ಏಕೆ ಈ ಆತ್ಮಹತ್ಯೆ…. ಇರಲಿ ಆತ್ಮಸ್ಥರ್ಯ

0
748

Kannada News | Karnataka Achiecers

ಆತ್ಮಹತ್ಯೆಯೇ.. ಕಾರಣ ಏನಿದ್ದೀರಬಹುದು? ಆರ್ಥಿಕ, ವೈಯಕ್ತಿಕ, ನಿರುದ್ಯೋಗ, ಪ್ರೇಮ ವೈಫಲ್ಯ, ಜಿಗುಪ್ಸೆ ಮತ್ತೆ ಇನ್ನೂ ಏನೇನೋ..

ಸರ್ಕಾರದ ಮೇಲಸ್ತರದ ಹುದ್ದೆಯಲ್ಲಿದ್ದುಕೊಂಡು ಪ್ರೌಢವಾಸ್ಥೆ ದಾಟಿದ್ದು.. ಆತ್ಮಹತ್ಯೆ ಮಾಡಿಕೊಂಡರೇ ಹೇಗೆ.. ಏನು ಪ್ರಮುಖ ಕಾರಣ ಎಂದು ತೀರ್ಮಾನ ಮಾಡಬಹುದು?

source: userscontent2.emaze.com

ಇರಲಿ. ಪ್ರಸ್ತುತ ರಾಜ್ಯದಲ್ಲಿ ಸರ್ಕಾರಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳು ಸಾಮಾಜಿಕ ಸ್ತರದಲ್ಲಿ ಚಿಂತೆಗೀಡು ಮಾಡಿವೆ. ರೈತರ ಆತ್ಮಹತ್ಯೆಗೆ ಪ್ರಮುಖವಾಗಿ ಆರ್ಥಿಕ ಅಂಶ ಕಾರಣವಾಗಿದ್ದಿತು, ಹಾಗಾದರೆ ಈ ಆತ್ಮಹತ್ಯೆಗಳಿಗೆ ಆರ್ಥಿಕ ಕಾರಣಗಳಿವೆಯೆ? ಇಲ್ಲವೆಂದಾದಲ್ಲಿ ಮತ್ತಿನ್ನೇನು? ಎಂಬ ಪ್ರಶ್ನೆಕಾಡತೊಡಗಿವೆ. ಇವರಲ್ಲಿ ಹಣವಿದೆ, ಅಧಿಕಾರವಿದೆ, ತಕ್ಕಮಟ್ಟಿಗೆ ಆರೋಗ್ಯವೂ ಇದೆ, ಕಾರು, ಬಂಗಲೆ, ಇನ್ನಿತರೆ ಸಕಲ ಸವಲತ್ತುಗಳು ಎಲ್ಲವೂ ಇದೆ. ಹಾಗಿದ್ದಾಗ್ಯೂ ತಮ್ಮ ಜೀವನವನ್ನೇ ಕೊನೆಗಾಣಿಸಿಕೊಳ್ಳಬೇಕೆಂಬ ಘೋರ ನಿರ್ಧಾರಕ್ಕೆ ಬರಲು ಕಾರಣವೇನು?

ಯಾವ ಜೀವ ಸಂಕುಲವೂ ತಾನು ಸಾಯಬೇಕೆಂದು ಬಯಸುವುದಿಲ್ಲ, ಕೊನೆಯ ಕ್ಷಣದ ವರೆಗೂ ಅದು ಬದುಕಲು ಹೋರಾಡುತ್ತದೆ. ಮನುಷ್ಯ ಕೂಡ ತನ್ನ ಬದುಕಿಗಾಗಿ ಬೆಟ್ಟದಷ್ಟು ಆಸೆ ಇಟ್ಟುಕೊಳ್ಳುತ್ತಾನೆ. ನನ್ನನ್ನು ಬೇರೆಯವರು ಗುರುತಿಸಬೇಕು, ಗೌರವಿಸಬೇಕು ಎಂಬುದೇ ನಮ್ಮ ಬದುಕಿರುವ ಮೂಲ ಪ್ರೇರಣೆ ಎಂದು ಎರಿಕ್ ಬರ್ನ ಹೇಳುತ್ತಾನೆ. ನಾನು ಯಾರಿಗೂ ಬೇಡ ಎಂಬುದನ್ನು ವ್ಯಕ್ತಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ವ್ಯಕ್ತಿ ತಾನು ಯಾರಿಗೂ ಬೇಡನಾದವನು ಎಂದುಕೊಂಡಾಗ ಅವನ ಬದುಕು ಶೂನ್ಯವಾಗುತ್ತದೆ. ಆಗ ಅವನಲ್ಲಿ ಹತಾಶೆ ಮೂಡಿ ಜೀವನೋತ್ಸಾಹ ಕುಗ್ಗಿ ಸಾವನ್ನು ಅಪ್ಪಿಕೊಳ್ಳುತ್ತಾನೆ.

ಈಸಬೇಕು ಇದ್ದು ಜಯಿಸಬೇಕು

ಈಸಬೇಕು ಇದ್ದು ಜಯಿಸಬೇಕು ಎಂದು ಪುರಂದರ ದಾಸರು ಹಾಡಿದ್ದಾರೆ. ಮುಂದುವರೆದು ಮಾನವ ಜನ್ಮ ದೊಡ್ದದು, ಇದ ಹಾನಿಮಾಡಿಕೊಳ್ಳಬೇಡಿ ಎಂಬ ಸಂದೇಶವನ್ನೂ ಕೊಟ್ಟಿದ್ದಾರೆ. ಈ ಸಂದೇಶಗಳ ಹಿಂದೆ ಅವರು ಸಾವನ್ನು ಕುರಿತು ಧ್ಯಾನಿಸಿದ್ದಾರೆ. ದಾಸರು, ವಚನಕಾರರು, ತತ್ವಜ್ಞಾನಿಗಳು ಹಾಗೂ ಮನೋವಿಜ್ಞಾನಿಗಳನ್ನೂ ಒಳಗೊಂಡಂತೆ ಬಹಳಷ್ಟು ಜನ ಸಾವಿನ ಕುರಿತಾಗಿ ಶೋಧಿಸಿದ್ದಾರೆ.

ಅಷ್ಟಕ್ಕೂ ಈಗ ಸಾವಿನ ವಿಷಯವೇಕೆ ಎಂದು ಭಾವಿಸುತ್ತಿದ್ದಿರೇನು?

ಸಾವಿರಕ್ಕೂ ಮಿಗಿಲಾಗಿ ಅತ್ಮಹತ್ಯೆಗೆ ಒಳಗಾದ ನಮ್ಮ ರೈತರ ಬಗ್ಗೆ ದೊಡ್ಡ ದೊಡ್ಡ ಚರ್ಚೆಗಳಾಗಿದ್ದನ್ನು ಗಮನಿಸಿದ್ದೇವೆ. ಸಾಲಭಾದೆ ತಾಳಲಾರದೆ ಆತ್ಮಹತ್ಯೆಮಾಡಿಕೊಳ್ಳುತ್ತಿರುವ ಹಲವಾರು ರೈತರ ಸುದ್ದಿ ಪತ್ರಿಕೆಗಳ ಮುಖಪುಟದಲ್ಲಿ ದಿನನಿತ್ಯವೂ ನೋಡುತ್ತಿದ್ದೇವೆ. ಬೆಳೆಹಾನಿ, ಬೆಳೆಗೆ ತಕ್ಕ ಬೆಲೆ ಸಿಗದಿರುವುದು, ಬೆಳೆ ಕಾರಣಕ್ಕಾಗಿ ಮಾಡಿದ, ಸಾಲ ತೀರಿಸಲು ಸಾಧ್ಯವಾಗದಿರುವುದು, ಮಾಡಿದ ಸಾಲಕ್ಕಾಗಿ ಬಡ್ಡಿ ಕಟ್ಟಲಾಗದ ಸ್ಥಿತಿ, ಇದರಿಂದಾಗಿ ಆಗುತ್ತಿರುವ ಅಪಮಾನ, ಮಾನಸಿಕ ವ್ಯಥೆ ಇವೆಲ್ಲವೂ ರೈತರ ಆತ್ಮಹತ್ಯೆಯ ಹಿಂದೆ ಕಾಣುತ್ತಿರುವ ಕೆಲವು ಪ್ರಮುಖ ಕಾರಣಗಳು.

ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟಗಳು ಪ್ರಮುಖ ಕಾರಣ ಎಂದು ತೀರ್ಮಾನಮಾಡಿಕೊಳ್ಳಬಹುದೇ? ಎಂಬ ಚಿಂತನೆಯಲ್ಲಿದ್ದಾಗ, ಕರ್ನಾಟಕದಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳು, ಐ.ಎ.ಎಸ್ ಅಧಿಕಾರಿಗಳು, ಉನ್ನತ ಹಂತದಲ್ಲಿರುವ ಅಧಿಕಾರಿಗಳ ಆತ್ಮಹತ್ಯೆಯ ಸರಣಿ ಪ್ರಾರಂಭವಾಯಿತು. ರೈತರ ಆತ್ಮಹತ್ಯೆಗೆ ಪ್ರಮುಖವಾಗಿ ಆರ್ಥಿಕ ಅಂಶ ಕಾರಣವಾಗಿದ್ದಿತು, ಹಾಗಾದರೆ ಈ ಆತ್ಮಹತ್ಯೆಗಳಿಗೆ ಆರ್ಥಿಕ ಕಾರಣಗಳಿವೆಯೆ? ಇಲ್ಲವೆಂದಾದಲ್ಲಿ ಮತ್ತಿನ್ನೇನು? ಎಂಬ ಪ್ರಶ್ನೆಕಾಡತೊಡಗಿವೆ. ಇವರಲ್ಲಿ ಹಣವಿದೆ, ಅಧಿಕಾರವಿದೆ, ತಕ್ಕಮಟ್ಟಿಗೆ ಆರೋಗ್ಯವೂ ಇದೆ, ಕಾರು, ಬಂಗಲೇ, ಇನ್ನಿತರೆ ಸಕಲ ಸವಲತ್ತುಗಳು ಎಲ್ಲವೂ ಇದೆ. ಆಗಿದ್ದಾಗ್ಯೂ ತಮ್ಮ ಜೀವನವನ್ನೇ ಕೊನೆಗಾಣಿಸಿಕೊಳ್ಳಬೇಕೆಂಬ ಘೋರ ನಿರ್ಧಾರಕ್ಕೆ ಬರಲು ಕಾರಣವೇನು?

ಮಾನಸಿಕ ಕಾರಣಗಳು

ವ್ಯಕ್ತಿಯ ಪ್ರತಿಯೊಂದು ವರ್ತನೆಗಳ ಹಿಂದೆ ಮಾನಸಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕಾರಣಗಳಿರುತ್ತವೆ. ಆಗಿದ್ದಾಗ್ಯೂ ಇವೆಲ್ಲವನ್ನೂ ಗ್ರಹಿಸಿ ಅದಕ್ಕೊಂದು ಸಮಗ್ರತೆ ನೀಡಿ ಮುನ್ನಡೆಯುವಲ್ಲಿ ಮಾನಸಿಕ ಅಂಶಗಳ ಪ್ರಭಾವ ಪ್ರಮುಖವಾದುದು. ಅಧಿಕಾರಿಗಳೇಕೆ ಆತ್ಮಹತ್ಯೆಗೆ ಒಳಗಾಗುತ್ತಾರೆ ಎಂಬ ಬಗ್ಗೆ ನಡೆದ ಕೆಲವು ಸಂಶೋಧನೆಗಳೂ ಮನೋಸಾಮಾಜಿಕ ಅಂಶಗಳತ್ತ ಒತ್ತುಕೊಟ್ಟಿವೆ.