ಹಿಂದಿನಿಂದ ಬಂದು ಚೂರಿ ಹಾಕುವುದು ಯುದ್ದವಲ್ಲ ಮುಂದೆ ಬಂದು ಚುನಾವಣೆ ಎದುರಿಸಲಿ; ಮಂಡ್ಯದ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಹೇಳಿಕೆ..

0
364

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಬಿರುಸಾಗಿದ್ದು, ಮಂಡ್ಯ ಕ್ಷೇತ್ರದಲ್ಲಿ ಚುನಾವಣಾ ಕಹಳೆ ಸದ್ದು ಜೋರಾಗಿದೆ. ಒಂದು ಕಡೆ ಮುಖ್ಯಮಂತ್ರಿ ಪುತ್ರ ನಿಖಿಲ್ ಪ್ರಚಾರ ಜೋರಾಗಿದ್ದು, ಇನೊಂದು ಕಡೆ ಸುಮಲತಾ ಪರ ಪ್ರಚಾರ ಹೆಚ್ಚು ಸದ್ದು ಮಾಡುತಿದೆ. ಅದರಂತೆ ಸುಮಲತಾ ಅವರು ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಮಂಡ್ಯದಲ್ಲಿ ಒಂದು ಶಕ್ತಿ ಪ್ರದರ್ಶನವಾಗಿದೆ. ಅಂಬಿ ಅಭಿಮಾನಿಗಳು ಮತ್ತು ದರ್ಶನ್, ಯಶ್ ಅಭಿಮಾನಿಗಳು ಸುಮಲತಾ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೂಡಿದ್ದು ಎದುರಿನ ಪಕ್ಷಕ್ಕೆ ನಡುಕು ಹುಟ್ಟಿಸಿದೆ ಎಂದು ಸುದ್ದಿಗಳು ಕೇಳಿಬರುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿದ ಸುಮಲತಾ ತಮ್ಮ ನಡೆಯ ಬಗ್ಗೆ ತಿಳಿಸಿದ್ದಾರೆ.

Also read: ಚುನಾವಣೆ ಪ್ರಚಾರಕ್ಕೆ ಇಳಿದ ನಟರ ಚಿತ್ರಗಳ ನಿಷೇಧಕ್ಕೆ ಆಗ್ರಹಿಸಿ ದೂರಿಗೆ ಸ್ಪಷ್ಟನೆ; ಯಶ್, ದರ್ಶನ್ ಸಿನಿಮಾ ಪ್ರಸಾರಕ್ಕೆ ನಿರ್ಬಂಧ ವಿಲ್ಲ??

ಹೌದು ಸುಮಲತಾ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಸೇರಿದ ಜನರ ಪರವಾಗಿ ಮತ್ತು ಅವರ ಬೆಂಬಲಕ್ಕೆ ನಿಂತ ದರ್ಶನ್, ಯಶ್ ಅವರ ವಿರುದ್ದ ಕೇಳಿಬರುತ್ತಿರುವ ಎಚ್ಚರಿಕೆಗಳ ಕುರಿತು ಮಾದ್ಯಮ ಸಂದರ್ಶನದಲ್ಲಿ ಮಾತನಾಡಿದ ಸುಮಲತಾ, ನಾನು ನಾಮಪತ್ರ ಸಲ್ಲಿಸುವಾಗ ಜನರು ಇದ್ದೆ ಇರುತ್ತಾರೆ ಅಂತ ಗೊತ್ತಿತ್ತು ಆದರೆ ಇಷ್ಟೊಂದು ಜನ ಸಾಗರ ಸೇರುತ್ತೆ ಅಂತ ನಾನು ನಿರೀಕ್ಷೆ ಮಾಡಿರಲಿಲ್ಲ, ಅದು ಅಂಬರೀಶ್ ಅವರ ಆಶಿರ್ವಾದ ಅನಿಸುತ್ತೆ. ಪ್ರತಿಸ್ಪರ್ಧಿಯ ವಿಚಾರದ ಬಗ್ಗೆ, ಅವರ ಮಾತುಗಳಿಗೆ ನಾನು ತಲೆಕೆಡಿಸಿಕೊಂಡಿಲ್ಲ. ನನ್ನ ದಾರಿ ನನಗೆ ನಾನು ಜನರು ಏನು ಹೇಳುತ್ತಾರೋ ಅದನ್ನ ವಿಚಾರ ಮಾಡುತ್ತೇನೆ.

Also read: ನಾವೇನು ಅಂಟಾರ್ಟಿಕಾ, ಪಾಕಿಸ್ತಾನದಿಂದ ಬಂದಿಲ್ಲ. ಮೈಸೂರಲ್ಲಿ ಹುಟ್ಟಿ ಮಂಡ್ಯವನ್ನು ದಾಟಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದೇವೆ; ಜೆ.ಡಿ.ಎಸ್.ಗೆ ತಿರುಗೇಟು ನೀಡಿದ ಯಶ್..

ಈಗಾಗಲೇ ಹಲವು ಸಿನಿಮಾ ನಟರು ಫೋನ್ ಮಾಡಿ ಪ್ರಚಾರಕ್ಕೆ ನಾವೇ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಅವರಿಗೆ ನಾನು ಯಾವತ್ತು ಬೇಡ ಅಂದಿಲ್ಲ, ಅವರು ಪ್ರೀತಿಯಿಂದ ಬಂದರೆ ಕರೆದುಕೊಂಡು ಹೋಗುತ್ತೇನೆ. ನಾನು ಈಗಾಗಲೇ ಹಲವು ರಾಜಕೀಯ ಹಿರಿಯ ನಾಯಕರನ್ನು ಬೇಟಿ ಮಾಡಿದ್ದೇನೆ, ಅದರಂತೆ ಮೊದಲನೇದಾಗಿ ಸಿದ್ದರಾಮಯ್ಯ ಅವರಿಗೆ ಬೇಟಿ ಮಾಡಿ ಮಂಡ್ಯದ ಜನರ ಅಭಿಪ್ರಾಯ ಏನಿದೆ ಎಂದು ಹೇಳಿ ಕಾಂಗ್ರೆಸ್ ನಿಂದ ಸಿಟ್ ಕೊಡಲು ಕೇಳಿದ್ದೆ, ಡಿಕೆ ಶಿವಕುಮಾರ್ ಅವರನ್ನು ಬೇಟಿ ಮಾಡಿದ್ದೇನೆ ಅಂಬರೀಶ್ ಅವರ ಪಕ್ಷವಾಗಿದರಿಂದ ಅವರಿಗೂ ನನ್ನ ಸ್ಪರ್ದೆಯ ಬಗ್ಗೆ ಹೇಳಿದ್ದೇನೆ. ಆದರೆ ಕಾಂಗ್ರೆಸ್ ಪಕ್ಷವೇ ಮಂಡ್ಯ ಬೇಡ ಎಂದು ಹೇಳಿದ ಮೇಲೆ ನಮಗೆ ಏನಿದೆ ಆದಕಾರಣಕ್ಕೆ ಪಕ್ಷೇತರವಾಗಿ ಸ್ಪರ್ಧೆಗೆ ನಿಂತಿದ್ದೇನೆ.

Also read: ಸುಮಲತಾ ಬೆಂಬಲಕ್ಕೆ ನಿಂತ ಸ್ಟಾರ್ ನಟರಿಬ್ಬರ ವಿರುದ್ದ ಚುನಾವಣಾ ಆಯೋಗಕೆ ದೂರು; ಜೆಡಿಎಸ್ ಶಾಸಕರಿಂದ ಯಶ್, ದರ್ಶನ್ ಗೆ ಎಚ್ಚರಿಕೆ??

ಜಿಟಿ ಮಾದ್ಯೇ ಗೌಡರಿಗೂ ಕೂಡ ಬೇಟಿ ಮಾಡಿದ್ದೇನೆ, ಅವರು ಕೂಡ ನೀನು ನಮ್ಮ ಮನೆಯ ಸೊಸೆ ನಿಂಗೆ ಕಂಡಿತವಾಗಿ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ. ಅವರು ಹಲವು ದಿನಗಳಿಂದ ಕಾಂಗ್ರೆಸ್ -ನಲ್ಲಿರುವ ಕಾರಣ ಅವರು ಏನು ನಿರ್ಧಾರ ಮಾಡುತ್ತೆ ಅವರಿಗೆ ಬಿಟ್ಟಿದ್ದು. ಮತ್ತು ನನ್ನ ಪರವಾಗಿಲ್ಲ ಬಂದ ಸ್ಟಾರ್ ನಟರಿಗೆ ಎಚ್ಚರಿಕೆಯ ಮಾತುಗಳು ಕೇಳಿಬರುತ್ತಿವೆ ಇವುಗಳು ಆರೋಗ್ಯಕರ ವಿಚಾರವಲ್ಲ, ಯಾರೇ ಆಗಲಿ ಹೆದರಿಕೆಗೆ ಬೆದರಿಕೆಗೆ ಬಗ್ಗೋದಕ್ಕೆ ಇದು ಇಂಡಿಯಾ ಮಂಡ್ಯಾ ತಾಲಿಬಾನ್ ಅಲ್ಲ, ಅದರಲ್ಲಿ ನಟರು ಹೆದರಲು ಸದ್ಯಾನಾ? ಅವರು ಜನರಿಂದ ಸ್ಟಾರ್ ಆಗಿದ್ದವರು ಜನರಿಗೆ ಕೋಪ ಬಂದರೆ ಅವರು ಏನ್ ಅಂತ ತೋರಿಸುತ್ತಾರೆ. ಅವರಿಗೆ ಇದು ಒಂದೇ ಚುನಾವಣಾ ಅಲ್ಲ
ಅವರಿಗೂ ಮುಂದೇನು ಚುನಾವಣೆಗಳು ಇವೆ ಎಂದು ಹೇಳಿದ್ದಾರೆ.

ನಮ್ಮ ಪ್ರಚಾರ ಕಾರ್ಯಕ್ರಮ ನಡೆಯುತ್ತಿರುವಾಗ ಟಿವಿ ಕೇಬಲ್-ಗಳನ್ನೂ ಕಟ್ ಮಾಡಿದರು ಅಂತ ಹಲವರು ಹೇಳಿದರು. ಇದೆಲ್ಲ ಹೆದರಿಕೆ ಇಂದ ಮಾಡಿದ ಕೆಲಸ ವೆಂದು ತಿಳಿಯುತ್ತೆ. ಇದು ಜನರಿಗೆ ಅರ್ತವಾಗುತ್ತೆ, ಜನರು ಎದುರಿನಿಂದ ನೋಡಿದ್ದಾರೆ ಅದೇ ಸಾಕು ಅದೇ ನಾನು ಗೆದ್ದಿದೇನೆ. ಯುದ್ದ ಮಾಡುವುದರಲ್ಲಿ ನಿಯಮವಿದೆ ಹಿಂದಿನಿಂದ ಚಾಕು ಹಾಕುವುದು ನಿಯಮವಲ್ಲ ಮುಂದೆ ಬಂದು ಎದುರಿಸಲು ಆಗದ ಜನರು ಹೀಗೆ ಮಾಡಿದ್ದಾರೆ. ಪ್ರಶ್ನೆಗಳನ್ನು ಕೇಳುವುದು ತಪ್ಪಲ್ಲ ಕೇಳಿ ಅದಕ್ಕೆ ನಾನು ಉತ್ತರ ನೀಡಿದ್ದೇನೆ.ದಬ್ಬಾಳಿಕೆ ಜನರ ಪ್ರತಿ ಗೆಲ್ಲೋಕೆ ಆಗುತ್ತ ಅಂತ ಹೇಳಿದ್ದಾರೆ.

Also read: ಈ ಹೊಸ ಸಮೀಕ್ಷೆ ನೋಡಿ ಇದರ ಪ್ರಕಾರ ಮೋದಿ ಮತ್ತೆ ಅಧಿಕಾರಕ್ಕೆ ಬರುವುದು ಪಕ್ಕಾ!! ನೀವು ಈ ಸಮೀಕ್ಷೆ ನಿಜವಾಗುತ್ತೆ ಅಂತೀರಾ??

ಕಾಂಗ್ರೆಸ್ ನಿಂದ ನಮಗೆ ಕೆಲವೊಂದು ಜನರು ಬೆಂಬಲ ಸೂಚಿಸುತ್ತಿದ್ದಾರೆ. ಕಾಂಗ್ರೆಸ್ ಗೆ ಮಂಡ್ಯ ಬೇಕಿಲ್ಲವಾದರೆ ಕಾಂಗ್ರೆಸ್ ಜನರಿಗೆ ನಾವು ಬೇಕಿದೆ ಆದಕಾರಣ ನಮ್ಮ ಪರವಾಗಿ ಪ್ರೀತಿ ತೋರಿಸುತ್ತಿದ್ದಾರೆ. ಅವರನ್ನು ಈಗ ಪಕ್ಷದಿಂದ ಹೊರಹಾಕಿದ್ದಾರೆ. ಅದೆಲ್ಲ ಏನು ಆದರು ಆವತ್ತು ಸೇರಿರುವ ಜನರ ಪ್ರೀತಿಗೆಯಿಂದ ನಾನು ಈಗಾಗಲೇ ಗೆದ್ದಿದೇನೆ. ಮಂಡ್ಯದ ಮಂಡ್ಯದ ಜನರು ನನಗೆ ಕೈ ಬಿಡುವುದಿಲ್ಲ. ನನಗೆ ಜನರ ಸೇವೆ ಮಾಡಲು ಅವಕಾಶ ಸಿಕ್ಕೆ ಸಿಗುತ್ತೆ ಅಂತ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.