ಅಂಗವೈಕಲ್ಯವನ್ನೂ ಮೀರಿ ನಿಲ್ಲುವ ಸಾಮರ್ಥ ಹೊಂದಿರುವ ಒಬ್ಬ ಹುಡುಗಿಯ ಮನಮಿಡಿಯುವ ಕಥೆ!

0
877

ಸುಚರಿತ ತ್ಯಾಗಿ ಜನಪ್ರಿಯ ಮುಂಬೈ ಆಧಾರಿತ ರೇಡಿಯೊ ಜಾಕಿ. ಇತ್ತೀಚೆಗಷ್ಟೇ ಅವರು ತಮ್ಮ್ ಟ್ವಿಟ್ಟರ್ ನಲ್ಲಿ ಬೆಳಕನ್ನೇ ನೋಡದ ಹುಡುಗಿಯ ಮನಮಿಡಿಯುವ ಕಥೆಯೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ನೀವು ಇದನ್ನ ಓದಿದ ನಂತರ ಸಾಧನೆ ಮಾಡುವ ಮನಸ್ಸಿದ್ದರೆ ಛಲವಿದ್ದರೆ ಯಾವುದೂ ಕಷ್ಟಸಾಧ್ಯವಲ್ಲ ಎನ್ನುವ ಮಾತನ್ನು ನಂಬುತ್ತೀರಾ.

ನಿಕಿತಾ ಶುಕ್ಲಾ ರೇಡಿಯೋಸಿಟಿ ಇಂಡಿಯಾ ಎಫ್ಎಂ ನ ಕಾಂಟೆಸ್ಟ್ ಒಂದರಲ್ಲಿ ಲಕ್ಕಿ ವಿನ್ನರ್ ಆಗಿದ್ದಳು. ಬುಹುಮಾನ ತೆಗೆದುಕೊಂಡು ಹೋಗಲು ಸ್ಟುಡಿಯೋಗೆ ಬಂದಾಗ ಆರ್’ಜೆ ಸಚರಿತಾ ತ್ಯಾಗಿ ಇವರ ಜೊತೆ ಒಂದು ಲೈವ್ ಶೋ ಮಾಡಿದ್ದಾರೆ. ಅದರಲ್ಲಿ ನಿಕಿತಾ ತನ್ನ ಮನಮಿಡಿಯುವ ಕಥೆಯನ್ನು ಬಿಚ್ಚಿಟ್ಟಿದ್ದಾಳೆ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸುತ್ತಾಳೆ. ಅಂಗವೈಕಲ್ಯವನ್ನೂ ಮೀರಿ ನಿಲ್ಲುವ ಸಾಮರ್ಥ ಅವಳಿಗಿದೆ. ಸಾಧನೆ ಮಾಡುವ ಮನಸ್ಸಿದ್ದರೆ ಛಲವಿದ್ದರೆ ಯಾವುದೂ ಕೆಲಸ ಅಸಾಧ್ಯ ಎನ್ನುವುದಕ್ಕೆ ಉದಾಹರಣೆಯಾಗಿದ್ದಾರೆ ನಿಕಿತಾ ಶುಕ್ಲಾ ಎನ್ನುವ ಈ ಹುಡುಗಿ.

ಇವರು ಹುಟ್ಟಿನಿಂದ ಅಂಧೆ. ಇವರ ಹೈಸ್ಕೂಲು ಶಿಕ್ಷಣ ಮುಗಿದ ಕೂಡಲೇ ಪೋಷಕರು ಮುಂದಿನ ವಿದ್ಯಾಭ್ಯಾಸಕ್ಕೆ ಕಳುಹಿಸಲು ಒಪ್ಪಲಿಲ್ಲ. ಮದುವೆ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದರು. ಆದರೆ ನಿಕಿತಾಗೆ ಓದುವ ಹಂಬಲ. ಓದು ಮುಂದುವರೆಸಲು ನಿರ್ಧರಿಸಿ ಯಾವುದೇ ಪ್ಲಾನ್ ಇಲ್ಲದೇ ಮನೆ ಬಿಡಲು ನಿರ್ಧರಿಸಿದಳು. ಹಾಗಾಗಿ ಮಥುರಾಗೆ ಹೋಗಲು ಟಿಕೆಟ್ ತೆಗೆದುಕೊಂಡಳು. ಸ್ನೇಹಿತರ ಬಳಿ, ಕಾಲೇಜು ಪ್ರೋಫೆಸರ್ ಬಳಿ ಹಣವನ್ನು ತೆಗೆದುಕೊಂಡು, ಸಣ್ಣಪುಟ್ಟ ಸ್ಕಾಲರ್’ಶಿಪ್ ಪಡೆದು ಕಾಲೇಜು ಫೀ ಕಟ್ಟಿದಳು. ಫೀಗೆ ಹಣ ಕಟ್ಟದರೆ ಮೂರೊತ್ತು ಊಟಕ್ಕೆ ಹಣ ಸಾಕಾಗುತ್ತಿರಲಿಲ್ಲ. ಹಾಗಾಗಿ 3 ವರ್ಷ ರಾತ್ರಿ ಮಾತ್ರ ಊಟ ಮಾಡುತ್ತಿದ್ದಳು. ಹಾಸ್ಟೆಲ್’ನಲ್ಲಿ ತಿಂಗಳಿಗೆ 20 ಊಟಗಳನ್ನು ಉಚಿತವಾಗಿ ನೀಡುತ್ತಿದ್ದರು. ಅದರಲ್ಲೇ ತೃಪ್ತಿಯಾಗುತ್ತಿದ್ದಳು. ಊಟಕ್ಕೆ ಬಡತನವಿದ್ದರೂ ಓದುವುದಕ್ಕೆ ಬಡತನವಿರಲಿಲ್ಲ. ಪರೀಕ್ಷೆಗಳಲ್ಲಿ ಶೇ.80 ರಷ್ಟು ಅಂಕಗಳನ್ನು ತೆಗೆದು ಪ್ರಥಮ ದರ್ಜೆಯಲ್ಲಿ ಪಾಸಾದಳು. ಪ್ರಸ್ತುತ ನಿಕಿತಾ ಶುಕ್ಲಾ ಜಿಎಲ್’ಸಿ ಕಾಲೇಜಿನಲ್ಲಿ 3 ನೇ ವರ್ಷದ ಕಾನೂನು ಪದವಿಯನ್ನು ಕಲಿಯುತ್ತಿದ್ದಾಳೆ. ಮುಂಬೈನ ಹಾಸ್ಟೆಲ್’ವೊಂದರಲ್ಲಿ ವಾಸವಾಗಿದ್ದಾರೆ.

ರೇಡಿಯೋಸಿಟಿ ಯಲ್ಲಿ ಇದನ್ನು ಕೇಳಿದ ಸಾಕಷ್ಟು ಕೇಳುಗರು ಆಕೆಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಕೇಳುಗರು ರೇಡಿಯೋಸಿಟಿಗೆ ಕಳುಹಿಸಿಕೊಟ್ಟ ಹಣವನ್ನು ಸಂಗ್ರಹಿಸಿ ಆರ್’ಜೆ ಸಚರಿತಾ ತ್ಯಾಗಿ ನಿಕಿತಾಗೆ ಚೆಕ್ ನೀಡಿದ್ದಾರೆ. ಮಾಧ್ಯಮಗಳು ಎಷ್ಟು ಪವರ್’ಫುಲ್ ಎನ್ನುವುದಕ್ಕೆ ಇದು ಉದಾಹರಣೆಯಲ್ಲವೇ? ಆಕೆಯ ಲಾಯರ್ ಆಗುವ ಕನಸು ನನಸಾಗಲು ಸಹಾಯ ಮಾಡಿ. ಕಷ್ಟಗಳ ನಡುವೆ ಸಾಧನೆ ಮಾಡಲು ಹೊರಟಿರುವ ನಿಕಿತಾ ತ್ಯಾಗಿಗೆ ನಮ್ಮದೊಂದು ದೊಡ್ಡ ನಮಸ್ಕಾರ! ಜೀವನದಲ್ಲಿ ಯೆಶಸ್ಸು ಅವರದಾಗಲಿ ಎಂದು newsism ತಂಡ ಹಾರೈಸುತ್ತದೆ. ಆಕೆಯ ಓದಿಗೆ ಇನ್ನಷ್ಟು ಹಣದ ಅಗತ್ಯವಿದ್ದು ಈ ಪೋಸ್ಟನ್ನು ಸಾಧ್ಯವಾದಷ್ಟು ಶೇರ್ ಮಾಡಿ.