ನೀರು ಬೇಕಾದರೆ ಕೊಡಬಹುದು, ಆದರೆ ಕಾವೇರಿ ನೀರೇ ಬೇಕು ಎಂಬ ಮೊಂಡ ಹಠ ತಮಿಳರಿಗೆ ಯಾಕೆ: ಸುಬ್ರಮಣ್ಯ ಸ್ವಾಮಿ

0
482

ಕರ್ನಾಟಕ ಹಾಗೂ ತಮಿಳುನಾಡು ನಡುವಿನ ನೀರಿನ ಬಿಕ್ಕಟ್ಟು ಇನ್ನು ನಿನ್ನೆಯದಲ್ಲ. ಕಾವೇರಿ ನೀರಿನ ಬಗ್ಗೆ ಕೇಂದ್ರ ಸರ್ಕಾರಗಳು ಸಹ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತವೆ. ಯಾರ ಪರ ಮಾತನಾಡಿದ್ರು ಕಷ್ಟ. ಏಕೆಂದ್ರೆ ಇನ್ನೊಂದು ಕಡೆಯಲ್ಲಿ ಬೆಂಕಿ ಫಿಕ್ಸ್​​.. ಈಗಲೂ ಕರ್ನಾಟಕದ ಪರ ತೀರ್ಪು ಬಂದಿರೋದು ತಮಿಳುನಾಡು ಜನರನ್ನು ಕೆರಳಿಸಿದೆ. ಅಲ್ಲದೆ ದಿನೇ ದಿನೇ ಪ್ರತಿಭಟನೆ ಕಾವು ಹೆಚ್ಚುತಿದೆ. ಇದರ ಪರಿಣಾಮ ಈಗ ನಡೆಯುತ್ತಿರುವ ಐಪಿಎಲ್​ ಮೇಲೂ ಬಿದ್ದರೂ ಅಚ್ಚರಿ ಇಲ್ಲವೇ ಇಲ್ಲ.

ಈ ಬಗ್ಗೆ ಎಲ್ಲ ಪಕ್ಷದ ನಾಯಕರೂ ಸಹ ಅಳೆದು ತೂಗಿ ಮಾತನಾಡುತ್ತಾರೆ. ಇನ್ನು ಕೆಲವರು ಈ ಪ್ರಶ್ನೆಗಳನ್ನು ಬಿಟ್ಟು ಬೇರೆಯ ಪ್ರಶ್ನೆಗಳನ್ನು ಕೇಳಿ ಎಂದು ತಿಳಿಸುತ್ತಾರೆ. ಆದ್ರೆ, ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಾ.ಸುಬ್ರಹ್ಮಣ್ಯಂ ಸ್ವಾಮಿ ತಮಿಳುನಾಡು ಪತ್ರಿಕೆ ಕೇಳಿದ ಪ್ರಶ್ನೆಗೆ ಖಡಕ್ ಉತ್ತರ ನೀಡಿದ್ದಾರೆ.

ಇನ್ನು ನಿಮಗೆ ನೀರು ಬೇಕಿದ್ರೆ, ಹೇಳಿ ಪೂರೈಸಲು ನಾನು ಶ್ರಮಿಸುವೆ. ಆದ್ರೆ ಕಾವೇರಿಯ ನೀರನ್ನು ಕೇಳಿದ್ರೆ ಅದು ಸಿಗದು. ಕೆಲವರು ಈ ಬಗ್ಗೆ ನಿಮಗೆ ಸುಳ್ಳು ಮಾಹಿತಿ ನೀಡಿ ನಿಮ್ಮ ದಾರಿಯನ್ನು ತಪ್ಪಿಸುತ್ತಿದ್ದಾರೆ. ಹೀಗೆ ಹೇಳುವ ನಾಯಕರ ಮಾತಿಗೆ ಮನ್ನಣೆ ನೀಡಬೇಡಿ ಎಂದು ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣ್ಯಂ ತಿಳಿಸಿದ್ದಾರೆ.

ಇನ್ನು ತಮಿಳುನಾಡಿಗೆ ನೀರು ಬೇಕಿದ್ರೆ, ಇಸ್ರೆಲ್​ನಿಂದ ಯಂತ್ರ ತರಿಸಿ, ಉಪ್ಪು ನೀರನ್ನು ಶುದ್ಧ ನೀರನ್ನಾಗಿ ಪರಿವರ್ತಿಸಬಹುದು. ಇದ್ರಿಂದ ರಾಜ್ಯದ ಜನತೆಗೆ 24 ಗಂಟೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬಹುದು. ಅಲ್ಲದೆ ಬೆಳೆಗೆ ಬೇಕಾದ ನೀರನ್ನು ಕೊಡಲೂಬಹುದು. ಅದು ಬಿಟ್ಟು ಕನ್ನಡ ನಾಡಿನ ಜೀವ ನದಿಯನ್ನು ಕೇಳಿದ್ರೆ ಅದು ಕೊಡಲು ಸಾಧ್ಯವೆ ಇಲ್ಲ. ಉಳಿದ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊಸ ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ರು.

ಸ್ವಾಮಿ ಸಮುದ್ರ ನೀರನ್ನು ಶುದ್ಧವಾಗಿಸಲು ಸಮಯ ಹೆಚ್ಚು ಹಿಡಿಯುತ್ತದೆ ಎಂಬ ಪ್ರಶ್ನೆಗೆ? ರೀ ನೀವು ಕಾವೇರಿಗಾಗಿ 5 ದಶಕಗಳಿಂದ ಹೋರಾಟ ನಡೆಸಿದ್ದೀರಿ. ನನಗೆ 4 ತಿಂಗಳು ಕಾಲಾವಕಾಶ ನೀಡಿ, ಉಪ್ಪು ನೀರನ್ನು ಬಳಸಲು ಯೋಗ್ಯ ರೀತಿಯಲ್ಲಿ ಮಾಡಿ ತೋರಿಸುತ್ತೇನೆ ಎಂದಿದ್ದಾರೆ.