ವಿದ್ಯಾರ್ಥಿಗಳಿಗೆ ಬೇಕು ಶಿಸ್ತು ಪ್ರಾಮಾಣಿಕತೆ!!

0
1220

Kannada News | kannada Useful Tips

ಒಂದು ಗಿಡ ಬೆಳೆಯಲು ಬೀಜ, ಗೊಬ್ಬರ, ನೀರು, ವಾತಾವರಣ, ಬೇಕಾಗುವ ಹಾಗೆ ಒಬ್ಬ ವಿದ್ಯಾರ್ಥಿಗೆ ಓದಲು  ಒಳ್ಳೆಯ ವಾತಾವರಣ, ಪಾಲಕರ ಪ್ರೀತಿ, ಅಧ್ಯಾಪಕರ ಸಹಕಾರ, ಒಳ್ಳೆಯ ಗೆಳೆತನ ಬೇಕಾಗುವುದು. ಇಂದಿನ ವಿದ್ಯಾರ್ಥಿ ನಾಳೆಯ ನಮ್ಮ ದೇಶದ ಪ್ರಜೆ. ಈಗಿನ ಶಿಕ್ಷಣದ ಸ್ಪರ್ಧೆಯಲ್ಲಿ  ಎಷ್ಟು ಅಂಕಗಳಿಸಿದರೂ ಸಾಲದು. ಆ ರೀತಿ ಇರುವಾಗ ಜೀವನದಲ್ಲಿ  ಮಾಡಲು ಬೇಕಾಗಿರುವುದು ಪ್ರತಿಯೊಬ್ಬ ವಿದ್ಯಾರ್ಥಿಗೆ ಶಿಸ್ತು, ಪ್ರಾಮಾಣಿಕತನ, ಅಥವಾ ವಿಧೇಯತೆ ಶಿಸ್ತು  ಮತ್ತು ವಿಧೇಯತೆ ಒಂದು ನಾಣ್ಯದ ಎರಡು ಮುಖಗಳಂತೆ, ಜ್ಞಾನವನ್ನು  ಜಾಗೃತಗೊಳಿಸುವವನು ಗುರು  ಅಥವಾ ಶಿಕ್ಷಕನಾಗಿರುತ್ತಾನೆ.

ಪ್ರತಿಯೊಬ್ಬ ವಿದ್ಯಾರ್ಥಿಗೆ ಸೂಕ್ತ ಕಾಲದಲ್ಲಿ ಶಿಕ್ಷಕರಿಂದ  ಅಥವಾ ಪಾಲಕರಿಂದ ಮಾರ್ಗದರ್ಶನ ಬೇಕಾಗುತ್ತದೆ. ಮಕ್ಕಳ ಮನಸ್ಸು ಯಾವಾಗಲೂ ಅರಿತು ಉತ್ಸಾಹ, ಶಿಸ್ತು, ಪ್ರಾಮಾಣಿಕತೆ, ವಿಧೇಯತೆಯನ್ನು ಅವರಲ್ಲಿ ತುಂಬಬೇಕು. ವಿದ್ಯಾರ್ಥಿಗೆ ಓದು ಮುಖ್ಯ. ಆದರೆ ಬರಿ ಓದು ಅಲ್ಲ. ಕ್ರೀಡೆಯೂ ಅಷ್ಟೇ ಮುಖ್ಯ,  ಜೊತೆಗೆ ಮಕ್ಕಳ ಹವ್ಯಾಸ  ಹಾಗೂ ಪಠ್ಯೇತರ ಚಟುವಟಿಕೆ, ಇದಕ್ಕೂ ಅಷ್ಟೇ ಪ್ರಾಮುಖ್ಯತೆ  ನೀಡಬೇಕು.

ವಿದ್ಯಾರ್ಥಿಗಳು ವಿದ್ಯೆ ಕಲಿಯುವ ವೇಳೆ ಒಂದು ಸುವರ್ಣ ಸಮಯವಾಗಿರುತ್ತದೆ.  ವಿದ್ಯಾರ್ಥಿ ದೆಸೆಯಲ್ಲಿ ಕಲಿತು ರೂಢಿಸಿಕೊಳ್ಳುವ ಶಿಸ್ತು ಜೀವನಪೂರ್ತಿ ನೆರವಾಗುತ್ತದೆ.  ಶಿಸ್ತು ಇಲ್ಲದಿದ್ದರೆ ಪ್ರತಿಯೊಬ್ಬ  ವಿದ್ಯಾರ್ಥಿಯ ಜೀವನ ಅಸ್ತವ್ಯಸ್ತವಾಗುತ್ತದೆ. ಶಿಸ್ತಿನಿಂದ ಕೂಡಿದ ವಿದ್ಯಾರ್ಥಿಯು ಎಲ್ಲಾ ಶಿಕ್ಷಕರು,  ತಂದೆ, ತಾಯಿಗೆ ಮೆಚ್ಚುವಂತೆ ಬೆಳೆಯುವುದರಲ್ಲಿ ಸಂಶಯವಿಲ್ಲ. ಶಿಸ್ತು ವಿದ್ಯಾರ್ಥಿಗೆ ಒಂದು ಕವಚವಿದ್ದ ಹಾಗೆ. ಶಿಸ್ತು, ಪ್ರಾಮಾಣಿಕತೆ ಮಹತ್ವ ಅರಿತ ವಿದ್ಯಾರ್ಥಿಗೆ ಜೀವನದಲ್ಲಿ ಎಂದೂ ಸೋಲೆ ಇರುವುದಿಲ್ಲ. `ವಿದ್ಯೆ ವಿನಯಶೋಭತೆ’ ಎನ್ನುವ ಹಾಗೆ  ವಿದ್ಯೆಯು ಶೋಭೆಯನ್ನು  ನೀಡುತ್ತದೆ. ಪ್ರತಿಯೊಂದರಲ್ಲೂ ರೂಢಿಸಿಕೊಳ್ಳುವ ಶಿಸ್ತು, ವಿನಯಕ್ಕೆ ಜೊತೆಗೂಡುತ್ತದೆ.

ಪ್ರತಿಯೊಬ್ಬ ವಿದ್ಯಾರ್ಥಿಯೂ ಅಂದಿನ ಪಾಠವನ್ನು ಅಂದೇ ಓದಿ ಅರಿತುಕೊಳ್ಳಬೇಕು. ತನ್ನ ಪಠ್ಯ ಪುಸ್ತಕವನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಸಮವಸ್ತ್ರದ ಸ್ವಚ್ಛತೆ ಯನ್ನು ಕಾಪಾಡಬೇಕು. ಸಮಯ ಪ್ರಜ್ಞೆ ಶಿಸ್ತಿನಲ್ಲಿ ಸೇರಿದಾಗ ಜೀವನದುದ್ದಕ್ಕೂ ಸಹಾಯವಾಗುತ್ತದೆ. ಆತ್ಮ ವಿಶ್ವಾಸದಿಂದ ಓದಿದಾಗ ಒಳ್ಳೆಯ ಅಂಕ ಗಳಿಸೇ ತೀರುವೆನೆ0ದು ಛಲ ಬೆಳೆಯುತ್ತದೆ. ಶಿಸ್ತಿನಿಂದ ಕರ್ತವ್ಯ ನಿರ್ವಹಣೆ ಜೀವನದಲ್ಲಿ ಸಾಧ್ಯವಾಗುವುದು.  ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಜೀವನದಲ್ಲಿ ಶಿಸ್ತು, ಸಂಯಮ, ಛಲ, ಪ್ರಾಮಾಣಿಕತನವನ್ನು ಬೆಳೆಸಿಕೊಂಡರೆ  ಮುಂದೆ ದೇಶದ ಒಳ್ಳೆಯ ಪ್ರಜೆಯಾಗುವು ದರಲ್ಲಿ ಸಂಶಯವಿಲ್ಲ.

ಶಿಸ್ತು, ಪ್ರಾಮಾಣಿಕತೆ ಒಂದೇ ನಾಣ್ಯದ ಎರಡು ಮುಖ

Also Read: ಕಿಡ್ನಿ ಕಲ್ಲು ಕರಗಿಸುತ್ತೆ ಕರಿಬೇವು!!!