ಸುದೀಪ್ ಬಿಗ್ ಬಾಸ್ ಮನೆಗೆ ಎಂಟ್ರಿಗೆ ಹುಚ್ಚೆದ್ದು ಕುಣಿದ ಸ್ಪರ್ಧಿಗಳು!

0
386

ಬಿಗ್‌ಬಾಸ್‌ನ 5ನೇ ಸೀಸನ್‌ 13 ನೇ ವಾರ ಪೂರೈಸಿ 14 ನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳಿಗೆ ಸರ್‌ಪ್ರೈಸ್‌ ಕೊಡೋಕಂತ್ಲೇ ಬಿಗ್‌ಬಾಸ್‌ ಮನೆಗೆ ಕಿಚ್ಚ ಸುದೀಪ್‌ ಎಂಟ್ರಿಕೊಟ್ಟಿದ್ದರು.

ಕಿಚ್ಚ ಸುದೀಪ್ ಕಳೆದ ವಾರ ಬಿಗ್ ಬಾಸ್ ಮನೆಗೆ ಮುಖ ಮುಚ್ಚಿಕೊಂಡು ಬಂದು ಅಡುಗೆ ಮಾಡಿ ಹೋಗಿದ್ದಕ್ಕೆ ಸ್ಪರ್ಧಿಗಳು ಭಾರೀ ಬೇಜಾರುಾಗಿದ್ದರು. ಆ ನಿರಾಸೆಯನ್ನು ಮರೆಮಾಚಲು ಮತ್ತೆ ಬಂದರು. ಕನ್ನಡದ ಮೊದಲಿಗೆ ರಾಜು ಕನ್ನಡ ಮಿಡಿಯಂ ಚಿತ್ರದ ನಟ ಹಾಗೂ ನಟಿಯನ್ನು ಬಿಗ್‌ಬಾಸ್ ಮನೆಯೊಳಗೆ ಕಳುಹಿಸಿದ್ರು. ಬಳಿಕ ತಾವು ಪ್ರವೇಶಿಸಿದ್ರು. ಸೀದಾ ಅಡುಗೆ ಮನೆಯೊಳಗೆ ಹೆಬ್ಬುಲಿ ಹಾಡಿನ ಸಮೇತ ಬಂದು ಕೂತಿದ್ದರು. ಸ್ಪರ್ಧಿಗಳು ಹುಚ್ಚೆದ್ದು ಕುಣಿದು ಬಂದು ಸುದೀಪ್ ರನ್ನು ತಬ್ಬಿಕೊಂಡರು.

ಸದಸ್ಯರ ಜತೆ ಪ್ರೀತಿಯಿಂದ ಮಾತನಾಡಿದ ಸುದೀಪ್‌, ಎಲ್ಲರ ಯೋಗಕ್ಷೇಮ ವಿಚಾರಿಸಿದ್ರು. ಹಾಗೇ ಸ್ಪರ್ಧಿಗಳ ಕಾಲು ಎಳೆದ್ರು. ಇನ್ನು ಈ ವೇಳೆ ಎಲ್ಲರ ಗಮನ ಸೆಳೆದಿದ್ದು ಸುದೀಪ್ ಅವರ ಸರಳತೆ. ಸುದೀಪ್‌ ಮನೆಗೆ ಬಂದಾಗ 10 ಗಂಟೆ ಕಳೆದಿತ್ತು. ಸುದೀಪ್‌ಗೆ ಊಟಕ್ಕೆ ನೀಡುವ ಮುನ್ನ ಅಡುಗೆ ಬಿಸಿ ಮಾಡಲು ಮನೆಯ ಸದಸ್ಯರು ಮುಂದಾದಾಗ ಸುದೀಪ್ ಬಿಸಿ ಮಾಡುವುದು ಬೇಡ. ತಣ್ಣಗಿದ್ರು ಪರವಾಗಿಲ್ಲ ಅದನ್ನೇ ತಿನ್ನೋಣ ಬನ್ನಿ ಎಂದು ಎಲ್ಲರ ಜತೆ ಊಟ ಮಾಡಿದ್ರು. ಊಟದ ವೇಳೆ ಎಲ್ಲರ ಜತೆ ಬೆರೆತು ಮಾತನಾಡಿಸಿದ್ರು. ಕಿಚ್ಚನ ಈ ಸರಳತೆ ಬಿಗ್‌ಬಾಸ್ ಮನೆಯ ಸದಸ್ಯರನ್ನು ಮೂಕವಿಸ್ಮಿತರನ್ನಾಗಿ ಮಾಡಿತು.