ವಿಧಾನಸಭೆ ಚುನಾವಣೆಯ ಬಗ್ಗೆ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಏನು ಹೇಳಿದರು ಗೊತ್ತಾ?

0
359

ಕರ್ನಾಟಕ ವಿಧಾನ ಸಭೆ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪಕ್ಷಗಳಿಗೆ ಸ್ಟಾರ್ ಪ್ರಚಾರಕರನ್ನು ಕರೆ ತರಲು ಎಲ್ಲಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗಂತೂ ಖುದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಆಹ್ವಾನಿಸಿದರು. ಆದರೆ ಸುದೀಪ್ ಏನು ಹೇಳಿದ್ದಾರೆ ಗೊತ್ತಾ.

Sudeep

ಚುನಾವಣೆ ಹತ್ತಿರ ಬರುತ್ತಿರುವಾಗಲೇ ಜನರನ್ನು ತಮ್ಮ ಪಕ್ಷಗಳತ್ತ ಸೆಲಿಯಲು ಸಿನಿಮಾ ನಟರನ್ನು ಮತ್ತು ಜನಪ್ರಿಯ ವ್ಯಕ್ತಿಗಳನ್ನು ತಮ್ಮ ಪಕ್ಷದ ಪ್ರಚಾರಕ್ಕೆ ಬಳಸುವುದು ಮೊದಲಿನಿಂದಲೂ ನಡೆಯುತ್ತಿದೆ. ಆದರೆ, ಕಿಚ್ಚ ಸುದೀಪ್ ಅವರು ಈ ಬರಿ ಮತದಾರರಿಗೆ ಒಂದು ವಿಶೇಷ ಸೂಚನೆ ನೀಡಿದ್ದಾರೆ.

election

ಎಲ್ಲರು ತಪ್ಪದೆ ಮತದಾನ ಮಾಡಿ, ಮತದಾನ ಮಾಡಲು ಮತದಾರರ ಗುರುತಿನ ಚೀಟಿ ಮಾಡಿಸಿಕೊಳ್ಳಿ. 18 ವರ್ಷ ಆಗುತ್ತಿದ್ದಂತೆ ನೀವು ಮತದಾನ ಮಾಡಲು ಅರ್ಹರು. ಯಾರ ಬಳಿ ವೋಟರ್ ಐಡಿ ಕಾರ್ಡ್ ಇಲ್ಲವೋ, ಅವರ ಬೇಗ ವೋಟರ್ ಐಡಿ ಕಾರ್ಡ್ ಮಾಡಿಸಿಕೊಳ್ಳಿರಿ. ಮತದಾನದಿಂದ ದೇಶವನ್ನೇ ಬದಲಿಸಬಹುದು ಎಂದಿದ್ದಾರೆ.

ನೀವು ನೀಡುವ ಒಂದು ಮತದಿಂದ ಇಡೀ ದೇಶದ ಅಭಿವೃದ್ಧಿ ನಿರ್ಭರವಾಗಿರುತ್ತದೆ. ಒಬ್ಬ ಒಳ್ಳೆಯ ನಾಯಕನ ಆಯ್ಕೆ ಮಾಡಲು ಮತದಾನ ತುಂಬಾನೆ ಅವಶ್ಯಕ. ಕೇವಲ ತಾತ್ಕಾಲಿಕ ಲಾಭಕ್ಕಾಗಿ ಯೋಚಿಸದೆ, ಉತ್ತಮ ಸಮಾಜವನ್ನು ನಿರ್ಮಿಸುವಂತಹುದರ ಬಗ್ಗೆ ಯೋಚಿಸಿ ಎಂದಿದ್ದಾರೆ.

election

ಒಟ್ಟಿನಲ್ಲಿ ಚುನಾವಣೆಗೂ ಮುನ್ನ ಕಿಚ್ಚ ತಮ್ಮ ಅಭಿಮಾನಿಗಳಿಗೆ ಒಂದು ಉತ್ತಮ ಸಂದೇಶವನ್ನು ನೀಡಿದ್ದಾರೆ ಎನ್ನಬಹುದಲ್ಲವೇ…!!

 

Also Read :

ಜಿಡಿಎಸ್ ನಿಂದ ಕಣಕ್ಕಿಳಿಯಲ್ಲ ಎಂದ ಅಭಿನಯ ಚಕ್ರವರ್ತಿ..! ಸುದೀಪ್ ಮುಂದಿನ ನಡೆಯೇನು..?