ವಿಟಮಿನ್ಗಳ ಆಗರ, ಪೋಷಕಾಂಶಯುಕ್ತ ಪಾನೀಯ ಕಬ್ಬಿನ ಹಾಲು

0
1865

ತಾಜಾ ಕಬ್ಬಿನ ಹಾಲು ಸೇವನೆಯಿಂದ ದೇಹಕ್ಕೆ ಬೇಕಾದ ಪ್ರೋಟಿನ್, ವಿಟಮಿನ್,  ಕ್ಯಾಲ್ಸಿಯಂ, ಕಬ್ಬಿಣಾಂಶ, ಫಾಸ್ಪರಸ್ ನೈಸರ್ಗಿಕವಾಗಿ ಪಡೆಯಬಹುದು. ಇತರ ಪಾನೀಯಗಳಿಗೆ ಹೋಲಿಸಿದರೆ ಕಬ್ಬಿನ ಹಾಲಿನಲ್ಲಿ ಶರ್ಕರ ಪಿಷ್ಟ (ಕಾರ್ಬೊಹೈಡ್ರೇಟ್‌) ಮತ್ತು ಪ್ರೊಟೀನ್‌ಗಳು ಯಥೇಚ್ಚವಾಗಿವೆ. ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಸತು, ಪೊಟಾಶಿಯಂ, ವಿಟಮಿನ್‌ ಎ, ಬಿ ಮತ್ತು ಸಿ ಕೂಡ ಧಾರಾಳವಾಗಿದೆ

* ರಕ್ತ ಶುದ್ಧೀಕರಣಕ್ಕೆ ಹಿತಕಾರಿಯಾದ ಇದರ ಸೇವನೆಯಿಂದ ದೇಹಕಾಂತಿ ಹೆಚ್ಚುತ್ತದೆ ಮತ್ತು ಶುಂಠಿ ಲಿಂಬು ಬೆರೆಸಿದ ಈ ಹಾಲಿನ ಸೇವನೆ ಜೀರ್ಣಶಕ್ತಿಯನ್ನು ವೃದ್ಧಿಸಿ ಹೊಟ್ಟೆ ಉಬ್ಬರ ಇತ್ಯಾದಿಗಳನ್ನು ಹೋಗಲಾಡಿಸುತ್ತದೆ

*ತಾಜಾ ಕಬ್ಬಿನ ಹಾಲಿಗೆ ಎಳೆನೀರು. ಹಸಿ ಶುಂಠಿರಸ ಹಾಗೂ ನಿಂಬೆರಸ ಸೇರಿಸಿ ಸೇವಿಸಿದರೆ ಮೂತ್ರ ವಿಸರ್ಜನೆ ಚೆನ್ನಾಗಿ ಆಗುತ್ತದೆ.

*  ದೇಹಕ್ಕೆ ಅತಿ ಉಷ್ಣವಾದಾಗ ತಾಜಾತನದ ಈ ಹಾಲಿನ ಸೇವನೆಯಿಂದ ದೇಹವು ಕೂಡಲೇ ಸಮಸ್ಥಿತಿಗೆ ಬಂದು ಉರಿಶಮನವಾಗಿ ಚೈತನ್ಯ ವೃದ್ಧಿಸುವುದು.

* ಇದು ಪಿತ್ತನಾಶಕ ಮತ್ತು ಹೃದಯಕ್ಕೆ ಹಿತಕಾರಿ. ಕಡಿಮೆ ಕ್ಯಾಲರಿಯನ್ನು ಹೊಂದಿರುವ ಇದರ ಸೇವನೆ ಶರೀರದ ತೂಕದ ನಿಯಂತ್ರಣಕ್ಕೆ ಸಹಕಾರಿ ಮತ್ತು ರಕ್ತದಲ್ಲಿರುವ ಗ್ಲೂಕೋಸ್ ಮಟ್ಟ  ಸರಿ ಮಾಡಿ ದೇಹವನ್ನು ಆರೋಗ್ಯವಾಗಿಡುತ್ತದೆ.

* ಕಬ್ಬಿನ ಹಾಲಿಗೆ ಎಳನೀರು ಬೆರೆಸಿ ಸೇವಿಸುವುದರಿಂದ ಅಸಿಡಿಟಿ  ಹಾಗೂ ಅರಿಶಿಣ ಕಾಮಾಲೆ ರೋಗ ಕಡಿಮೆಯಾಗುತ್ತದೆ.

* ಆಯಾಸ ಪರಿಹಾರ ಮಾಡುವ ಈ ಹಾಲಿನ ಸೇವನೆಯಿಂದ ದೇಹದ ಒಳಗಿನ ಅಂಗಾಂಗಳಾದ ಉದರ, ಕಿಡ್ನಿ, ಹೃದಯ, ಮೆದುಳು ಹಾಗೂ  ಕಣ್ಣಿನ ಕಾರ್ಯಕ್ಷಮತೆಯು ಹೆಚ್ಚುತ್ತದೆ.

*‑ಇದರಲ್ಲಿರುವ ಆಲ್ಕಲೈನ್ ಎಂಬ ಅಂಶವು ಬ್ರೆಸ್ಟ್ ಮತ್ತು ಪ್ರೊಸ್ಟೇಟ್ ಕ್ಯಾನ್ಸರ್  ಕೋಶಗಳ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

*ಕಬ್ಬಿನ ಹಾಲಿನಲ್ಲಿ ವಿವಿಧ ರೀತಿಯ ಸಕ್ಕರೆಯ ಅಂಶಗಳಿವೆ. ರಕ್ತದಲ್ಲಿ ಗ್ಲುಕೋಸ್‌ ಪ್ರಮಾಣ ಹೆಚ್ಚಿಸುವ ಗ್ಲೈಸಿಮಿಕ್‌ ಎಂಬ ಅಂಶ ಇದರಲ್ಲಿ ಕಡಿಮೆ. ಹಾಗಾಗಿ ಇದನ್ನು ಮಧುಮೇಹ ಇರುವವರೂ ಸೇವಿಸಬಹುದು.

*‑ಆದಷ್ಟು ಲಿಂಬು, ಶುಂಠಿ ಬೆರೆಸಿದ ಮತ್ತು ಎಳನೀರು ಅಥವಾ ಶುದ್ಧ ನೀರು ಸೇರಿಸಿದ ಹಾಲಿನ ಸೇವನೆ ಉತ್ತಮ. ಇಲ್ಲವಾದರೆ ಕೆಲವರಿಗೆ ಜೀರ್ಣವಾಗಲಾರದು.