ಕೇವಲ ಹಸು ಸಾಕಣೆ ಮಾಡಿ ಲಕ್ಷಾಂತರ ರೂಪಾಯಿ ದುಡಿದು BMW ಕಾರ್ ಖರೀದಿಸಿದ ಇವರು ಅನೇಕ ಯುವಕ ಯುವತಿಯರಿಗೆ ಮಾದರಿ!!

0
677

ದುಡಿಯುವ ಸಾಧನೆ ಮಾಡುವ ಮನಸ್ಸಿದ್ದರೆ ಏನೆಲ್ಲ ಮಾಡಬಹುದು ಅನ್ನೋದಕ್ಕೆ ಹಲವು ಉದಾಹರಣೆಗಳಿವೆ ಅವೆಲ್ಲವನ್ನು ಮೀರಿಸುವಂತ ಸಾಧನೆ ಮಾಡಿರುವ ವ್ಯಕ್ತಿಯೊಬ್ಬರು ಇಲ್ಲಿದ್ದಾರೆ ನೋಡಿ. ಹಿರಿಯೂರಿನ ರಾಘವೇಂದ್ರ ಎನ್ನುವರು ಬರಿ ಗೋ ಸಾಗಣಿಕೆ ಮಾಡಿ BMW ಕಾರು ಖರೀದಿಸಿದ್ದಾರೆ. ಇವರು ಮುಂದೊಂದು ದಿನ ಹಿರಿಯೂರಿನಿಂದ ಬೆಂಗಳೂರಿಗೆ ಸ್ವಂತ ಹೆಲಿಕಾಪ್ಟರ್‌ನಲ್ಲೇ ಓಡಾಡುವ ಹೆಬ್ಬಯಕೆಯನ್ನೂ ಹೊಂದಿದ್ದಾರೆ. ಅದು ಕೂಡ ದನಗಳನ್ನು ಸಾಕುವ ಮೂಲಕ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

@kannada.asianetnews.com

ಈ ಸಾಧನೆ ಬಗ್ಗೆ ರಾಘವೇಂದ್ರ ಹೇಳಿದ್ದು;

ನಾನು ಒಮ್ಮೆ ಬೆಂಗಳೂರಲ್ಲಿ ದೇಸಿ ಹಸು ಸಾಕಿದವರಲ್ಲಿ ಹಾಲು ಕೇಳಲು ಹೋದಾಗ, ಹಾಲು ನೀಡಲು ನೀರಾಕರಿಸಿದ್ದೇ ಮುಂದೊಂದು ದಿನ ನನಗೆ ಡೈರಿ ಫಾರ್ಮ್ ಆರಂಭಿಸಲು ಕಾರಣವಾಯಿತ್ತು. ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಬೆಂಗಳೂರಿನ ಮನೆಯಲ್ಲಿ ಒಂದು ಮಲೆನಾಡು ಗಿಡ್ಡ ಹಸುವನ್ನು ಬೆಂಗಳೂರಿನಲ್ಲಿ ಸಾಕಿದೆ ಇದರ ಲಾಭ ತಿಳಿದು ಇನ್ನಷ್ಟು ದೇಸಿ ಹಸುಗಳನ್ನು ಯಾಕೆ ಸಾಕಬಾರದು ಎಂದೆನಿಸಿ ಚಿತ್ರದುರ್ಗ, ದಾವಣಗೆರೆ ಕಡೆ ಸುತ್ತಾಡಿ ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಹಸುಗಳನ್ನು ಖರೀದಿಸಿ. ಹಿರಿಯೂರಿನಲ್ಲಿ ದಾಳಿಂಬೆ ಬೆಳೆಯಲೆಂದು ಖರೀದಿಸಿದ್ದ ನಾಲ್ಕೂವರೆ ಎಕ್ರೆ ಜಾಗ ಗೋಸಾಕಣೆಗೆ ಪ್ರಯೋಜನವಾಯಿತು.

ಮೊದಲು ಗೋಸಾಕಣೆ ಬಗ್ಗೆ ಆರಂಭದಲ್ಲಿ ನನಗೆ ಅಷ್ಟೇನೂ ಮಾಹಿತಿ ಇರಲಿಲ್ಲ. ಭಾರತೀಯ ಗೋತಳಿ ನಶಿಸುತ್ತಿದೆ ಎಂಬುದು ಮಾತ್ರ ನನಗೆ ತಿಳಿದಿತ್ತು. ಅದಕ್ಕಾಗಿಯೇ ಸ್ವರ್ಣಭೂಮಿ ಗೋಶಾಲೆ ಆರಂಭಿಸಿದೆ. 3- 4 ವರ್ಷಗಳಲ್ಲಿ 300 ಹಸುಗಳಿವೆ. ಮಲೆನಾಡು ಗಿಡ್ಡ, ದೇವಣಿ, ಹಳ್ಳಿಕಾರ್‌ ಹಾಗೂ ಅಮೃತ ಮಹಲ್‌ ತಳಿಯ ಹಸುಗಳೇ ಗೋಶಾಲೆಯನ್ನು ತುಂಬಿವೆ. ಮುಂದೆ 1000 ಹಸುಗಳನ್ನು ಸಾಕುವ ಉದ್ದೇಶ ಹೊಂದಿದ್ದೇನೆ. ಎಂದು ಹೇಳಿದ ಇವರು ಇದರಿಂದ ಬರುವ ಆದಾಯದ ಬಗ್ಗೆ ತಿಳಿಸಿದ್ದಾರೆ.

ಸಗಣಿ, ಗೋಮೂತ್ರ ಆದಾಯ!:

‘ಗೋರಾಘವೇಂದ್ರ’ ಫಾರ್ಮಲ್ಲಿ 300 ಹಸುಗಳಿವೆಯಾದರೂ ಕೆಲವು ಕರುಗಳು, ಕೆಲವು ವಯಸ್ಸಾದವು, ಇನ್ನು ಕೆಲವು ಹೋರಿಗಳಿವೆ ಉಳಿದ ಆಕಳುಗಳಿಂದ ಫಾರ್ಮಲ್ಲಿ ಕೇವಲ 60 ರಿಂದ 70 ಲೀಟರ್‌ (ಎ2) ಹಾಲಿನ ಉತ್ಪಾದನೆಯಾಗುತ್ತಿದೆ. ಗೋಶಾಲೆಯ ಉಪ ಉತ್ಪನ್ನಗಳಿಂದಲೇ ಹೆಚ್ಚು ಹಣ ಬರುತ್ತಿದೆ. ಇದರಿಂದ ಹತ್ತು ಹಲವು ಉತ್ಪನ್ನ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಗಣಿ, ಬೆರಣಿ, ವಿಭೂತಿ, ದಂತಮಂಜನ್‌, ಗೋಅರ್ಕಗಳ ಮಾರಾಟದಿಂದಲೇ ಉತ್ತಮ ಲಾಭ ಕಂಡುಕೊಂಡಿದ್ದಾರೆ.

ಕೌಡಂಗ್‌ ಕೇಕ್‌ಗೆ ಉತ್ತಮ ಆದಾಯ;

ಇವರು ತಯಾರಿಸುವ ಕೌಡಂಗ್‌ ಕೇಕ್‌ಗೆ ಉತ್ತಮ ಬೇಡಿಕೆ ಇದೆ. ಕೃಷಿಮೇಳ ಸೇರಿದಂತೆ ಹೋದಲ್ಲೆಲ್ಲ ಬೆರಣಿಯ ಹಿರಿಮೆಯನ್ನು ವಿವರಿಸುತ್ತಾ ಹೋಗುತ್ತಿದ್ದಾರೆ. ದೇಸಿ ಹಸುವಿನ ಹಾಲು, ತುಪ್ಪ, ಗೋಮೂತ್ರ, ಗೋಅರ್ಕಗಳ, ಪಂಚಗವ್ಯಗಳ ಬಳಕೆಯಿಂದಾಗುವ ಪ್ರಯೋಜನ ವಿವರಿಸುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ. ರಾಜ್ಯದ ವಿವಿಧೆಡೆ ಕರೆದಲ್ಲೆಲ್ಲ ತೆರಳಿ ಗೋವು ಹಾಗೂ ಗೋಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಐದು ದೊಡ್ಡ ಗಾತ್ರದ ಬೆರಣಿಯ ಪ್ಯಾಕ್‌ 40 ರುಪಾಯಿಗೆ ಮಾರಾಟವಾಗುತ್ತಿದೆ. ಹಸಿ ಸಗಣಿಯನ್ನೂ ಮಾರಾಟ ಮಾಡುತ್ತಿದ್ದಾರೆ. ಮುಂದೆ ಉತ್ಪನ್ನಗಳನ್ನು ಆನ್‌ಲೈನ್‌ ಮಾರುಕಟ್ಟೆಗೆ ಬಿಡಲು ಉದ್ದೇಶವನ್ನು ಹೊಂದಿದ್ದಾರೆ.

ಗೋಸಾಕಣೆ ಬಗ್ಗೆ ತರಬೇತಿ ಶಾಲೆ;

ನಾಯಿಗಳ ರಕ್ಷಣೆಗೆ ದೇಶದಲ್ಲಿ ಸಾವಿರಕ್ಕೂ ಅಧಿಕ ಎನ್‌ಜಿಓಗಳಿವೆ. ಮಾನವನಿಗೆ ಹಾಲು, ಮೊಸರು, ತುಪ್ಪ ನೀಡುವ ಗೋವುಗಳನ್ನು ಸಾಕಲು ಯಾವುದೇ ಎನ್‌ಜಿಓಗಳು ಮುಂದೆ ಬರುತ್ತಿಲ್ಲ. ಸರ್ಕಾರ ಕೋಟ್ಯಂತರ ಹಣವನ್ನು ವ್ಯಯಿಸುತ್ತಿದೆ. ಆದರೆ ಗೋಶಾಲೆಗಳಿಗೆ ಬರುತ್ತಿದ್ದ ಅನುದಾನವನ್ನು ನಿಲ್ಲಿಸಿ ಬಿಟ್ಟಿದೆ. ಏಕೆಂದರೆ ಗೋಸಾಕಣೆ ಬಗ್ಗೆ ರಾಜ್ಯದಲ್ಲಿ ಯಾವುದೇ ಅಧಿಕೃತ ತರಬೇತಿ ಸಂಸ್ಥೆಯಿಲ್ಲ. ಈ ಉದ್ದೇಶದಿಂದ ಕಳೆದ ತಿಂಗಳು ಹಿರಿಯೂರಿನ ಗೋಶಾಲೆಯಲ್ಲಿ 30 ಜನರಿಗೆ ಪ್ರಶಿಕ್ಷಣ ನೀಡಲಾಗಿದೆ. ಮುಂದೆ ಸರ್ಟಿಫಿಕೇಟ್‌ ಕೋರ್ಸ್‌ ಆರಂಭಿಸುವ ಯೋಜನೆಯನ್ನು ಹೊಂದಿದ್ದಾರಂತೆ.

Also read: ನಿಜಕ್ಕೂ ಗೋಮೂತ್ರದಿಂದ ಇಷ್ಟೇಲ್ಲಾ ಖಾಯಿಲೆಗಳು ವಾಸಿಯಾಗುತ್ತಾ? ಇಲ್ಲಿದೆ ನೋಡಿ ಸತ್ಯ!!