ಈ ರೈತ ಅತ್ಯಂತ ಕಡಿಮೆ ವೆಚ್ಚದಲ್ಲಿ ನೈಸರ್ಗಿಕವಾಗಿ ಕೃಷಿ ಮಾಡುತ್ತಿರುವ ಸಾಧನೆ ಅನೇಕ ರೈತರಿಗೆ ಮಾದರಿಯಾಗಿದೆ!!

0
1039

Kannada News | Karnataka Achiecers

ಮಹಾರಾಷ್ಟ್ರದ ಕೃಷಿಕ ಸುಭಾಷ್ ಪಾಲೇಕರ್ ಶೂನ್ಯ-ಬಜೆಟ್ ನೈಸರ್ಗಿಕ ಕೃಷಿ ಎಂದು ಕರೆಯಲ್ಪಡುವ ಸಮರ್ಥ ಕೃಷಿ ಮಾದರಿಯನ್ನು ಕಂಡು ಹಿಡಿದಿದ್ದಾನೆ. ಸುಭಾಷ್ ಪಾಲೇಕರ್ ಶೂನ್ಯ-ಬಜೆಟ್ ನೈಸರ್ಗಿಕ ಕೃಷಿ ಎಂದು ಕರೆಯಲ್ಪಡುವ ಸಮರ್ಥ ಕೃಷಿ ಮಾದರಿಯನ್ನು ಕಂಡುಹಿಡಿದ ಪ್ರಪ್ರಥಮ ಭಾರತೀಯನಾಗಿದ್ದಾನೆ.

ಕೃಷಿ ವರ್ಗದವರು ಇವರನ್ನು “ಕೃಷಿಯ ಋಷಿ” ಎಂದು ಅಭಿಮಾನದಿಂದ ಕರೆಯುತ್ತಾರೆ. 1949 ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದ ಸುಭಾಷ್ ಪಾಲೇಕರ್, ನಾಗ್ಪುರದ ಕಾಲೇಜಿನಲ್ಲಿ ಕೃಷಿ ವಿಷಯದಲ್ಲಿ ಪದವಿ ಮುಗಿಸಿದ್ದಾರೆ. 1972 ರಲ್ಲಿ ತಮ್ಮ ತಂದೆ ಜೊತೆ ಸೇರಿ ತಮ್ಮ ಹೊಲದಲ್ಲಿ ಕೃಷಿ ಮಾಡಲು ಶುರು ಮಾಡಿದರು.

ರಾಸಾಯನಿಕಗಳಿಗೆ ಮಾರುಹೋದ ಇವರ ತಂದೆ, ಉತ್ಪಾದನೆ ಮತ್ತು ಗುಣಮಟ್ಟವನ್ನು ಕಳೆದುಕೊಳ್ಳಲು ಪ್ರಾರಂಭಿಸಿದರು.
ಇದನ್ನು ನೋಡಿದ ಪಾಲೇಕರ್ ಅವರು ರಾಸಾಯನಿಕಕ್ಕೆ ಪರ್ಯಾಯ ದಾರಿ ಹುಡುಕಬೇಕು, ಕೃಷಿಯಲ್ಲಿ ಆಧುನಿಕತೆ ತರಬೇಕು ಎಂದು ಯೋಚಿಸಿದರು.

ಕಾಡಿನಲ್ಲಿ ಯಾವುದೇ ರಾಸಾಯನಿಕವಿಲ್ಲದೆ ಬೆಳೆಯುವ ದೊಡ್ಡ ಮರಗಳನ್ನು ನೋಡಿ ಅಚ್ಚರಿಗೊಂಡ ಇವರು ಅಲ್ಲಿಯ ನೈಸರ್ಗಿಕ ಬೆಳೆಯ ಮೇಲೆ ಅಧ್ಯಯನ ಮಾಡಿದರು. ಅವರು ಕಾಡಿನ ಸ್ವಾಭಾವಿಕ ಅಭಿವೃದ್ಧಿ ಮತ್ತು ಅದಕ್ಕೆ ಸಂಬಂಧಿತ ನೈಸರ್ಗಿಕ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿದರು.

ಯಾವ ಕಾರಣದಿಂದ ಪರಿಸರ ವ್ಯವಸ್ಥೆಯು ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆಯೇ ಬೆಳೆಯುತ್ತಿದೆ ಎಂದು ಅವರು ಕಲಿತರು. ಆರು ವರ್ಷದ ನಿರಂತರ ಅಧ್ಯಯನದ ನಂತರ ಅವರು ಶೂನ್ಯ-ಬಜೆಟ್ ನೈಸರ್ಗಿಕ ಕೃಷಿ (ZBNF) ಪರಿಚಯಿಸಿದರು. ZBNF ವ್ಯವಸ್ಥೆಯ ಮೂಲಕ ಬೆಳೆಯುವ ವೆಚ್ಚ ಮತ್ತು ಕೊಯ್ಲು ಮಾಡುವ ವೆಚ್ಚ ಶೂನ್ಯವಾಗಿರುತ್ತದೆ.

ಭಾರತೀಯ ರೈತರು ಬಳಸಿದ ಪ್ರಾಚೀನ ತಂತ್ರಗಳು ಕೃಷಿ ಪ್ರಕ್ರಿಯೆಗೆ ನೆರವಾಗಬಹುದು ಎಂದು ಅವರು ಕಂಡುಕೊಂಡರು.
ಅವರು ಶೂನ್ಯ ಬಂಡವಾಳ ಸೂತ್ರಗಳಾದ ಜೀವಮಿತ್ರ, ಬೀಜಮಿತ್ರ ಮತ್ತು ಮಲ್ಚಿಂಗ್ ಅನ್ನು ಮರುಸೃಷ್ಟಿಸಿದರು. ಅವರು ದೇಶಾದ್ಯಂತ ಕಾರ್ಯಾಗಾರ ಮಾಡಿ ಈ ಬಗ್ಗೆ ವಿಚಾರಗೋಷ್ಠಿ ಏರ್ಪಡಿಸಿ ಮತ್ತು ಹಲವು ಭಾಷೆಯಲ್ಲಿ ಪುಸ್ತಕ ಬಿಡುಗಡೆ ಮಾಡಿದರು.

ಈಗ ಇವರ ZBNF ಕೃಷಿ ಪದ್ದತಿಯನ್ನು ಕರ್ನಾಟಕ, ಕೇರಳ, ಹರಿಯಾಣ ಮತ್ತು ಪಂಜಾಬಿನಲ್ಲಿ ಲಕ್ಷಾಂತರ ರೈತರು ಅಳವಡಿಸಿಕೊಂಡಿದ್ದಾರೆ. ಇವರ ಈ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಇವರಿಗೆ 2016 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಿತು. ಸುಭಾಷ್ ಪಾಲೇಕರ್ ಅವರು, ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ರೈತ ಅಥವಾ ಕೃಷಿಕನಾಗಿದ್ದಾರೆ.

Also Read: ತೋಟಗಾರಿಕೆ ಬೆಳೆಗಳು, ವೈವಿಧ್ಯಮಯ ಹೂವುಗಳನ್ನು ಬೆಳೆಯುವ ಆಸೆ ನಿಮ್ಮಗಿದೆಯೆ? ಹಾಗಿದ್ದಲ್ಲಿ ತಾರಸಿತೋಟ ಪದ್ಧತಿಯನ್ನು ಪಾಲಿಸಿ