ಮಕ್ಕಳ ಅನ್ನಕ್ಕೆ ಕನ್ನ ಹಾಕಿದ್ದ ಸಿಎಂ ವಿರುದ್ಧ ಮಕ್ಕಳ ತಟ್ಟೆ ಪ್ರತಿಭಟನೆ..!

0
638

ನಾವು..ಮೊನ್ನೆ ಮಾಡಿದ ಸುದ್ದಿ ನಿಮೆಗೆಲ್ಲ ಗೊತ್ತಿರುವ ವಿಚಾರ ಸಿಎಂ ಸಿದ್ದರಾಮಯ್ಯ ಸರ್ಕಾರ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದ ಎರಡು ಶಾಲೆಗಳಿಗೆ ಬರುತಿದ್ದ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ಬರುತ್ತಿದ್ದ ಅನ್ನ ದಾನವನ್ನು ಸರ್ಕಾರ ರದ್ದು ಮಾಡಿರುವ ಆದೇಶವನ್ನು ಹೊರಡಿಸಿತ್ತು.

source:public tv

ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ವಿದ್ಯಾಕೇಂದ್ರಗಳ ವಿದ್ಯಾರ್ಥಿಗಳು ಬೀದಿಗೆ ಬಂದು ತಟ್ಟೆ ಹಿಡಿದು ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮಾಡಿದ್ದಾರೆ. ಶ್ರೀರಾಮ ವಿದ್ಯಾಕೇಂದ್ರ ಹಾಗೂ ಶ್ರೀದೇವಿ ವಿದ್ಯಾಕೇಂದ್ರಕ್ಕೆ ಸರ್ಕಾರ ಅನುದಾನ ಕಡಿತಗೊಳಿಸಿತ್ತು. ಹೀಗಾಗಿ ಬಿ.ಸಿ.ರೋಡ್ ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಊಟದ ತಟ್ಟೆ ಹಿಡಿದು ಮಕ್ಕಳು ಪ್ರತಿಭಟನೆ ಮಾಡುತ್ತಿದ್ದು, ಅನ್ನ ಕಸಿದ ಸಿದ್ಧರಾಮಯ್ಯ ಎನ್ನುವ ಘೋಷಣೆ ಕೂಗುತ್ತಿದ್ದಾರೆ.

ಕಲ್ಲಡ್ಕ ಪ್ರಭಾಕರ್ ಭಟ್ ನಡೆಸುತ್ತಿದ್ದ ಶ್ರೀರಾಮ ವಿದ್ಯಾ ಹಾಗೂ ಶ್ರೀದೇವಿ ವಿದ್ಯಾ ಕೇಂದ್ರಕ್ಕೆ ಬರುತ್ತಿದ್ದ ಅನುದಾನವನ್ನು ಸರ್ಕಾರ ಕಡಿತಗೊಳಿಸಿದೆ. ಕಳೆದ ಹತ್ತು ವರ್ಷಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಈ ಶಾಲೆಗಳಿಗೆ ಅನುದಾನ ನೀಡಲಾಗ್ತಿತ್ತು. ಈ ಎರಡು ಶಾಲೆಗಳನ್ನು ಕೊಲ್ಲೂರು ಮೂಕಾಂಬಿಕಾ ದೇವಾಲಯ ದತ್ತು ಪಡೆದುಕೊಂಡಿತ್ತು.

ಕಳೆದ ಹತ್ತು ವರ್ಷಗಳಲ್ಲಿ ಕೊಲ್ಲೂರು ದೇಗುಲದಿಂದ 2.83 ಕೋಟಿ ಅನುದಾನ ನೀಡಲಾಗಿತ್ತು. ಶ್ರೀರಾಮ ವಿದ್ಯಾಕೇಂದ್ರಕ್ಕೆ 2.32 ಕೋಟಿ ರೂ. ನೆರವು ಲಭಿಸಿತ್ತು. ಹಾಗೆ ಬಂಟ್ವಾಳದ ಪುಣಚ ಶ್ರೀದೇವಿ ವಿದ್ಯಾಕೇಂದ್ರಕ್ಕೆ 50.72 ಲಕ್ಷ ನೆರವು ಲಭಿಸಿತ್ತು. ಇದೀಗ ಕೊಲ್ಲೂರು ದೇಗುಲ ದತ್ತು ತೆಗೆದುಕೊಂಡಿದ್ದ ಆದೇಶ ಹಿಂದಕ್ಕೆ ಪಡೆಯಲಾಗಿದ್ದು, ದೇವಸ್ಥಾನದ ದುಡ್ಡು ಶಾಲೆಗೆ ನೀಡಬಾರದೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇಂತಹ ಸರ್ಕಾರಗಳು ತಮ್ಮ ತಮ್ಮ ವ್ಯಕ್ತಿಗತ ಹೋರಾಟವನ್ನು ಮುಂದಿಟ್ಟುಕೊಂಡು ಪಾಪ ವಿದ್ಯಾರ್ಥಿಗಳ ಮೇಲೆ ಸರ್ಕಾರ ದರ್ಪ ತೋರಿಸಿದ್ದು ಇದರ ವಿರುದ್ಧ ಎಲ್ಲೆಡೆ ಆಕ್ರೋಶ ಕೇಳಿಬರುತ್ತಿವೆ.