ಅಭಿಮಾನಿಯ ಕೊನೆಯ ಆಸೆ ಈಡೇರಿಸಿ ನಿಜ ಜೀವನದಲ್ಲೂ ಹೀರೊ ಆದ ಕಿಚ್ಚ…

0
511

ನಟ-ನಟಿಯರು ಸಿನೆಮಾಗಳಲ್ಲಿ ಹೀರೋ ಹೀರೋಯಿನ್ ಗಳಾಗಿ ನಟಿಸುತ್ತಾರೆ. ಅವರ ನಟನೆಗೆ ಜನರು ಫಿದಾ ಆಗಿ ನಟರನ್ನೇ ಫಾಲೋ ಮಾಡೋಕೆ ಶುರು ಮಾಡುತ್ತಾರೆ. ರಿಯಲ್ ಲೈಫ್ ನಲ್ಲೂ ಹಿರೋ ಆಗಿ ಅದೇಷಲಟೋ ಜನರ ಮನ ಗೆದ್ದ ನಟ-ನಟಿಯರು ನಮ್ಮೊಂದಿಗಿದ್ದಾರೆ.

ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ತೆರೆ ಮೇಲೆ ಮಾತ್ರ ಹೀರೋ ಅಲ್ಲ. ತೆರೆ ಹಿಂದೆಯೂ ಹೀರೋ ಎಂಬುದನ್ನು ಕಿಚ್ಚ ಸುದೀಪ್ ಸಾಬೀತು ಮಾಡಿದ್ದಾರೆ.

ಸಾವಿನ ಅಂಚಿನಲ್ಲಿರುವ ಅಭಿಮಾನಿಯೊಬ್ಬರ ಕೊನೆ ಆಸೆಯನ್ನು ಸುದೀಪ್ ಈಡೇರಿಸಿದ್ದಾರೆ. ಕಿಚ್ಚನ ಅಭಿಮಾನಿ ವಿನುತಾ ಎಂಬಾಕೆ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದಾರೆ. ಈಗಾಗಲೇ ಕ್ಯಾನ್ಸರ್ ಉಲ್ಬಣಗೊಂಡು ನಾಲ್ಕನೆಯ ಹಂತ ತಲುಪಿದೆ. ವಿನುತಾ ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ ಎಂದು ವೈದ್ಯರು ತಿಳಿಸಿದ್ದಾರೆ.

ಸಾವಿನಂಚಿನಲ್ಲಿರುವ ವಿನುತಾ ಸುದೀಪ್ ಅವರ ದೊಡ್ಡ ಅಭಿಮಾನಿ. ವಿನುತಾ ಅವರ ಕೊನೆಯ ಆಸೆ ಏನು ಎಂದು ಕೇಳಿದಾಗ, ಒಮ್ಮೆ ತಮ್ಮ ಮೆಚ್ಚಿನ ನಟ ಸುದೀಪ್ ನನ್ನು ನೋಡಬೇಕು ಎಂದು ಹೇಳಿಕೊಂಡಿದ್ದಾರೆ.

ವಿನುತಾರ ಕೊನೆಯ ಆಸೆಯ ಬಗ್ಗೆ ಕಿಚ್ಚಾ ಸುದೀಪ್ ಸೇನಾ ಸಮಿತಿಯು (KSSS) ನಟ ಸುದೀಪ್ ಅವರಿಗೆ ಹೇಳಿತ್ತು. ವಿಷಯ ತಿಳಿದ ನಂತರ ಸುದೀಪ್ ವಿನುತಾ ಕೊನೆಯಾಸೆಯಂತೆ ಅವರನ್ನು ಭೇಟಿ ಮಾಡಿದ್ರು. ವಿನುತಾ ಅವರ ಜೊತೆ ಮಾತನಾಡುತ್ತಾ ಕೆಲ ಸಮಯ ಕಳೆದಿದ್ದಾರೆ.

ಹೀಗೆ ಬರಿ ತೆರೆ ಮೇಲಷ್ಟೇ ಅಲ್ಲ. ನಿಜ ಜೀವನದಲ್ಲೂ ಹೀರೋ ಆದ ಸುದೀಪ್, ಅಭಿಮಾನಿಗಳ ಮನ ಗೆದ್ದಿದ್ದಾರೆ.