ಸುಭಾಷ್​ ಚಂದ್ರ ಬೋಸ್​ ಸಾವಿನ ರಹಸ್ಯ ಬಯಲು- ವಿಮಾನ ಅಪಘಾತದಲ್ಲೇ ನೇತಾಜಿ ನಿಧನ..!

0
953

ಸುಭಾಷ್​ ಚಂದ್ರ ಬೋಸ್​ ವಿಮಾನ ಅಪಘಾತದಲ್ಲೇ ನಿಧನರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

 

 

Image result for subhash chandra bose

ಏನಪ್ಪಾ ಈಗ ಈ ವಿಚಾರ ಅಂತೀರಾ ಯಾಕೆ ಅಂದ್ರೆ ನೇತಾಜಿ ಸಾವಿನ ರಹಸ್ಯ ತಿಳಿಯಲು ಆರ್​ಟಿಐ ಅಡಿ ಯಲ್ಲಿ ಸಯಾಕ್​ ಸೆನ್ ಎಂಬ ವ್ಯಕ್ತಿ ಅರ್ಜಿ ಸಲ್ಲಿಸಿದ್ದರು ಅರ್ಜಿಗೆ ಉತ್ತರಿಸಿರುವ ಕೇಂದ್ರ ಸರ್ಕಾರ, 1945ರ ಆಗಸ್ಟ್​​ 18 ರಂದು ತೈವಾನ್​ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲೇ ನೇತಾಜಿ ಮೃತಪಟ್ಟಿದ್ದಾರೆ ಎಂದು ಉತ್ತರಿಸಿದೆ.

Image result for subhash chandra bose

ಮುಖರ್ಜಿ ಆಯೋಗ ಗುಮ್ನಾಮಿ ಬಾಬಾ ಎಂಬುವರು ನೇತಾಜಿ ಆಗಿರಲಿಲ್ಲ ಎಂದು ವರದಿ ನೀಡಿದೆ. ಸುಭಾಷ್​ ಚಂದ್ರ ಬೋಸ್​ ಸಾವಿನ ರಹಸ್ಯ ತಿಳಿಯಲೆಂದು ರಚಿಸಲಾಗಿದ್ದ ಶಹನಾವಾಜ್​ ಆಯೋಗ, ನ್ಯಾ. ಜಿಡಿ ಖೋಸ್ಲಾ ಆಯೋಗ ಮತ್ತು ನ್ಯಾ. ಮುಖರ್ಜಿ ಆಯೋಗ ಈ ಮೂರು ಆಯೋಗವೂ ಇದೇ ಒಮ್ಮತಾಭಿಪ್ರಾಯಕ್ಕೆ ಬಂದಿದೆ. ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರು ತೈವಾನ್​ ಅಪಘಾತದಲ್ಲೇ ಮೃತಪಟ್ಟಿರುವುದು ನಿಜ ಎಂದು ಕೂಡ ಆಯೋಗಗಳು ನಿರ್ಧಾರಕ್ಕೆ ಬಂದಿವೆ.Image result for subhash chandra bose1985ರವರೆಗೆ ಉತ್ತರಪ್ರದೇಶದಲ್ಲಿ ಗುಮ್ನಾನಿ ಬಾಬಾ ಎಂಬ ಹೆಸರಿನಲ್ಲಿ ಇದ್ದವರು ನೇತಾಜಿಯೇ ಎಂದು ಕೂಡ ತಮ್ಮ ಅರ್ಜಿಯಲ್ಲಿ ಸೇನ್​​ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಗೃಹ ಸಚಿವಾಲಯ ಗುಮ್ನಾಮಿ ಬಾಬಾ ಅವರ ಕುರಿತು ಕೆಲ ಮಾಹಿತಿಗಳು ಲಭ್ಯವಾಗಿದ್ದು, ಅವುಗಳನ್ನು ಮುಖರ್ಜಿ ಆಯೋಗ ವರದಿಯ 114 ರಿಂದ 122ರವರೆಗಿನ ಪುಟುಗಳಲ್ಲಿ ತಿಳಿಸಲಾಗಿದೆ. ಈ ಮಾಹಿತಿಯನ್ನು mha.nic.in.ಜಾಲತಾಣದಿಂದ ಪಡೆಯಬಹುದು ಎಂದು ತಿಳಿಸಿದೆ.