿದ್ದು. ಇವರ ನೋವಿಗೆ ಪ್ರಧಾನಿ ಕಾರ್ಯಲಯದಿಂದ ಸ್ಪಂದನೆ ದೊರೆತಿದೆ. ಪ್ರಧಾನಿ ಅವರ ಸಹಾಯದ ಫಲವಾಗಿ ಸಾರಾ ಈಗ ತನ್ನ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ.
Bibi Sara
ಸಾಲಾ ಸಿಗದೇ ಇರುವ ಕಾರಣ? 
ಸಾರಾ ಅವರ ತಂದೆ, ಮೈಷುಗರ್ ಕಾರ್ಖಾನೆಯ ಸಿಬ್ಬಂದಿ. ಇವರು ಮಂಡ್ಯದ ಷುಗರ್ ಟೌನ್‌ನಲ್ಲಿ ವಾಸವಾಗಿದ್ದಾರೆ. ಕಾರ್ಖನೆ ಇವರಿಗೆ ೯ ತಿಂಗಳಿನಿಂದ ಸಂಬಳ ನೀಡದೆ ಇದ್ದಿದ್ದರಿಂದ ಓದಿಸಲು ಸಮಸ್ಯೆಯಾಗಿತ್ತು. ಇದನ್ನು ಅರಿತ ಸಾರಾ ಅವರು, ವಿದ್ಯಾಭ್ಯಾಸದ ಸಾಲಕ್ಕೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅರ್ಜಿ ಸಲ್ಲಿಸಿದ್ದರು. ಇವರ ಹಣಕಾಸಿನ ಪರಿಸ್ಥಿತಿ ಹಾಗೂ ಮೈಷುಗರ್ ಕಾರ್ಖಾನೆಯ ಸ್ಥಿತಿ-ಗತಿಯನ್ನು ಅರಿತ ಬ್ಯಾಂಕ್ ಮ್ಯಾನೇಜರ್ ವಿದ್ಯಾಭ್ಯಾಸ ಸಾಲ ನೀಡಲು ಸಾಧ್ಯವೇ ಇಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿದರು. ಇದರಿಂದ ಸಾರಾಗೆ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಕಾಡಿತು. ಆಗ ಅವರ ಸ್ನೇಹಿತೆಯ ಸಲಹೆಯಂತೆ ಪ್ರಧಾನಿ ಅವರ ಬಳಿ ತಮ್ಮ ನೋವನ್ನು ತೋಡಿಕೊಂಡರು. ಇದರಲ್ಲಿ ತಾನು ಪಡೆದ ಅಂಕಗಳನ್ನು ನಮೂದಿಸಿದ್ದಳು.
ಪ್ರಧಾನಿ ಕಾರ್ಯಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಆಕೆಯ ವಿದ್ಯಾಭ್ಯಾಸಕ್ಕೆ ಸಾಲ ಮಂಜೂರು ಮಾಡಿಸುವಂತೆ ಸೂಚಿಸಿದ್ದಾರೆ. ಅದರಂತೆ ಈಗ ವಿಜಯಾಬ್ಯಾಂಕ್ ವಿದ್ಯಾರ್ಥಿನಿ ಸಾರಾಳ ಎಂಬಿಎ ವ್ಯಾಸಂಗಕ್ಕೆ ೧.೫೦ ಲಕ್ಷ ರೂ. ಸಾಲ ಮಂಜೂರು ಮಾಡಿದೆ.