ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಸರ್ಕಾರದ ದುರುಪಯೋಗ; ಪಕ್ಷೇತರ ಅಭ್ಯರ್ಥಿ ಸುಮಲತಾ ಚುನಾವಣಾ ಆಯೋಗಕ್ಕೆ ದೂರು..

0
378

ಕರ್ನಾಟಕದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಲೋಕಸಭಾ ಚುನಾವಣಾ ಕ್ಷೇತ್ರ ಮಂಡ್ಯವೆಂದರೆ ತಪ್ಪಾಗಲಾರದು. ಏಕೆಂದರೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ನಡೆವೆ ಬಿರುಸಿನ ಪೈಪೋಟಿ ನಡೆದಿದ್ದು. ಸುಮಲತಾ ಬೆಂಬಲಕ್ಕೆ ಚಿತ್ರರಂಗದ ಅನೇಕ ಸ್ಟಾರ್-ಗಳು ಪ್ರಚಾರಕ್ಕೆ ಈಳಿದಿದ್ದಾರೆ. ಅದರಲ್ಲಿ ದರ್ಶನ್ ಯಶ್ ಅವರು ಅದಿಕೃತವಾಗಿ ಪ್ರಚಾರಕ್ಕೆ ನಿಂತಿದ್ದು ಮೈತ್ರಿ ಸರ್ಕಾರದಲ್ಲಿ ಮತ್ತಷ್ಟು ವಿರೋಧಕ್ಕೆ ಎಡೆಮಾಡಿದೆ. ಈ ಹಿನ್ನೆಲೆಯಾಗಿ ಈಗಾಗಲೇ ನಟರಿಗೆ ಎಚ್ಚರಿಕೆಗಳು ಕೇಳಿ ಬರುತ್ತಿದ್ದು, ಸುಮಲತಾ ಅವರು ಚುನಾವಣಾ ಆಯೋಗಕ್ಕೆ ಮಂಡ್ಯದಲ್ಲಿ ಸರ್ಕಾರದ ದುರುಪಯೋಗ ಹೆಚ್ಚಾಗ್ತಿದೆ ಎಂದು ದೂರು ಸಲ್ಲಿಸಿದ್ದಾರೆ.

Also read: ಹಿಂದಿನಿಂದ ಬಂದು ಚೂರಿ ಹಾಕುವುದು ಯುದ್ದವಲ್ಲ ಮುಂದೆ ಬಂದು ಚುನಾವಣೆ ಎದುರಿಸಲಿ; ಮಂಡ್ಯದ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಹೇಳಿಕೆ..

ಹೌದು ಮೈತ್ರಿ ಸರ್ಕಾರದ ನಾಯಕರ ಹೇಳಿಕೆ ಮತ್ತು ದರ್ಶನ್ ಮನೆಯ ಮೇಲೆ ಕಲ್ಲು ಬಿದ್ದ ವಿಷಯವಾಗಿ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಸರ್ಕಾರದ ದುರುಪಯೋಗ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿ ಮಂಡ್ಯದ ಚುನಾವಣೆ ಕ್ಷೇತ್ರಕ್ಕೆ ಆಯೋಗ ಹೆಚ್ಚಿನ ಅಧಿಕಾರಿಗಳನ್ನು ಹಾಕಬೇಕು. ಬೆದರಿಕೆಯ ಹೇಳಿಕೆಗಳು ಹೆಚ್ಚಾಗುತ್ತಿವೆ. ಇದರಿಂದ ಪ್ರಚಾರಕ್ಕೆ ತೊಂದರೆ ಆಗುತ್ತಿದೆ, ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದ್ದು, ಗುಪ್ತಚರ ಇಲಾಖೆ ಅಧಿಕಾರಿಗಳು ತಮ್ಮ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ. ಎಂದು ಆಯೋಗಕ್ಕೆ ದೂರು ನೀಡಿದ್ದಾರೆ.

ಇಂದು ನಗರದ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾ ಕಚೇರಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಸಿಎಂ ಕುಮಾರಸ್ವಾಮಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಆಡಳಿತ ಯಂತ್ರವನ್ನು ತಮ್ಮ ಪುತ್ರನ ಪರ ಹಾಗೂ ತಮ್ಮ ವಿರುದ್ದ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗಂಬೀರ ಆರೋಪ ಮಾಡಿದರು.

Also read: ಯಾರು ನರೇಂದ್ರ ಮೋದಿಯವರನ್ನು ವಿರೋಧಿಸುತ್ತಾರೆ, ಯಾರು ದೇಶದ ಉತ್ತಮ ಬದಲಾವಣೆಯನ್ನು ಮೆಚ್ಚುವುದಿಲ್ಲವೂ ಅವರೆಲ್ಲರೂ ದೇಶ ವಿರೋಧಿಗಳು : ತೇಜಸ್ವಿ ಸೂರ್ಯ, ಇದು ನಿಜ ಅನ್ಸುತ್ತಾ??

ತಮ್ಮ ಮನೆ ಬಳಿ ಗುಪ್ತಚರ ಇಲಾಖೆ ಪೊಲೀಸ್ ಅಧಿಕಾರಿಗಳನ್ನು ಬಿಡಲಾಗಿದೆ. ನಮಗೆ ಭದ್ರತೆ ಬಗ್ಗೆ ಆತಂಕ ಎದುರಾಗಿದೆ. ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬೆದರಿಕೆ ಮೂಲಕ ತಡೆಯೊಡ್ಡುವ ಕೆಲಸ ನಡೆಯುತ್ತಿದೆ. ಪೊಲೀಸರು ನಮ್ಮ ಚಲನವಲನಗಳನ್ನು ಗಮನಿಸಿ ಮಾಹಿತಿ ರವಾನಿಸುವ ಕೆಲಸ ಮಾಡುತ್ತಿದ್ದಾರೆ. ನಾವೇನು ಕ್ರಿಮಿನಲ್ ಗಳಂತೆ ಕಾಣಿಸುತ್ತಿದ್ದೇವೆಯೇ ಎಂದು ಪ್ರಶ್ನಿಸಿದರು. ಅಲ್ಲದೆ ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಇಂತಹ ಕೀಳುಮಟ್ಟದ ರಾಜಕಾರಣ ಮಾಡಬಾರದು ಎಂದು ಹೇಳಿಕೆ ನೀಡಿದ್ದಾರೆ.

ಗೃಹ ಸಚಿವ ರಾಜನಾಥ್ ಸಿಂಗ್‍ಗೆ ಟ್ವೀಟ್

ಸುಮಲತಾ ಅವರ ದೂರನ್ನು ಆಲಿಸಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‍ಗೆ ಟ್ವೀಟ್ ಮೂಲಕ ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಮನವಿ ಮಾಡಿಕೊಂಡಿದ್ದಾರೆ. ಲಿಂಬಾವಳಿ ಅವರ ಟ್ವೀಟ್ ಅನ್ನು ಸುಮಲತಾ ಅವರು ಮೆಚ್ಚಿ ಲೈಕ್ ಮಾಡಿದ್ದಾರೆ. ರಾಜನಾಥ್ ಸಿಂಗ್ ಅವರೇ ದಯಮಾಡಿ ಸುಮಲತಾ, ಯಶ್ ಹಾಗೂ ದರ್ಶನ್ ಅವರಿಗೆ ಭದ್ರತೆ ನೀಡಿ. ರಾಜ್ಯದಲ್ಲಿ ಮೈತ್ರಿ ಸರ್ಕಾರ ರಾಜಕೀಯ ಸರ್ವಾಧಿಕಾರ ಆಡಳಿತ ಮಾಡುತ್ತಿದೆ. ಜನರ ಸಂವಿಧಾನಾತ್ಮತ ಹಕ್ಕುಗಳು ಅಪಾಯದಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಹಲವು ಬಿಜೆಪಿ ನಾಯಕರು ಹಾಗೂ ಸುಮಲತಾ ಬೆಂಬಲಿಗರು ರೀ-ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.