ಇವರ ತಂದೆ 10,000 ರುಪಾಯಿ ಬಂಡವಾಳ ಹಾಕಿದ್ದ ವ್ಯವಹಾರವೀಗ ಇವರ ಶ್ರಮದಿಂದಾಗಿ 300 ಕೋಟಿ ವ್ಯವಹಾರ ಮಾಡುವ ಬೃಹತ್ ಸಂಸ್ಥೆಯಾಗಿ ನೂರಾರು ಜನರಿಗೆ ಆಸರೆಯಾಗಿದೆ…

0
441

ಸಾಧನೆಗೆ ಯಾವುದೇ ಅಡ್ಡಿ ಆತಂಕಗಳು ಯಾವ ಲೆಕ್ಕಕ್ಕೂ ಅಲ್ಲ, ಇದಕ್ಕೆ ಸಾಕ್ಷಿ ಕೈಲೇಶ್ ಎಂಬ ಉದ್ಯಮಿ. ಇವರು 300 ಕೋಟಿ ವಹಿವಾಟು ಮಾಡುತ್ತಿದ್ದಾರೆ ಅಂದರೆ ಜನರಿಗೆ ಆಶರ್ಯ ಅನಿಸೋದಿಲ್ಲ. ಆದರೆ ಇದರ ಹಿಂದಿರುವ ವಿಷಯ ತಿಳಿದರೆ ನಿಮಗೂ ಇಂತಹ ಸಾಧನೆ ಮಾಡಲು ಸ್ಪೂರ್ತಿಯಾಗುತ್ತೆ. ಬರಿ 10 ಸಾವಿರದಿಂದ ಪ್ರಾರಂಭವಾದ ವ್ಯಾಪಾರ ಈಗ ಎಷ್ಟೊಂದು ಪ್ರಭುದ್ದತೆ ಪಡೆದಿದೆ ನೋಡಿ.

ಹೌದು ಮುಂಬೈನಲ್ಲಿ ಕೈಲೇಶ್ ಷಾ ಎಂಬುವರು ತಮ್ಮ ತಂದೆ ಜೊತೆಗೂಡಿ ಸಣ್ಣ ಪ್ಲಾಸ್ಟಿಕ್ ವ್ಯಾಪಾರವನ್ನು ಶುರುಮಾಡಿ ಈಗ ಪ್ಲಾಸ್ಟಿಕ್ ಸರಬರಾಜು ಕಂಪೆನಿ ಒಡೆಯರಾಗಿದ್ದಾರೆ. ಇವರ ಕಂಪನಿಯಲ್ಲಿ ಆಲ್ ಟೈಮ್ ಪ್ಲ್ಯಾಸ್ಟಿಕ್ಸ್, ಹೋಮ್ ವೇರ್, ಅಡಿಗೆಮನೆ, ಬಾತ್ ವೇರ್, ಟೇಬಲ್ ವೇರ್ ಮತ್ತು ಮಕ್ಕಳ ಆಟಿಕೆ ಉತ್ಪನ್ನಗಳನ್ನು ಉತ್ಪಾದಿಸಿ ಸುಮಾರು 300 ಕೋಟಿ ವ್ಯವಹಾರ ನಡೆಸುತ್ತಿದ್ದಾರೆ. ಸಣ್ಣ ಕಂಪನಿ ಬೆಳೆಯಲು ಕಾರಣವಾದ ಬಗ್ಗೆ ಕೈಲೇಶ್ ಅವರು ಹೇಳಿದ್ದು ಹೀಗೆ.

ಉದ್ಯಮಿ ಕೈಲೇಶ್ ಷಾ:

ನನ್ನ ತಂದೆ ಲೇಟ್ ಪೂನಚಂದ್ ಷಾ 1974 ರಲ್ಲಿ ಒಂದು ಪ್ಲಾಸ್ಟಿಕ್ ತಯಾರಿಕ ಘಟಕವನ್ನು ಸ್ಥಾಪಿಸಿದರು ಆಗ ನಾವು ಟೀ ಸ್ಟ್ರೈನೆರ್ಸ್ ಮತ್ತು ಟ್ರೇಗಳಂತಹ ಕೆಲವು ಉತ್ಪನ್ನಗಳನ್ನು ಮಾಡುತ್ತಿದ್ದೇವೆ. ಆಗ ನನಗೆ 18 ವರ್ಷವಿತ್ತು ತಂದೆಯವರು ದಾದರ್ ನಿಂದ ದಹನುಗೆ ಸುಮಾರು 137 ಕಿ.ಮೀ. ಪ್ರಯಾಣಿಸಿ ವ್ಯಾಪಾರ ಮಾಡುತ್ತಿದರು ಅವರ ಕೆಲಸದಲ್ಲಿ ನಾನು ಸಹಾಯ ಮಾಡುತ್ತಿದೆ. ನಾನು ಬೆಳಗ್ಗೆ ಕಾಲೇಜ್ ಮುಗಿಸಿ ನಂತರ ಕೆಲಸ ಮಾಡುತ್ತಿದೆ. ನನ್ನ ತಂದೆ ನನಗಾಗಿ ಒಂದು ಸ್ವಂತ ವ್ಯಾಪಾರ ಮಾಡಿಕೊಟ್ಟರು ಅದರಲ್ಲಿ ಹಲವು ಬಾರಿ ಬಿದ್ದೆ ನಂತರ ಅವರೇ ನನಗೆ ಸರಿಯಾದ ಮಾರ್ಗದರ್ಶನ ನೀಡಿದರು. ಅದರಂತೆ ನಾನು ಮುಂದಿನ ಎಲ್ಲ ಕೆಲಸವನ್ನು ಮಾಡಿಕೊಂಡು ಬಂದೆ.

ಇದೆಲ್ಲದಕ್ಕೂ ಸ್ಪೂರ್ತಿ ನನತಂದೆ ಪಟ್ಟ ಕಷ್ಟಗಳು ಅವರು 1964 ರಲ್ಲಿ, ಮುಂಬೈ, ಚೆನ್ನೈ ಮತ್ತು ಸಾಂಗ್ಲಿಯಲ್ಲಿ ಕೆಲವು ಕ್ಲಿಷ್ಟಕರವಾದ ಕೆಲಸಗಳನ್ನು ಮಾಡಿದ ನಂತರ, ಅವರು ಮುಂಬೈಗೆ ಬಂದು ಅವರು ಸ್ಟೇನ್ಲೆಸ್ ಸ್ಟೀಲ್ ಕಟ್ಲರಿ ವ್ಯಾಪಾರವನ್ನು ಸ್ಥಾಪಿಸಲು 10,000 ರೂಪಾಯಿಗಳನ್ನು ಸಂಗ್ರಹಿಸಿದರು. ಅವರು ತಮ್ಮ ವ್ಯವಹಾರವನ್ನು ಬಾಂಬೆ ಟ್ರೇಡರ್ಸ್ ಎಂದು ಹೆಸರಿಸಿದರು. ಅವರು ತಯಾರಕರ ಉತ್ಪನ್ನಗಳನ್ನು ಖರೀದಿಸಿ ಅದನ್ನು ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಿದರು. ಇದೆ ನನಗೆ ಒಂದು ಬುನಾದಿಯಾಗಿದೆ. ಹಾಗೆಯೇ ನಾವು ಯಾರ ಹತ್ತಿರವೂ ಸಹಾಯ, ಸಾಲ ಮಾಡಿ ಈ ಕಂಪನಿ ಮಾಡಿಲ್ಲ ಹಂತ ಹಂತವಾಗಿ ದೊಡ್ಡ ಕಂಪನಿಯಾಗಲು ಶ್ರಮಿಸಿದ್ದೇವೆ ಎಂದು ತಿಳಿಸಿದ್ದಾರೆ.

ಈ ಶ್ರಮದಿಂದ ಕೈಲೇಶ್ ಅವರು 2001 ರಲ್ಲಿ ಆಲ್ ಟೈಮ್ ಪ್ಲ್ಯಾಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಏಕೈಕ ಕಂಪೆನಿಯಡಿ ವಿವಿಧ ಹೆಸರುಗಳ ಅಡಿಯಲ್ಲಿ ಸ್ಥಾಪಿಸಲ್ಪಟ್ಟ ಎರಡು ಘಟಕಗಳನ್ನು ಒಟ್ಟಿಗೆ ತರಲಾಯಿತು. ಈಗ ಕೈಲೇಶ್ ಆಲ್ ಟೈಮ್ ಪ್ಲ್ಯಾಸ್ಟಿಕ್ಸ್ ಕಂಪನಿಯ ಎಂಡಿ. ಆಗಿದ್ದು ಅವರ ಇಬ್ಬರು ಸಹೋದರರು ನಿರ್ದೇಶಕರಾದ್ದರು, ಆದಾದ ನಂತರ 2011 ರಲ್ಲಿ ನಾವು ಸಿಲ್ವಾಸ್ಸಾದಲ್ಲಿ (ದಾದರ್ ಮತ್ತು ನಗರ್ ಹವೇಲಿಯ ಕೇಂದ್ರಾಡಳಿತ ಪ್ರದೇಶದಲ್ಲಿ) ಮೂರನೇ ಸ್ವಯಂಚಾಲಿತ ತಯಾರಿಕಾ ಘಟಕವನ್ನು ಸ್ಥಾಪಿಸಿ ವಾರ್ಷಿಕವಾಗಿ ಸುಮಾರು 15-20 ಪ್ರತಿಶತದಷ್ಟು ಆರ್ಥಿಕವಾಗಿ ಚೇತರಿಸಿಕೊಂಡರು. ಈಗ ಆಲ್ ಟೈಮ್ ಪ್ಲ್ಯಾಸ್ಟಿಕ್ಸ್ ಎನ್ನುವುದು ಬ್ರಾಂಡ್ ಆಗಿದ್ದು, ಇದರ ಖರೀದಿದಾರರು ವಾಲ್ಮಾರ್ಟ್ ಮತ್ತು ಐಕೆಇಎ ಅಂತರಾಷ್ಟ್ರೀಯ ಬ್ರಾಂಡ್ ಗಳನ್ನು ಒಳಗೊಂಡು ಸುಮಾರು 220 ವಿತರಕರನ್ನು ಹೊಂದಿದೆ ಈ ಉತ್ಪನ್ನಗಳು ದೇಶಾದ್ಯಂತ ಲಭ್ಯವಿವೆ. ಈಗ ಇವರ ಕೆಲಸದಲ್ಲಿ ಮಗ, ಧವನಿತ್, ಮತ್ತು ಅಕ್ಷಯ್ ಕುಟುಂಬ ವ್ಯವಹಾರದಲ್ಲಿ ಸೇರಿದ್ದಾರೆ. ಇವರು ಮುಂದೆ ಈ ಕಂಪನಿಯ ಸಂಪೂರ್ಣ ಜವಾಬ್ದಾರಿ ಹೊರುತ್ತಾರೆ. ಇನ್ನೊಂದು ವಿಶೇಷ ವೆಂದರೆ ಈಗೀಗ ನಡೆಯುತ್ತಿರುವ ಪ್ಲಾಸ್ಟಿಕ್ ವಿರೋಧಕ್ಕೆ ಮುಕ್ತವಾದ ವಸ್ತುಗಳನ್ನು ಮತ್ತು ಮರು ತಯಾರಿಕ ವಸ್ತುಗಳನ್ನು ಉತ್ಪಾದಿಸುವ ಯೋಚನೆಯನ್ನು ಹೊಂದಿದ್ದಾರೆ.

Also read: ಆಟೋ ಡ್ರೈವರ್ ಪುತ್ರ ಯುಪಿಎಸ್’ಸಿ ಟಾಪರ್ ಆದ ಕಥೆ ಕೇಳಿ, ಶ್ರಮಪಟ್ಟರೆ ಯಾರು ಬೇಕಾದರೂ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಅನ್ನೋದು ನಿಜ ಅಂತ ನಿಮಗೇ ಅನ್ಸುತ್ತೆ!!