ಈ ಮಹಿಳಾ ಪೊಲೀಸ್ ಅಧಿಕಾರಿ ರೌಡಿಗಳ ಅಡ್ಡಕ್ಕೆ ನುಗ್ಗಿ ರೌಡಿಗಳಿಗೆ ಎಚ್ಚರಿಕೆ ನೀಡಿ ಮಹಿಳಾ ಸಬಲೀಕರಣಕ್ಕೆ ಒಳ್ಳೆ ಮಾದರಿಯಾಗಿದ್ದಾರೆ..

0
580

ಬೆಂಗಳೂರು: ವೈಟ್​ಫೀಲ್ಡ್​ ಡಿಸಿಪಿ ಅಬ್ದುಲ್​ ಅಹಾದ್​ ಅವರ ಟ್ವಿಟ್ಟರ್​ ಪೋಸ್ಟೊಂದು ವೈರಲ್​ ಆಗತೊಡಗಿತ್ತು. ಒಂದು ಫೋಟೋ ಲಗತ್ತಿಸೆ ಡಿಸಿಪಿ ಅಬ್ದುಲ್​ ಅಹಾದ್​ ಹೀಗೊಂದು ಒಕ್ಕಣೆ ಬರೆದಿದ್ದರು; ‘ಇದನ್ನು ಮಹಿಳಾ ಸಬಲೀಕರಣವೆಂದೆನ್ನದೆ, ಮತ್ತೇನೆಂದು ಕರೆಯುತ್ತಾರೆ’ ಎಂದಿದ್ದರು. ಸಧ್ಯ ಆ ಟ್ವೀಟ್​ ಅನ್ನು 14 ಮಂದಿ ಮರು ಟ್ವೀಟ್ ಮಾಡಿದ್ದಾರೆ. 56 ಮಂದಿ ಶೇರ್‌ ಹಾಗೂ 195 ಮಂದಿ ಲೈಕ್ ಮಾಡಿದ್ದಾರೆ. ಅಷ್ಟಕ್ಕೆ ಕಾರಣವೇನೆಂದರೆ.

ಪೂರ್ವಾಪರ ಭಾರತದ ಇತಿಹಾಸವೆಂದಿಗೂ ಮಹಿಳೆಯರ ಸಬಲೀಕರಣವನ್ನು ಬಯಸಿದಂತೆ ಕಾಣುವುದಿಲ್ಲ. ಪ್ರತೀ ಕಾಲಘಟ್ಟದಲ್ಲೂ ಆಕೆ ನಿರಂತರವಾಘಿ ತುಳಿಯಲ್ಪಡುತ್ತಿರುವವಳಾಗೇ ಗುರುತಿಸಿಕೊಳ್ಳುತ್ತಿದ್ದಾಳೆ. ನ್ಯಾಯ ಸಮ್ಮತವಾದ ಸಮಾನತೆ ಈ ಕ್ಷಣಕ್ಕೂ ಮಹಿಳೆಗೆ ಧಕ್ಕಿಲ್ಲ. ಮೀಸಲಾತಿ ಒಂದಿಷ್ಟು ಆಕೆಯನ್ನು ಗಟ್ಟಿಗೊಳಿಸಿರಬಹುದು ಅಷ್ಟೇ ಹಾಗೆಂದು ಆಕೆಯನ್ನು ಸ್ವತಂತ್ರವಾಗಿ ಕಡೆಯಲು ಸಾಧ್ಯವಾಗಿಲ್ಲ. ರಾಜನಾಸ್ಥಾನದಲ್ಲಿ ನರ್ತಕಿಯಾಗಿ ಕುಣಿಯುತ್ತಿದ್ದ ಆಕೆ ಇಂದು ಲೈವ್​ ಬ್ಯಾಂಡ್​ಗಳಲ್ಲಿ ಕುಣಿಯುತ್ತಿದ್ದಾಳೆ. ಋಷಿಮುನಿಗಳ ಶಾಪದಿಂದ ಸುಟ್ಟು ಕರಕಲಾಗುತ್ತಿದ್ದ ಆಕೆ ಇಂದು ಯಾರದೋ ಶಾಪಕ್ಕೆ ಆ್ಯಸಿಡ್ ದಾಳಿಗೊಳಗಾಗಿ ಕರಕಲಾಗುತ್ತಿದ್ದಾಳೆ.

ಹೆಚ್ಚು ವ್ಯತ್ಯಾಸವೇನಿಲ್ಲ ಎಲ್ಲೋ ಅಲ್ಪ ಸ್ವಲ್ಪ ಬದಲಾವಣೆಗಳಾಗಿರಬಹುದು ಅಷ್ಟೇ. ಸತಿ ಸಹಗಮನದಂತಹ ಅನಿಷ್ಠಪದ್ಧತಿಗಳು ನಿರಂತರ ಹೋರಾಟದಿಂದ ದೂರಾದವು. ಆದರೆ ಇಂದಿಗೂ ಮಡಿವಂತಿಕೆ, ಮಾನ ಮರ್ಯಾದೆಯ ಪ್ರಸ್ತಾಪ ಬಂದಾಗ ಆಕೆ ಅಭದ್ರಳು. ಎಷ್ಟೋ ಕಡೆಗಳಲ್ಲಿ ಇಂದಿಗೂ ಮರ್ಯಾದಾ ಹತ್ಯೆಯಂತಹಾ ಘಟನೆಗಳು ಘಟಿಸುತ್ತಲೇ ಇವೆ. ಇಷ್ಟೊಂದು ಪೀಠಿಕೆಯ ಜೊತೆಗೆ ಸಂಪ್ರಧಾಯ, ಮಡಿ, ಮೈಲಿಗೆಯ ವಿಚಾರದಲ್ಲೂ ಆಕೆ ನಿರಂತರವಾಗಿ ತುಳಿಯಲ್ಪಡುತ್ತಿರುವವಳೇ; ಆಕೆಯ ಧರಿಸುವ ಬಟ್ಟೆಯಿಂದ ನಡೆಯೋ ನಡತೆಯವರೆಗೂ ಕಮೆಂಟಿಸುವವರ ಸಂಖ್ಯೆಯೇ ಜಾಸ್ತಿ.

ಈಗಲೂ ಪುರುಷ ಪ್ರಧಾನ ಭಾರತೀಯ ಸಮಾಜ ಋತುಮತಿಯಾಗೋ ಹೆಣ್ಣನ್ನು ಯಾರನ್ನೋ ಕಟ್ಟಿಕೊಂಡು ಹಡೆದರಷ್ಟೇ ಸಾಕು ಎಂದೇ ಬಯಸುತ್ತದೆ. ಮುಟ್ಟಾದ ಮಹಿಳೆ ಮನೆಯಿಂದ ಹೊರಗಿರಲಿ ಅನ್ನೋ ಸಮಾಜ; ಆಕೆ ಹೊರಗಡ್ಡಾಡಿಕೊಮಡಿರುವುದನ್ನು ಬಯಸಲೇ ಇಲ್ಲ. ಇವೆಲ್ಲವೂ ಮೀರಿ ಬದಲಾವಣೆಗಳಾಗಬೇಕು. ಅಂದರೆ ಉತ್ತೇಜಿಸುವವರ ಸಂಖ್ಯೆಯೂ ಹೆಚ್ಚಾಗಬೇಕು. ಆ ಉತ್ತೇಜನದ ಒಂದು ಭಾಗವಾಗಿ ವೈಟ್​ಫೀಲ್ಡ್​ ಡಿಸಿಪಿ ಅಬ್ದುಲ್​ ಅಹಾದ್​ರವರ ಟ್ವೀಟ್​​ ಸಂದೇಶ ಕಾಣಿಸುತ್ತಿದೆ.​

ಅದಕ್ಕೆ ಕಾರಣ ರೌಡಿಗಳ ಮನೆ ಹಾಗೂ ಅಡ್ಡೆಗಳಿಗೆ ಹೋಗಿ ಎಚ್ಚರಿಕೆ ನೀಡಿರುವ ಎಚ್‌ಎಎಲ್ ಠಾಣೆಯ ಮಹಿಳಾ ಎಸ್‌ಐ ಪ್ರಶೀಲಾ ಅವರ ಕ್ರಮ. ಸಧ್ಯ ಮಹಿಳಾ ಎಸ್‌ಐ ಪ್ರಶೀಲಾ ಅವರ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಎಚ್‌ಎಎಲ್ ಠಾಣೆಯ ಮಹಿಳಾ ಎಸ್‌ಐ ಪ್ರಶೀಲಾ ಅವರು ಶುಕ್ರವಾರ ನಸುಕಿನಲ್ಲಿ ರೌಡಿಗಳ ಮನೆ ಹಾಗೂ ಅಡ್ಡೆಗಳಿಗೆ ಹೋಗಿ ಖಡಕ್ ಎಚ್ಚರಿಕೆ ನೀಡಿದ್ದರು. ಎಸ್‌ಐ ಪ್ರಶೀಲಾ, ಮುಂಜಾನೆಯೇ ಎಚ್‌ಎಎಲ್ ಠಾಣಾ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಸಂಚರಿಸಿ ರೌಡಿಗಳಿಗೆ ಮುಖಾಮುಖಿಯಾಗಿ ಎಚ್ಚರಿಕೆ ನೀಡಿದರು. ಸಂಬಂಧಿಕರನ್ನು ಸಂಪರ್ಕಿಸಿ ರೌಡಿಗಳನ್ನು ನಿಯಂತ್ರಿಸುವಂತೆ ಹೇಳಿದರು. ಕಾರ್ಯಾಚರಣೆಯಲ್ಲಿ ಸುಮಾರು 65 ಮಂದಿ ರೌಡಿಗಳನ್ನು ಗುರುತಿಸಿ ಎಚ್ಚರಿಕೆ ನೀಡಿದ್ದಾರೆ. ಅವರಿಂದ ‘ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ’ ಎಂದು ಮುಚ್ಚಳಿಕೆ ಬರೆಸಿಕೊಂಡು ಬಂದಿದ್ದಾರೆ. ರೌಡಿಗಳಿಗೆ ಪ್ರಶೀಲಾ ಎಚ್ಚರಿಕೆ ನೀಡಿದ ಚಿತ್ರವನ್ನು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಅಬ್ದುಲ್ ಅಹಾದ್ ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು. ‘ಇದನ್ನು ಮಹಿಳಾ ಸಬಲೀಕರಣ ಎನ್ನದೆ ಮತ್ತೇನೆಂದು ಕರೆಯುತ್ತಾರೆ…’ ಎಂದೂ ಟ್ವೀಟ್ ಮಾಡಿದ್ದರು.