ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ JD(S) ಮೂಲಕ ರಾಜಕೀಯ ಪ್ರವೇಶ ಮಾಡುತ್ತಾರ? ನಿಮಗೆ ಏನು ಅನ್ನಿಸುತ್ತದೆ?

0
469

ಇತ್ತೀಚಿಗೆ ನಡೆದ ಮಾಜಿ ಮುಖ್ಯಮಂತ್ರಿ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿಯವರ ಜನ್ಮದಿನವನ್ನು ರಾಜ್ಯದೆಲ್ಲೆಡೆ ಅವರ ಅಭಿಮಾನಿಗಳು ಅತ್ಯಂತ ಸಂಭ್ರಮದಿಂದ ಆಚರಿಸಿದರು, ಜನರಿಗೆ ಅಚ್ಚರಿ ಮೂಡಿಸಲು ಕುಮಾರಸ್ವಾಮಿಯವರು ಕೂಡ “ಕುಮಾರಸ್ವಾಮಿ ಬಾಂಡ್” ಎಂಬ ಯೋಜನೆಯನ್ನು ನೀಡಿದ್ದರು, ಇದರ ಜೊತೆ-ಜೊತೆಗೆ ಇನ್ನೊಂದು ವಿಷಯ ಕೂಡ ನಡೆದಿತ್ತು ಅದು ರಾಜ್ಯ ರಾಜಕೀಯದಲ್ಲಿಯೇ ಕುತೂಹಲ ಮೂಡಿಸಿರುವ ವಿಷಯ, ಯಾವುದು ಅಂತ ನೀವೆ ನೋಡಿ.

ಕುಮಾರಸ್ವಾಮಿಯವರು ತಮ್ಮ ಜನ್ಮದಿನದಂದು ಅಭಿನಯ ಚಕ್ರವರ್ತಿ ಎಂದೇ ಖ್ಯಾತಿ ಹೊಂದಿರುವ ನಟ ಕಿಚ್ಚ ಸುದೀಪ್ ಅವರ ಮನೆಗೆ ಭೇಟಿ ನೀಡಿ ಕುಮಾರಸ್ವಾಮಿಯವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು, ನಂತರ ಅವರನ್ನು ತಮ್ಮ ನಿವಾಸಕ್ಕೆ ಬರುವಂತೆ ಆಹ್ವಾನ ನೀಡಿದರು, ಸುದೀಪ್ ಅವರ ಮಾತಿಗೆ ಇಲ್ಲ ಎನ್ನೆದೆ ಕುಮಾರಸ್ವಾಮಿಯವರು ಕೂಡ ಅವರ ಮನೆಗೆ ಭೇಟಿ ನೀಡಿದ್ದರು.

ಮನೆಗೆ ಬಂದ ವಿಶೇಷ ಅತಿಥಿ ಕುಮಾರಸ್ವಾಮಿಯವರಿಗೆ ಸುದೀಪ್ ಅವರು ತಮ್ಮ ಕೈಯಾರೆ ಅಡುಗೆ ಮಾಡಿ ಉಣಬಡಿಸಿದ್ದರು. ಈ ಭೇಟಿ ವೇಳೆ ರಾಜ್ಯ ರಾಜಕಾರಣ, ಸ್ಥಿತಿಗತಿಗಳ ಕುರಿತು ಸುದೀಪ್ ಜೊತೆ ಮಾತುಕತೆ ಕುಮಾರಸ್ವಾಮಿ, ಸುದೀಪ್-ಗೆ ರಾಜಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ಇದೆ ಎಂಬುದನ್ನು ಅರಿತರು. ಇದೆ ಕಾರಣಕ್ಕೆ ಜೆಡಿಎಸ್ ಪಕ್ಷದ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಿಸಿ, ಎಂದು ಕುಮಾರಸ್ವಾಮಿ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಸುದೀಪ್ ತಂದೆಯವರು ಕೂಡ ಜನತಾ ಪರಿವಾರ ಮತ್ತು ಜೆಡಿಎಸ್ ಕಡೆ ನಿಕಟ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತ್ತು ಜೆಡಿಎಸ್ ಬಲವರ್ಧನೆಗೆ ಕಿಚ್ಚ ಸುದೀಪ್ ಅವರ ತಾರಾಬಲ ಸಾತ್-ನೀಡಲಿದೆ ಎಂಬ ಲೆಕ್ಕಾಚಾರದೊಂದಿಗೆ ಪಕ್ಷ ಸೇರುವಂತೆ ಕುಮಾರಸ್ವಾಮಿ ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ರಾಜಕೀಯ ಪ್ರವೇಶಕ್ಕೆ ಮತ್ತು ಕುಮಾರಸ್ವಾಮಿಯವರ ಈ ಆಹ್ವಾನಕ್ಕೆ ಸುದೀಪ್ ಅಧಿಕೃತವಾಗಿ ಇನ್ನು ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ, ಆದರೆ ಅವರ ನಿರ್ಧಾರ ಜೆಡಿಎಸ್ ಪಕ್ಷಕ್ಕೆ ಮಾತ್ರವಲ್ಲದೆ ರಾಜ್ಯರಾಜಕೀಯಕ್ಕೂ ಕುತೂಹಲವನ್ನು ಮೂಡಿಸಿದೆ. ಇನ್ನು ಉಪೇಂದ್ರ ಅಚ್ಚರಿ ಎಂಬ ರೀತಿಯಲ್ಲಿ ತಮ್ಮ ಸ್ವಂತ ರಾಜಕೀಯ ಪಕ್ಷ ಕಟ್ಟಿ ರಾಜಕೀಯ ಪ್ರವೇಶಿಸಿರುವುದನ್ನು ನೋಡಿದರೆ, ಸುದೀಪ್ ಕೂಡ ರಾಜಕೀಯ ಪ್ರವೇಶಿಸುವುದನ್ನು ತಳ್ಳಿಹಾಕುವ ಹಾಗಿಲ್ಲ.