ಅಭ್ಯಾಸ ಮತ್ತು ವೈರಾಗ್ಯದಿಂದ ಮನಸ್ಸಿನ ಏಕಾಗ್ರತೆಯನ್ನು ಹೇಗೆ ಸಿದ್ದಿಸಿಕೊಳ್ಳಬಹುದು ತಿಳಿಯಿರಿ

0
798

ವೈರಾಗ್ಯವೆಂದರೆ ಒಂದು ಉದ್ದೇಶವಿಟ್ಟುಕೊಂಡು ಅದನ್ನು ಈಡೇರಿಸಿ ಕೊಳ್ಳುವ ಪ್ರಯತ್ನದಲ್ಲಿ ತೊಡಗಿದಾಗ, ಇನ್ನಾವ ಪ್ರಚೋದನೆ – ಆಕರ್ಷಣೆಗಳೂ ಮನಸೆಳೆಯದಂತೆ ನೋಡಿಕೊಳ್ಳುವುದು. ಎಂದರೆ ಕೈಗೊಂಡ ಕಾರ್ಯದಲ್ಲಿ ಮಾತ್ರವೇ ಅನುರಾಗ, ಅದಕ್ಕೆ ವ್ಯತಿರಿಕ್ತವಾದ ವಿಷಯದಲ್ಲಿ ವಿರಾಗವಿದೆ.

ವೈರಾಗ್ಯ ಸಂನ್ಯಾಸಿಗಳು ಆತ್ಮ ಸಾಕ್ಷ್ಯಾತ್ಕಾರವನ್ನು ಜೀವನದ ಗುರಿ ಯಾಗಿಟ್ಟುಕೊಂಡಿರುವುದರಿಂದ ಜಗತ್ತಿನ ಇತರ ಎಲ್ಲ ಆಕರ್ಷಣೆಗಳನ್ನು ಬದಿಗೊತ್ತಬೇಕಾಯಿತು. ಸಾಮಾನ್ಯವಾಗಿ, ಅದನ್ನೇ ವೈರಾಗ್ಯವೆಂದು ಕರೆಯುವುದರಿಂದ ಇಂದು ವೈರಾಗ್ಯವೆಂದರೆ ಸನ್ಯಾಸಿಯಾವುದು. ಕಾಡಿಗೆ ಹೋಗುವುದು ಎಂಬರ್ಥವೇ ಅಂತಯಲ್ಲಾರು ತಿಳಿದುಕೊಂಡಿದ್ದಾರೆ. ಆದರೆ ಯಲ್ಲಾರು ತಿಳಿದು ಕೊಂಡಂತಿಲ್ಲ ಉದ್ದೇಶವನ್ನು ಸಿದ್ಧಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿರುವವರೆಲ್ಲರಲ್ಲೂ ಈ ವೈರಾಗ್ಯದ ಅಂಶ ಇದ್ದೇ ಇರುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾ ಜ್ಞಾನಾರ್ಜನೆಯಲ್ಲಿ ತೊಡಗಿರುವಾಗ ಇತರ ಆಕರ್ಷಣೆಗಳು ಅವರ ಮನಸ್ಸನ್ನು ಸೆಳೆಯುವಂತಿದ್ದರೆ ವಿದ್ಯಾಭ್ಯಾಸ ಹೇಗೆ ಯಶಸ್ವಿಯಾಗಲು ಸಾಧ್ಯ ? ಅದರಲ್ಲೂ ಏಕಾಗ್ರತೆಯನ್ನು ಅಭ್ಯಾಸಮಾಡುವವರಂತೂ ಇತರ ವಿಷಯಗಳೆಡೆ ಕಣ್ಣೆತ್ತಿಯೂ ನೋಡುವಂತಿಲ್ಲ.

*ಏಕಾಗ್ರತೆಯಲ್ಲಿ ಆನಂದವಿದೆ, ಏಕಾಗ್ರತೆಯಿಂದ ಸಿದ್ಧಿಯಿದೆ ಎಂಬ ಸುದ್ದಿ ತಿಳಿದ ವಿದ್ಯಾರ್ಥಿಯು ಕಾರ್ಯಕಲ್ಪನಾಗಿರಬೇಕು.

*ಮಾಡುವ ಅಧ್ಯಯಾನದಲ್ಲಿ ಅಥವಾ ಕೆಲಸದಲ್ಲಿ ಮೈಮರೆತರೆ ಏಕಾಗ್ರತೆ ಸಿದ್ಧಿಸಿದೆ ಎಂದರ್ಥ.

*ಶಿಸ್ತುವದ್ಧ ಯೋಗಾಸನಗಳು ನರಮಂಡಲವನ್ನು ಬಲಗೊಳಿಸುವುದಲ್ಲದೆ ಚುರುಕಾಗಿಸುವುದರಿಂದ ಅವು ಏಕಾಗ್ರತೆ ಬಹಳ ಸಹಾಕಾರಿಯಗುತ್ತದೆ.