ಜಿಡಿಎಸ್ ನಿಂದ ಕಣಕ್ಕಿಳಿಯಲ್ಲ ಎಂದ ಅಭಿನಯ ಚಕ್ರವರ್ತಿ..! ಸುದೀಪ್ ಮುಂದಿನ ನಡೆಯೇನು..?

0
524

ಕುಮಾರಸ್ವಾಮಿಯವರು ತಮ್ಮ ಜನ್ಮದಿನದಂದು ಅಭಿನಯ ಚಕ್ರವರ್ತಿ ಎಂದೇ ಖ್ಯಾತಿ ಹೊಂದಿರುವ ನಟ ಕಿಚ್ಚ ಸುದೀಪ್ ಅವರ ಮನೆಗೆ ಭೇಟಿ ನೀಡಿ ಕುಮಾರಸ್ವಾಮಿಯವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು, ನಂತರ ಅವರನ್ನು ತಮ್ಮ ನಿವಾಸಕ್ಕೆ ಬರುವಂತೆ ಆಹ್ವಾನ ನೀಡಿದರು, ಸುದೀಪ್ ಅವರ ಮಾತಿಗೆ ಇಲ್ಲ ಎನ್ನೆದೆ ಕುಮಾರಸ್ವಾಮಿಯವರು ಕೂಡ ಅವರ ಮನೆಗೆ ಭೇಟಿ ನೀಡಿದ್ದರು.

ಈ ಭೇಟಿ ವೇಳೆ ರಾಜ್ಯ ರಾಜಕಾರಣ, ಸ್ಥಿತಿಗತಿಗಳ ಕುರಿತು ಸುದೀಪ್ ಜೊತೆ ಮಾತುಕತೆ ಕುಮಾರಸ್ವಾಮಿ, ಸುದೀಪ್-ಗೆ ರಾಜಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ಇದೆ ಎಂಬುದನ್ನು ಅರಿತರು. ಇದೆ ಕಾರಣಕ್ಕೆ ಜೆಡಿಎಸ್ ಪಕ್ಷದ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಿಸಿ, ಎಂದು ಕುಮಾರಸ್ವಾಮಿ ಆಹ್ವಾನ ನೀಡಿದ್ದರು.

ಸುದೀಪ್ ಜೆಡಿಎಸ್ ಪಕ್ಷಕ್ಕೆ ಸೇರುತ್ತಾರೆ ಅಥವಾ ಇನ್ನೊಂದು ಯಾವುದಾದರು ಪಕ್ಷದಿಂದ ಸ್ಪರ್ದಿಸುತ್ತಾರೆ ಎಂಬ ಊಹಾ-ಪೂಹಗಳು ಎಲ್ಲೆಡೆ ಹರಿದಾಡುತ್ತಿದ್ದವು. ಆದರೆ ಇವೆಲ್ಲದಕ್ಕೆ ತೆರೆ ಎಳೆದಿರುವ ಕಿಚ್ಚ, ಯಾವುದೇ ಪಕ್ಷದಿಂದ ಸ್ಪರ್ದಿಸುವುದಿಲ್ಲ, ಜೆಡಿಎಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಸ್ಪರ್ಧಿಸದಿದ್ದರು ಪರವಾಗಿಲ್ಲ ನಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿ ಸಾಕು ಎಂದಿದ್ದಾರಂತೆ ಕುಮಾರಸ್ವಾಮಿ. ಇನ್ನು ನಾಯಕ ಸಮುದಾಯದ ಮತಗಳನ್ನು ಸೆಳೆಯಲು ಸುದೀಪ್ ಅವರನ್ನು ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿಯ ಸುತ್ತಮುತ್ತ ಭಾಗಗಳಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.