ಈ ಆಹಾರ ಪದ್ದತಿಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಕ್ಕರೆ ಕಾಯಿಲೆ ನಿಮ್ಮ ಬಳಿ ಸುಳಿಯುವುದೇ ಇಲ್ಲ.!

0
1780

ಸದ್ದಿಲ್ಲದೆ ನಿಧಾನವಾಗಿ ಕೊಲ್ಲುವ ರೋಗವಾಗಿರುವ ಮಧುಮೇಹ. ಈ ಖಾಯಿಲೆ ಒಮ್ಮೆ ಬಂದರೆ ಜೀವನ ಪರ್ಯಂತ ಇರುವುದರಿಂದ ಇದರ ಬಗ್ಗೆ ಅರಿವು ಮೂಡಿಸಿಕೊಳ್ಳುವುದೇ ಉತ್ತಮ, ಹಾಗಾದರೆ ಇದನ್ನು ತಡೆಗಟ್ಟಲು ಸಾಧ್ಯ ವಿಲ್ಲವೇ? ಖಂಡಿತಾ ಸಾಧ್ಯವಿದೆ. ಅದರಲ್ಲೂ ಕೆಲವು ಆಹಾರ ಪದ್ದತಿಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಕ್ಕರೆ ಕಾಯಿಲೆ ನಿಮ್ಮ ಬಳಿ ಸುಳಿಯುವುದೇ ಇಲ್ಲ.

ಬನ್ನಿ ಹಾಗಾದರೆ ಯಾವ ಆಹಾರ ಸೇವಿಸಿದರೆ ಸಕ್ಕರೆ ಕಾಯಿಲೆ ನಿಮ್ಮ ಬಳಿ ಸುಳಿಯುವುದಿಲ್ಲ ಎಂದು ತಿಳಿಯೋಣ

ಹಾಗಲಕಾಯಿಯ ರಸ:

ಪ್ರತಿದಿನ ಒಂದು ಲೋಟ ಹಾಗಲಕಾಯಿಯ ರಸವನ್ನು ಕುಡಿದರೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯ ಅಂಶ ಮೂರೇ ದಿನದಲ್ಲಿ ಕಡಿಮೆ ಯಾಗುತ್ತದೆ

ಬೆಂಡೆಕಾಯಿ:

ಬೆಂಡೆಕಾಯಿ ಮಧುಮೇಹಿಗಳಿಗೆ ಮತ್ತೊಂದು ಉತ್ತಮ ತರಕಾರಿಯಾಗಿದೆ. ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ನುಗ್ಗೆಸೊಪ್ಪು:

ನುಗ್ಗೆಸೊಪ್ಪನ್ನು ದಂಟಿನಿಂದ ಬಿಡಿಬಿಡಿಯಾಗಿ ಬಿಡಿಸಿ ನೇರವಾಗಿ ಸಾಂಬಾರ್ ಅಥವಾ ದಾಲ್‌ಗಳಲ್ಲಿ ಇತರ ತರಕಾರಿಗಳೊಂದಿಗೆ ಸೇರಿಸಿ ಬೇಯಿಸಿ ತಿಂದರೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯ ಅಂಶ ಕಡಿಮೆ ಯಾಗುತ್ತದೆ.

ದಾಲ್ಚಿನ್ನಿ ಬಳಕೆ:

ಸಕ್ಕರೆಯ ಬದಲಿಗೆ ನಿಮ್ಮ ಆಹಾರದಲ್ಲಿ ದಾಲ್ಚಿನ್ನಿಯನ್ನು ಬಳಸಬಹುದಾಗಿದೆ. ದಾಲ್ಚಿನ್ನಿಯು ರಕ್ತದ ಸಕ್ಕರೆ ಮಟ್ಟವನ್ನು ಸ್ಥಿಮಿತದಲ್ಲಿರಿಸಲು ಸಹಾಯ ಮಾಡಲಿದ್ದು ಇದು ಸಕ್ಕರೆಯ ಬದಲಿಗೆ ಬಳಸಬಹುದಾದ ಉತ್ತಮ ಉತ್ಪನ್ನವಾಗಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.

ಸೀತಾಫಲ ಹಣ್ಣು ದಿನನಿತ್ಯವೂ ಸ್ವಲ್ಪ ಪ್ರಮಾಣದಲ್ಲಿ ಸೇವಿಸಬೇಕು:

ಸೀತಾಫಲದ ವಿಶಿಷ್ಟವಾದ ಗುಣದಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯ೦ತ್ರಿಸಲು ಸಹಕರಿಸುತ್ತದೆ ಹಾಗೂ ಶರೀರದ ಮಾ೦ಸಖ೦ಡಗಳು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳುವ೦ತೆ ಮಾಡುವುದರ ಮೂಲಕ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.