ಕನ್ನಡದ ಕೆಚ್ಛೆದೆಯ ನಾಯಕ ಕಿಚ್ಚ ಸುದೀಪ್ ಹಾಲಿವುಡ್-ಗೆ ಲಗ್ಗೆ ಇಟ್ಟಿದ್ದಾರೆ, ಕನ್ನಡದ ಒಬ್ಬ ನಾಯಕ ಇದೆ ಮೊದಲು ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿರುವುದು!!

0
993

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಲಿವುಡ್ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹಳೆಯದು. ಆದ್ರೆ ಈಗ ಬಂದ ಸುದ್ದಿ ಅಂದ್ರೆ ಹಾಲಿವುಡ್ ಚಿತ್ತ ತಂಡ ಕಿಚ್ಚನ ನೋಡಲು ಬೆಂಗಳೂರಿಗೆ ಬಂದಿತ್ತು. ಅಲ್ಲದೆ ಸುದೀಪ್ ಭೇಟಿ ಮಾಡಿದ, ಹಾಲಿವುಡ್ ಚಿತ್ರ ತಂಡ ಫೋಟೋ ಶೂಟ್ ಸಹ ಮುಗಿಸಿದೆ.

ಇನ್ನು ಹಾಲಿವುಡ್ ಚಿತ್ರ ತಂಡ ಸಿಲಿಕಾನ್ ಸಿಟಿಗೆ ಬರುತ್ತಿರುವುದಾಗಿ ಸ್ವತಃ ಕಿಚ್ಚ ಸುದೀಪ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಕಿಚ್ಚ ಸುದೀಪ್ ಹಾಗೂ ಸಿನಿಮಾ ಹಾಗೂ ಬಿಗ್‌ಬಾಸ್‌ನಲ್ಲಿ ಬ್ಯೂಸಿ ಆಗಿದ್ದಾರೆ. ಹೀಗಾಗಿ ಫೋಟೋ ಶೂಟ್‌ನಲ್ಲಿ ಭಾಗವಹಿಸುವುದು ಕಷ್ಟವಾಗಿತ್ತು. ಹೀಗಾಗಿ ರೈಸನ್ ಚಿತ್ರ ತಂಡ ಕಥೆ ಹೇಳೋಕೆ, ಬೆಂಗಳೂರಿಗೆ ಬಂದಿದ್ದತು.

ಇನ್ನು ಬಹುಭಾಷಾ ನಟ ಸುದೀಪ್ ಇದೇ ಮೊದಲ ಬಾರಿಗೆ ಹಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸ ಬೇಕಿದ್ದ ತಂಡ ಕಾರಣಾಂತರಗಳಿಂದ ನಡೆಸದೆ, ಕಿಚ್ಚನನ್ನು ಭೇಟಿಯಾಗಿ ಕಥೆಯನ್ನು ಹೇಳಿದೆ. ಅಲ್ಲದೆ ಕಿಚ್ಚ ಸುದೀಪ್ ಮನೆಯಲ್ಲಿ ಚಿತ್ರ ತಂಡಕ್ಕಾಗಿ ವಿಶೇಷ ಬಾಡೂಟ ವ್ಯವಸ್ಥೆಯನ್ನು ಮಾಡಲಾಗಿತ್ತು.

ಇನ್ನು ಸುದೀಪ್ ಅಭಿನಯಿಸುತ್ತಿರುವ ರೈಸನ್ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಆದ್ರೆ ಕಿಚ್ಚ ಕನ್ನಡ ರಿಯಾಲಿಟಿಶೋ ಹಾಗೂ ಸಿನಿಮಾ ಎಂದು ಬ್ಯೂಸಿ ಇರೋದ್ರಿಂದ ಭಾಗವಹಿಸಲು ಆಗೋದಿಲ್ಲ. ಇನ್ನು ರೈಸನ್ ತಂಡ ಸುದೀಪ್ ಪಾತ್ರದ ಫೋಟೋ ಶೂಟ್ ಬೆಂಗಳೂರಿನಲ್ಲೇ ನಡೆಸಿದ್ದು, ಮತ್ತೆ ಆಸ್ಟ್ರೇಲಿಯಾಕ್ಕೆ ವಾಪಸ್ ಆಗಿದೆ. ಒಂದು ಮೂಲದ ಪ್ರಕಾರ ರೈಸನ್‌ನಲ್ಲಿ ಸುದೀಪ್ ಕಮಾಂಡೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಕಥೆ ಭಾರತಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಸುದೀಪ್ ಆಯ್ಕೆ ಮಾಡಲಾಗಿದೆ. ಇನ್ನು ಸುದೀಪ್ ಹೆಬ್ಬುಲಿ ಚಿತ್ರದಲ್ಲಿ ಕಮಾಂಡೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ರೈಸನ್ ಚಿತ್ರದಲ್ಲಿ ಸುದೀಪ್ ಹೇಗೆ ಕಾಣ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.