ಸು’ದೀಪ’-ರವರ ಈ ಹಠಮಾರಿ ಗುಣದಿಂದ ತೆಗೆದುಕೊಂಡ ಸಾವಿರಾರು ಕುಟುಂಬಗಳ ಮನೆ ದೀಪ ಬೆಳಗಿದೆ..

0
5348

ಬಹುಭಾಷಾ ನಟ, ಕಿಚ್ಚ ಸುದೀಪ್ ಕೇವಲ ನಟನೆಯಷ್ಟೆ ಅಲ್ಲ ಸಾಮಾಜಿಕ ಕಾರ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಷ್ಟಕ್ಕೂ ಸಾಮಾಜಕ್ಕೆ ನಟ ಕಿಚ್ಚ ಸುದೀಪ್ ನೀಡಿರುವ ಗಿಫ್ಟ್ ಏನು ಎಂಬುದನ್ನು ನೀವೆ ನೋಡಿ. ಅಭಿನಯ ಚಕ್ರವರ್ತಿ ಕಿಂಗ್ ಮೇಕರ್ ಎಂದು ಹೆಸರುವಾಸಿಯಾದ ಕಿಚ್ಚ ಸುದೀಪ್. ಕೋಟಿ ಕೋಟಿ ಮನಸುಗಳನ್ನ ತನ್ನ ನಡತೆಯ ಮೂಲಕ ಗೆದಿದ್ದಾರೆ. ಬಿಗ್ ಬಾಸ್ ಷೋನಲ್ಲಿ ಸುದೀಪ್ ಸ್ಟೇಜ್ ಮೇಲೆ ನಿಂತು ಮಾತನಾಡಲು ಶುರು ಮಾಡಿದ್ರೆ ಎಲ್ಲ ಸೈಲೆಂಟ್. ಅಷ್ಟೇ ಯಾಕೆ ಕನ್ನಡದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಬರಲು ಕಾರಣ ಇದೆ ಸುದೀಪ್. ಅದರಲ್ಲೂ ಈ ಶೋ ಬೆಂಗಳೂರಿನಲ್ಲಿ ನಡೆಯಲು ಕಾರಣ ಸುದೀಪ್ ಅವರಂತೆ.

ಹೌದು, ಮೊದಲ ಬಾರಿಗೆ ಕನ್ನಡದ ಬಿಗ್‌ಬಾಸ್‌ ರಿಯಾಲಿಟಿ ಶೋ ನೆಡೆಸಬೇಕು ಅಂತ ಬಂದಾಗ ಸುದೀಪ್ ಅವರು ಈ ಶೋ ನಮ್ಮ ಕರ್ನಾಟಕದಲ್ಲೇ ನಡೆಯಬೇಕು. ಇದರಿಂದ ನಮ್ಮ ಜನತೆಗೆ ಕೆಲಸ ಸಿಗುತ್ತದೆ. ಹಾಗಾಗಿ ಬಿಗ್ ಬಾಸ್ ಸೆಟ್ ಅನ್ನು ಬೆಂಗಳೂರಿನ ಇನ್ನೋವೆಟಿವ್‌ ಫಿಲ್ಮ್ ಸಿಟಿಯಲ್ಲಿ ಮಾಡಲಾಯಿತೆಂದು ಇನೋವೆಟಿವ್ ಫಿಲ್ಮ್ ಸಿಟಿಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆಗಿರುವ ಸರವಣ ಪ್ರಸಾದ್ ಕಳೆದ ವಾರ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಆಗಮಿಸಿದ್ದಾಗ ಸುದೀಪ್ ಅವರ ಈ ಕಾರ್ಯದ ಬಗ್ಗೆ ತಿಳಿಸಿದರು.

ಕಳೆದ 5 ಸೀಸನ್ ನಿಂದ ಬಿಗ್ ಬಾಸ್ ನಿರೂಪಣೆ ಮಾಡುತ್ತ ಬಂದಿರುವ ಸುದೀಪ್. ಇತರೆ ಭಾಷೆಯ ಬಿಗ್ ಬಾಸ್ ಗಿಂತಲೂ ಕನ್ನಡ ಬಿಗ್ ಬಾಸ್ ಚೆನ್ನಾಗಿ ಮೂಡಿಬರುತ್ತಿದೆ. ಪರಿಣಾಮ ಇಲ್ಲಿಯ 1500 ಜನರಿಗೆ ಕೆಲಸ ಸಿಕ್ಕಿದೆಯಂತೆ. ಇಂದು ಇಷ್ಟು ಜನರು ನೆಮ್ಮದಿಯಿಂದ ಊಟ ಮಾಡಲು ಕಾರಣ ಸುದೀಪ್ ಅವರೇ. ಅಷ್ಟೇ ಯಾಕೆ ರಾಮನಗರದ ತರಕಾರಿ ವ್ಯಾಪಾರಿಗಳಿಗೆ ಕೂಡ ಉತ್ತಮ ವ್ಯಾಪಾರವಾಗುತ್ತಿದೆ ಅಂತೇ. ಇದರ ಜೊತೆಗೆ ಇಂದು ಇನ್ನೋವೆಟಿವ್‌ ಸಿಟಿ ತುಂಬಾ ಪ್ರಸಿದ್ಧವಾಗುತ್ತಿದೆ ಎಂದು ತಿಳಿಸಿದರು.